ನಕಲಿ ನೋಟು: ಪಾಕ್ ಕೈವಾಡ ಸ್ಪಷ್ಟ
ಭಾರತದ ಆರ್ಥಿಕತೆಗೆ ಹೊಡೆತ ನೀಡಲು ಪಾಕಿಸ್ತಾನ ಇನ್ನಿಲ್ಲದ ಪ್ರಯತ್ನ ನಡೆಸುತ್ತಿರುವುದು ಸ್ಪಷ್ಟ ವಾಗಿದೆ..

ಢಾಕಾ: ಭಾರತದ ಆರ್ಥಿಕತೆಗೆ ಹೊಡೆತ ನೀಡಲು ಪಾಕಿಸ್ತಾನ ಇನ್ನಿಲ್ಲದ ಪ್ರಯತ್ನ ನಡೆಸುತ್ತಿರುವುದು ಸ್ಪಷ್ಟ ವಾಗಿದೆ.
ಭಾರತದ ನಕಲಿ ನೋಟುಗಳ ಮುದ್ರಣದಲ್ಲಿ ಪಾಕಿಸ್ತಾನದ ಕೈವಾಡವಿರುವ ಅಂಶ ಬೆಳಕಿಗೆ ಬಂದಿದೆ. ಬಾಂಗ್ಲಾದ ಢಾಕಾ ವಿಮಾನ ನಿಲ್ದಾಣದಲ್ಲಿ ಮೊಹ ಮ್ಮದ್ ಸಜ್ಜದ್ ಹುಸೈನ್ ಎಂಬಾತ ಸೆರೆಸಿಕ್ಕಿದ್ದು, ಈತ ನಿಂದ ರು.2.5 ಕೋಟಿ ಮೌಲ್ಯದ ಭಾರತೀಯ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ.
ಹುಸೈನ್ ಪಾಕಿಸ್ತಾನದ ಕರಾಚಿಯಿಂದ ದೋಹಾಗೆ ತೆರಳಿ, ಅಲ್ಲಿಂದ ಢಾಕಾಗೆ ವಿಮಾನ ಹತ್ತಿದ್ದ ಎಂಬ ವಿಚಾರ ಬಾಂಗ್ಲಾ ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ. ಪಾಕಿಸ್ತಾನ ಹೈ ಕಮಿಷನ್ ಈತ ನಿಗೆ ಹಲವು ಬಾರಿ ವೀಸಾ ನೀಡಿರುವುದೂ ಗೊತ್ತಾಗಿದೆ. ನಕಲಿ ನೋಟುಗಳನ್ನು ಬಾಂಗ್ಲಾ ಮತ್ತು ನೇಪಾಳದ ಮೂಲಕವೇ ಭಾರತಕ್ಕೆ ರವಾನಿಸಲಾಗುತ್ತದೆ. ಸ್ಮಗ್ಲರ್‍ಗಳು ಸೂಕ್ತ ಸಮಯಕ್ಕಾಗಿ ಕಾದು, ಭಾರತ ಪ್ರವೇಶಿಸಿ ವಿವಿಧ ನಗರಗಳಲ್ಲಿರುವ ಏಜೆಂಟ್‍ಗಳಿಗೆ ನಕಲಿ ನೋಟುಗಳನ್ನು ವಿತರಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


