ದೇಶ

ಭಾರತದಲ್ಲಿ ಭೂಕಂಪ ಊಹೆ ಅಸಾಧ್ಯ ಗಾಳಿಸುದ್ದಿ ನಂಬಬೇಡಿ

ನೇಪಾಳ ದುರಂತದ ಬೆನ್ನಲ್ಲೇ `ಶೀಘ್ರ ಭಾರತದಲ್ಲಿ ಅತ್ಯಂತ ಭೀಕರ ಭೂಕಂಪವೊಂದು ಸಂಭವಿಸಲಿದೆ' ಎಂಬ ಗಾಳಿಸುದ್ದಿಗಳು ಹರಿದಾಡಲಾರಂಭಿಸಿವೆ. ಇದು ಭಾರತೀಯರನ್ನು ಆತಂಕಕ್ಕೀಡುಮಾಡಿದೆ. ಆದರೆ, ಭೂಕಂಪನವನ್ನು ಅಧ್ಯಯನ...

ಭಾರತದಲ್ಲಿ ಭೂಕಂಪ ಊಹೆ ಅಸಾಧ್ಯ ಗಾಳಿಸುದ್ದಿ ನಂಬಬೇಡಿ
ನೇಪಾಳದಲ್ಲಿ ಪ್ರಬಲ ಭೂಕಂಪ ಉಂಟಾದ ಸಂದರ್ಭದಲ್ಲಿ ಬಾಯಿಬಿಟ್ಟಿ ಭೂಮಿ
Published On :

ನವದೆಹಲಿ: ನೇಪಾಳ ದುರಂತದ ಬೆನ್ನಲ್ಲೇ `ಶೀಘ್ರ ಭಾರತದಲ್ಲಿ ಅತ್ಯಂತ ಭೀಕರ ಭೂಕಂಪವೊಂದು ಸಂಭವಿಸಲಿದೆ' ಎಂಬ ಗಾಳಿಸುದ್ದಿಗಳು ಹರಿದಾಡಲಾರಂಭಿಸಿವೆ. ಇದು ಭಾರತೀಯರನ್ನು ಆತಂಕಕ್ಕೀಡುಮಾಡಿದೆ. ಆದರೆ, ಭೂಕಂಪನವನ್ನು ಅಧ್ಯಯನ ಮಾಡುವ ವಿಜ್ಞಾನಿಗಳು ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ.

ಭೂಕಂಪದಂತಹ ಪ್ರಾಕೃತಿಕ ವಿಕೋಪ ಯಾವಾಗ ಮತ್ತು ಎಷ್ಟು ತೀವ್ರತೆಯಲ್ಲಿ ಸಂಭವಿಸುತ್ತದೆ ಎಂಬ ಬಗ್ಗೆ ಭವಿಷ್ಯ ನುಡಿಯುವ ವಿಧಾನ ಸದ್ಯಕ್ಕೆ ಯಾರ ಬಳಿಯೂ ಇಲ್ಲ. ಭೂಕಂಪದ ಸಾಧ್ಯಾಸಾಧ್ಯತೆಯನ್ನು ಊಹಿಸಬಹುದೇ ವಿನಾ ಸ್ಪಷ್ಟ ದಿನಾಂಕವನ್ನು ಹೇಳಲು ಸಾಧ್ಯವೇ ಇಲ್ಲ. ಇದು ಕೇವಲ ಜನರನ್ನು ಮೂರ್ಖರನ್ನಾಗಿಸುವ ತಂತ್ರ ಎಂದು ಯುನೈಟೆಡ್ ಸ್ಟೇಟ್ಸ್ ಜಿಯಾಲಜಿಕಲ್ ಸರ್ವೇ(ಯುಎಸ್‍ಜಿಎಸ್) ಹೇಳಿದೆ.

ಊಹಿಸಲು ಸಾಧ್ಯವೇ ಇಲ್ಲ:

ಭೂಕಂಪದ ಬಗ್ಗೆ ಮೊದಲೇ ಅರಿಯುವಂತಹ ವಿಧಾನಗಳನ್ನು ಕಂಡುಹಿಡಿಯಲು ಬಹಳಷ್ಟು ಪ್ರಯತ್ನಗಳು ನಡೆದಿವೆ. ಆದರೆ ಅವು ಯಶಸ್ವಿಯಾಗಿಲ್ಲ ಎಂದಿದ್ದಾರೆ ವಿಜ್ಞಾನಿಗಳು. ಯುರೇಷಿಯನ್ ಮತ್ತು ಇಂಡಿಯನ್ ಫಲಕಗಳು ಸಂಧಿಸುವ ಹಿಮಾಲಯದಂತಹ ಸಕ್ರಿಯ ಭೂ ಪ್ರದೇಶಗಳಲ್ಲಿ ಪ್ರಬಲ ಭೂಕಂಪಗಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ, ಅದು ಯಾವಾಗ, ಹೇಗೆ, ಎಷ್ಟು ತೀವ್ರತೆಯಲ್ಲಿ ಸಂಭವಿಸಬಹುದು ಎಂಬುದನ್ನು ಹೇಳಲಾಗದು. ಹಾಗಾಗಿ ಭಾರತದಲ್ಲಿ ಭಯಾನಕ ಭೂಕಂಪ ಆಗಲಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಯನ್ನು ಯಾರೂ ನಂಬಬೇಕಾಗಿಲ್ಲ ಎಂದೂ ವಿಜ್ಞಾನಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.