ನೇಪಾಳ ಭೂಕಂಪ: ಸಾವಿನ ಸಂಖ್ಯೆ 3,617ಕ್ಕೆ ಏರಿಕೆ, ಕಣಿವೆ ಗ್ರಾಮಗಳನ್ನು ತಲುಪಲು ರಕ್ಷಣಾ ಸಿಬ್ಬಂದಿ ಹರಸಾಹಸ
ಭೀಕರ ದುರಂತಕ್ಕೆ ಸಾಕ್ಷಿಯಾದ ನೇಪಾಳ ಈಗ ಅಕ್ಷರಶಃ ರುದ್ರಭೂಮಿಯಾಗಿದೆ. ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದು, ಸೋಮವಾರ 3,617ಕ್ಕೆ ಏರಿಕೆಯಾಗಿದೆ ಎಂದು ನೇಪಾಳ...

ನವದೆಹಲಿ: ಭೀಕರ ದುರಂತಕ್ಕೆ ಸಾಕ್ಷಿಯಾದ ನೇಪಾಳ ಈಗ ಅಕ್ಷರಶಃ ರುದ್ರಭೂಮಿಯಾಗಿದೆ. ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದು, ಸೋಮವಾರ 3,617ಕ್ಕೆ ಏರಿಕೆಯಾಗಿದೆ ಎಂದು ನೇಪಾಳ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದ್ದರೂ, ರಕ್ಷಣಾ ಸಿಬ್ಬಂದಿ ಇನ್ನೂ ಕೆಲವು ಕಣಿವೆ ಗ್ರಾಮಗಳನ್ನು ತಲುಪಲು ಸಾಧ್ಯವಾಗಿಲ್ಲ.
ಕಣ್ಣು ಹಾಯಿಸದಲ್ಲೆಲ್ಲಾ ಬಿಳಿ ಬಟ್ಟೆ ಮುಚ್ಚಿದ ಮೃತದೇಹಗಳು, ಕುಸಿದು ಬಿದ್ದಿರುವ ಕಟ್ಟಡಗಳು, ಗಾಯಗೊಂಡವರ ಆಕ್ರಂದನ, ತಮ್ಮವರು ಬದುಕಿರಬಹುದೇ ಎಂಬ ನಿರೀಕ್ಷೆಯಲ್ಲಿರುವ ಕಣ್ಣುಗಳು, ಅವಶೇಷಗಳ ಕೊರೆಯುವವ ಕೈಗಳು ಕಾಣುತ್ತಿವೆ...
ಭೀಕರ ದುರಂತದ ಬಳಿಕ ಗಾಯಕ್ಕೆ ಉಪ್ಪು ಸವರಿದಂತೆ ಅಲ್ಲಿ ಮತ್ತೆ ಮತ್ತೆ ಭೂಮಿ ಕಂಪಿಸುತ್ತಿದೆ. ಶನಿವಾರ ಸಂಭವಿಸಿದ ಮಹಾಭೂಕಂಪದ ನಂತರ ಭಾನುವಾರ ಮತ್ತೆ ಮೂರು ಪ್ರಬಲ ಕಂಪನಗಳು ಸಂಭವಿಸಿದೆ.
6 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಅವಶೇಷಗಡಿ ಸಿಲುಕಿದವರೆಷ್ಟೆಂದು ಲೆಕ್ಕಕ್ಕೇ ಸಿಗುತ್ತಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


