ಭಾರತ ಅಭಿವೃದ್ಧಿ ಸಹಿಸದ ಚೀನಾದಿಂದ ಪಾಕ್ ಓಲೈಕೆ
ಭಾರತ ಆರ್ಥಿಕವಾಗಿ ಹಾಗೂ ವಿಶ್ವ ಸಮುದಾಯದೆದುರು ಬಲಿಷ್ಠಗೊಳ್ಳುತ್ತಿರುವಾಗಲೇ ನೆರೆಯ ರಾಷ್ಟ್ರಗಳೆರಡು...

ಇಸ್ಲಾಮಾಬಾದ್: ಭಾರತ ಆರ್ಥಿಕವಾಗಿ ಹಾಗೂ ವಿಶ್ವ ಸಮುದಾಯದೆದುರು ಬಲಿಷ್ಠಗೊಳ್ಳುತ್ತಿರುವಾಗಲೇ ನೆರೆಯ ರಾಷ್ಟ್ರಗಳೆರಡು ಸದ್ದಿಲ್ಲದೇ ತಮ್ಮ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುತ್ತಿವೆ.
ಭಾರತದ ಇತ್ತೀಚಿನ ಅಭಿವೃದ್ಧಿ ನೆರೆಯ ಚೀನಾಕ್ಕೆ ನುಂಗಲಾರದ ತುತ್ತಾಗಿದ್ದು, ಅದು ಸಹಜವಾಗಿಯೇ ತನ್ನ ಹಳೆಯ ಮಿತ್ರ ಹಾಗೂ ಭಾರತದ ಪಾರಂಪರಿಕ ಶತ್ರು ಪಾಕಿಸ್ತಾನವನ್ನು ಓಲೈಸಲು ಮುಂದಾಗಿದೆ. ಚೀನಾ ಪ್ರಧಾನಿ ಕ್ಸಿ ಜಿನ್‍ಪಿಂಗ್ ಪಾಕಿಸ್ತಾನದಂಥ ಒಳ್ಳೆಯ ದೇಶ ಇನ್ನೊಂದಿಲ್ಲ ಎಂಬಂತೆ ಹಾಡಿ ಹೊಗಳಿರುವುದು ಇದನ್ನು ಪುಷ್ಟೀಕರಿಸುತ್ತದೆ. ಪಾಕಿಸ್ತಾನದ ಭಯೋತ್ಪಾದಕ ಚಟುವಟಿಕೆಗಳ ಭಾರತ ಬಗ್ಗೆ ಆತಂಕಗೊಂಡಿರುವಾಗಲೇ ಚೀನಾ ತನ್ನ ನೆಲದಲ್ಲಿನ ಉಗ್ರ ಕೃತ್ಯಗಳ ನಿಯಂತ್ರಣದಲ್ಲಿ ಪಾಕ್‍ನ ಸಹಕಾರವನ್ನು ಶ್ಲಾಗಿಸಿರುವುದು ಇನ್ನಷ್ಟು ಸೋಜಿಗದ ಸಂಗತಿ.
ಎರಡು ದಿನಗಳ ಪಾಕ್ ಪ್ರವಾಸ ಮುಗಿಸಿರುವ ಜಿನ್ ಪಿಂಗ್ ತಮ್ಮ ಮಾತುಕತೆಗಳಲ್ಲಿ ಮತ್ತು ಭಾಷಣಗಳಲ್ಲಿ ಪಾಕಿಸ್ತಾನವನ್ನು ಶಾಂತಿಪ್ರಿಯ ಎಂಬಂತೆ ಬಣ್ಣಿಸಿರುವುದನ್ನು ಮಹತ್ವದ ಆರ್ಥಿಕ ಕಾರಿಡಾರ್ ಒಪ್ಪಂದಗಳಿಗೆ ಸಹಿ ಮಾಡಿರುವುದನ್ನು ಗಮನಿಸಿದರೆ ಇದು ಭಾರತದ ವಿರುದ್ಧ ತಾವು ಒಗ್ಗೂಡಿ ನಿಲ್ಲುತ್ತಿದ್ದೇವೆಂಬ ಪರೋಕ್ಷ ಸಂದೇಶ ಎನ್ನುವುದರಲ್ಲಿ ಅನುಮಾನಗಳಿಲ್ಲ.
ಕಳೆದ ವಾರವಷ್ಟೇ 2008ರ ಮುಂಬೈ ದಾಳಿಯ ಪ್ರಮುಖ ರೂವಾರಿ ಉಗ್ರ ಲಖ್ವಿಯನ್ನು ಬಿಡುಗಡೆ ಮಾಡುವ ಮೂಲಕ ತನ್ನ ಉಗ್ರವಾದವನ್ನು ಸಮರ್ಥಿಸಿಕೊಂಡಿರುವ ಪಾಕ್, ಭಾರತದೊಂದಿಗಿನ ತನ್ನ ಸಂಬಂಧ ವನ್ನು ಉತ್ತಮ ಪಡಿಸಿಕೊಳ್ಳುವ ಅವಕಾಶವನ್ನೂ ಹಾಳುಗೆಡವಿಕೊಂಡಿತ್ತು. ಇದನ್ನೆಲ್ಲ ಗಮನಿಸಿಯೂ ಚೀನಾ ಪ್ರಧಾನಿ ಪಾಕಿಸ್ತಾನದ ನೀತಿಗಳನ್ನು ಹಾಡಿಹೊಗಳುತ್ತಿರುವುದರ ಹಿಂದಿನ ಕಾರಣಗಳು ಸ್ಪಷ್ಟವಿದೆ.
ಜಿನ್‍ಪಿಂಗ್ ಆಣಿಮುತ್ತು!
ಪಾಕ್‍ನ ಸೋದರರಿಗೆ ನೂರಾಮೂವತ್ತು ಕೋಟಿ ಚೀನೀಯರ ಪರವಾಗಿ ಶುಭಾಶಯ ಕೋರುತ್ತೇನೆ. ಪಾಕಿಸ್ತಾನಕ್ಕೆ ಇದು ನನ್ನ ಮೊದಲ ಭೇಟಿ. ಆದರೆ ನನಗೆ ಪಾಕ್ ಚಿರಪರಿಚಿತ.
-ಉಭಯದೇಶಗಳು ಒಂದೇ ರೀತಿಯ ಕಷ್ಟ ಅನುಭವಿಸಿವೆ. ಒಬ್ಬರ ಕಷ್ಟವನ್ನು ಇನ್ನೊಬ್ಬರು ಬಲ್ಲೆವು.
-ಪಾಕ್‍ನ ಭಯೋತ್ಪಾದಕ ನಿಗ್ರಹ ಆಶಯ, ಪ್ರತ್ಯೇಕತಾವಾದಿಗಳ ದಮನ, ಇವೆಲ್ಲವೂ ಶ್ಲಾಘನಾರ್ಹ .
-ಉಭಯ ದೇಶಗಳ ರಕ್ಷಣೆ ಮತ್ತು ಆರ್ಥಿಕ ಸಹಕಾರಕ್ಕೆ ಚೀನಾ ಮತ್ತು ಪಾಕ್ ಬದ್ಧ.
-ಪಾಕ್ ಹಲವು ವರ್ಷಗಳಿಂದ ಸ್ವತಃ ತುಂಬ ಕಷ್ಟಗಳನ್ನು ಎದುರಿಸಿದೆ. ಆದರೂ ಪಶ್ಚಿಮ ಚೀನಾ ಗಡಿಯ ಸುಭದ್ರತೆಗೆ ಸಹಕಾರ ನೀಡಿದೆ. ಈ ಉಪಕಾರವನ್ನು ಎಂದಿಗೂ ಚೀನಾ ಮರೆಯೋದಿಲ್ಲ.
-ಉಗ್ರರನ್ನು ಮಟ್ಟ ಹಾಕಲು ಪಾಕ್ ಯೋಧರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಇನ್ನು ಚೀನಾ ಕೂಡ ಪಾಕ್ ಜೊತೆಗಿರುತ್ತದೆ. ಬರುವ ದಿನಗಳಲ್ಲಿ ನಮ್ಮ ರಕ್ಷಣಾ ಪಡೆ ಇನ್ನಷ್ಟು ಬಲವಾಗಲಿದೆ.
-ಪಾಕಿಸ್ತಾನ ಯಾವತ್ತಿಗೂ ಚೀನಾದ ನಂಬಿಕಸ್ಥ ಗೆಳೆಯ. ಈ ದೇಶವನ್ನು ಆರ್ಥಿಕವಾಗಿ ಸದೃಢಗೊಳಿಸಲು ಚೀನಾ ಬದ್ಧ.
-ದಶಕಗಳಿಂದ ಪಾಕಿಸ್ತಾನ ಚೀನಾಗೆ ತನ್ನ ಸಹಕಾರ ನೀಡುತ್ತಲೇ ಬಂದಿದೆ. ಇನ್ನು ಮುಂದೆ ಆ ಸ್ನೇಹ ಇನ್ನಷ್ಟು ಗಟ್ಟಿಯಾಗಲಿದೆ
-ಆರ್ಥಿಕ ಕಾರಿಡಾರ್ ಯೋಜನೆ ಪಾಕಿಸ್ತಾನಕ್ಕೆ ಲಾಭದಾಯಕ. ಭಾರತ, ಬಾಂಗ್ಲಾ ಹಾಗೂ ಮ್ಯಾನ್ಮರ್‍ಗಳನ್ನೂ ಸೇರಿಸುವ ಕಾರಿಡಾರ್ ಯೋಜನೆ ಶೀಘ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


