ದೇಶ

ಪಂಜಾಬ್‍ಗೆ ತೆರಳಿದ ರಾಹುಲ್ ಗಾಂಧಿ

ದೇಶದ ಹಲವು ರಾಜ್ಯಗಳಲ್ಲಿ ಕೃಷಿಕರ ಸಮಸ್ಯೆಯನ್ನು ಆಲಿಸಲು ರಾಹುಲ್ ಗಾಂಧಿ ಪಣತೊಟ್ಟಿದ್ದು ಮಂಗಳವಾರ ಪಂಜಾಬ್‍ಗೆ ತೆರಳಿದ್ದಾರೆ...

ಪಂಜಾಬ್‍ಗೆ ತೆರಳಿದ ರಾಹುಲ್ ಗಾಂಧಿ
ರಾಹುಲ್ ಗಾಂಧಿ
Published On :

ಅಂಬಾಲ: ದೇಶದ ಹಲವು ರಾಜ್ಯಗಳಲ್ಲಿ ಕೃಷಿಕರ ಸಮಸ್ಯೆಯನ್ನು ಆಲಿಸಲು ರಾಹುಲ್ ಗಾಂಧಿ ಪಣತೊಟ್ಟಿದ್ದು ಮಂಗಳವಾರ ಪಂಜಾಬ್‍ಗೆ ತೆರಳಿದ್ದಾರೆ.

ಎನ್‍ಡಿಎ ಸರ್ಕಾರವಿರುವ ಪಂಜಾಬ್‍ನಲ್ಲಿ ರೈತರ ಸ್ಥಿತಿಯನ್ನು ಕಣ್ಣಾರೆ ಕಾಣುವ ನಿಟ್ಟಿನಲ್ಲಿ ಅವರು ರೈಲಿನ ಮೂಲಕ ತೆರಳಿದ್ದಾಗಿ ರಾಹುಲ್ ಗಾಂಧಿ ತಿಳಿಸಿದ್ದಾರೆ. ಪಂಜಾಬಿನಲ್ಲಿ ರೈತರ ಸ್ಥಿತಿ ಅತ್ಯಂತ ಹೀನಾಯವಾಗಿದೆ ಎಂದು ನಾನು ಕೇಳಲ್ಪಟ್ಟಿದೆ. ಅದನ್ನು ಕಣ್ಣಾರೆ ಕಾಣುವುದಕ್ಕಾಗಿ ಆಗಮಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ದೇಶದ ಜನತೆಗೆ ಧಾನ್ಯ, ಆಹಾರವನ್ನು ಒದಗಿಸುವ ರಾಜ್ಯದ ಕೃಷಿಕರ ಭೂಮಿಯನ್ನು ಕಿತ್ತುಕೊಳ್ಳುವುದು ಅನ್ಯಾಯ ಮತ್ತು ನಾನು ಅದರ ವಿರುದ್ಧ ಹೋರಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ. ಕೇಂದ್ರದ ಭೂಸ್ವಾಧೀನ ವಿಧೇಯಕದ ವಿರುದಟಛಿ ರೈತರ ಮನವೊಲಿಸಲು ರಾಹುಲ್ ಗಾಂಧಿ ಕಿಸಾನ್ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರೆ. ಅವರು ಏ.30 ರಂದು ಮಹಾರಾಷ್ಟ್ರ ರಾಜ್ಯದ ವಿದರ್ಭ ಪ್ರಾಂತ್ಯದ ಅಮರಾವತಿಗೆ 15 ಕಿ.ಮೀ. ಪಾದಯಾತ್ರೆ ನಡೆಸಲಿದ್ದಾರೆ. ರೈತರ ಸಮಸ್ಯೆಗಳನ್ನು ಆಲಿಸುವುದು ಅವರ ಪಾದಯಾತ್ರೆಯ ಮೂಲ ಉದ್ದೇಶ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.