ನೇಪಾಳ ಭೂಕಂಪ: ಸುಮಾರು 1050 ಭಾರತೀಯರ ರಕ್ಷಣೆ
ಪ್ರಬಲ ಭೂಕಂಪಕ್ಕೆ ನಲುಗಿರುವ ನೇಪಾಳದಲ್ಲಿ ಸಿಲುಕಿ ಸಂಕಷ್ಟಕ್ಕೊಳಗಾಗಿರುವ ಭಾರತೀಯರ ಪೈಕಿ ಸುಮಾರು 1050 ಭಾರತೀಯರನ್ನು ರಕ್ಷಿಸಲಾಗಿದೆ...

ನವದೆಹಲಿ: ಪ್ರಬಲ ಭೂಕಂಪಕ್ಕೆ ನಲುಗಿರುವ ನೇಪಾಳದಲ್ಲಿ ಸಿಲುಕಿ ಸಂಕಷ್ಟಕ್ಕೊಳಗಾಗಿರುವ ಭಾರತೀಯರ ಪೈಕಿ ಸುಮಾರು 1050 ಭಾರತೀಯರನ್ನು ರಕ್ಷಿಸಲಾಗಿದೆ.
ನೇಪಾಳದಲ್ಲಿ ಶನಿವಾರ ಸಂಭವಿಸಿದ ಪ್ರಭಲ ಭೂಕಂಪನದಿಂದಾಗಿ ಪ್ರವಾಸ ಹಾಗೂ ಇನ್ನಿತರ ಕೆಲಸದ ಮೇಲೆ ನೇಪಾಳಕ್ಕೆ ತೆರಳಿದ್ದ ಭಾರತೀಯರ ಪೈಕಿ 1050 ಮಂದಿಯನ್ನು ಭಾರತೀಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ರಕ್ಷಿಸಿದೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಭಾರತೀಯ ವಾಯು ಸೇನೆ ಹರಸಾಹಸ ಪಡುತ್ತಿದೆ. ಒಂದೆಡೆ ಮತ್ತೆ ಮತ್ತೆ ಭೂಕಂಪ ಸಂಭವಿಸುತ್ತಿದೆ. ಮತ್ತೊಂದೆಡೆ ಹವಮಾನ ವೈಪರಿತ್ಯದ ನಡುವೆಯೂ ಭಾರತೀಯ ರಕ್ಷಣಾ ಪಡೆ ಯಶಸ್ವಿ ಕಾರ್ಯಾಚರಣೆ ನಡೆಸುತ್ತಿದೆ. ವಾಯುಪಡೆಗೆ ಸೇರಿದ 6 ವಿಮಾನಗಳ ಮೂಲಕ 1050 ಮಂದಿಯನ್ನು ರಕ್ಷಿಸಿ ಭಾರತಕ್ಕೆ ಕರೆತರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


