ದೇಶ

ನೇಣು ಬಿಗಿದುಕೊಂಡು ರೈತ ಗಜೇಂದ್ರ ಸಿಂಗ್ ಸಾವು: ಮರಣೋತ್ತರ ವರದಿ

ರಾಜಸ್ತಾನ ರೈತ ಗಜೇಂದ್ರ ಸಿಂಗ್ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದು ಶವಪರೀಕ್ಷೆಯಲ್ಲಿ ದೃಢಪಟ್ಟಿದೆ.....

ನೇಣು ಬಿಗಿದುಕೊಂಡು ರೈತ ಗಜೇಂದ್ರ ಸಿಂಗ್ ಸಾವು: ಮರಣೋತ್ತರ ವರದಿ
ರೈತ ಗಜೇಂದ್ರ ಸಿಂಗ್
Published On :

ನವದೆಹಲಿ: ಆಮ್ ಆದ್ಮಿ ಪಕ್ಷದ ರ್ಯಾಲಿಯಲ್ಲಿ ರಾಜಸ್ತಾನ ರೈತ ಗಜೇಂದ್ರ ಸಿಂಗ್ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದು ಶವಪರೀಕ್ಷೆಯಲ್ಲಿ ದೃಢಪಟ್ಟಿದೆ.
ಮಂಗಳವಾರ ಸಂಜೆ ದೆಹಲಿ ಪೊಲೀಸರು ಗಜೇಂದ್ರ ಸಿಂಗ್ ಮರಣೋತ್ತರ ವರದಿ ಪಡೆದುಕೊಂಡಿದ್ದು, ವರದಿಯಲ್ಲಿನ ಅಂಶಗಳನ್ನು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ನೀಡಿರುವ ವೈದ್ಯರು ಗಜೇಂದ್ರ ಸಿಂಗ್ ದೇಹದಲ್ಲಿ 7 ಕಡೆ ತರಚಿದ ಗಾಯಗಳಿದ್ದುದ್ದನ್ನು ಉಲ್ಲೇಖಿಸಿದ್ದಾರೆ. ಆತ ಮರದ ಮೇಲಿಂದ ಕೆಳಗೆ ಆತನ ದೇಹದ 7 ಕಡೆ ತರಚಿದ ಗಾಯಗಳಾಗಿದ್ದವು. ಎಲ್ಲಿಯೂ ಮೂಳೆ ಮುರಿತ ಆಗಿರಲಿಲ್ಲ ಎಂದು ವರದಿಯಲ್ಲಿ ದಾಖಲಿಸಿದ್ದಾರೆ.
ದೆಹಲಿ ಪೋಲೀಸರು ಗಜೇಂದ್ರ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆ ಮುಂದುವರಿಸಿದ್ದಾರೆ. ಆಪ್ ರ್ಯಾಲಿಯಲ್ಲಿ ಕೆಲವರು ಗಜೇಂದ್ರ ಸಿಂಗ್ ಗೆ  ಆತ್ಮಹತ್ಯೆಗೆ ಪ್ರಚೋದನೆ  ನೀಡಿದ್ದರೆಂದು ಪ್ರತ್ಯಕ್ಷದರ್ಶಿಗಳು ವಿಚಾರಣೆ ವೇಳೆ ತಿಳಿಸಿದ್ದರು. ಏಪ್ರಿಲ್ 22 ರಂದು ದೆಹಲಿಯ ಜಂತರ್ ಮಂತರ್ ನಲ್ಲಿ  ಭೂಸ್ವಾಧೀನ ಮಸೂದೆ ವಿರೋಧಿಸಿ ಆಪ್ ಹಮ್ಮಿಕೊಂಡಿದ್ದ ರ್ಯಾಲಿಯಲ್ಲಿ ರೈತ ಗಜೇಂದ್ರ ಸಿಂಗ್ ಆತ್ನಹತ್ಯಗೆ ಶರಣಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.