ದೇಶ

ಜಪಾನ್ ನಲ್ಲಿ ಪ್ರಬಲ ಭೂಕಂಪ: ಸುನಾಮಿ ಭೀತಿಯಲ್ಲಿ ಸ್ಥಳೀಯರು

ಅಭಿವೃದ್ಧಿಶೀಲ ರಾಷ್ಟ್ರ ಎನಿಸಿಕೊಂಡಿರುವ ದಕ್ಷಿಣ ಜಪಾನ್ ನ ತೈವಾನ್ ನಗರದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಸಂಭವಿಸುವ ಎಚ್ಚರಿಕೆ ಸಂದೇಶವನ್ನು ನೀಡಲಾಗಿದೆ...

ಜಪಾನ್ ನಲ್ಲಿ ಪ್ರಬಲ ಭೂಕಂಪ: ಸುನಾಮಿ ಭೀತಿಯಲ್ಲಿ ಸ್ಥಳೀಯರು
ಜಪಾನ್ ನಲ್ಲಿ ಪ್ರಬಲ ಭೂಕಂಪ: ಸುನಾಮಿ ಭೀತಿಯಲ್ಲಿ ಸ್ಥಳೀಯರು
Published On :

ಟೋಕಿಯೋ: ಅಭಿವೃದ್ಧಿಶೀಲ ರಾಷ್ಟ್ರ ಎನಿಸಿಕೊಂಡಿರುವ ದಕ್ಷಿಣ ಜಪಾನ್ ನ ತೈವಾನ್ ನಗರದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಸಂಭವಿಸುವ ಎಚ್ಚರಿಕೆ ಸಂದೇಶವನ್ನು ನೀಡಲಾಗಿದೆ.

ತೈವಾನ್ ನಗರದಲ್ಲಿ ಆಗಿರುವ ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 6.6 ಪರಿಮಾಣ ದಾಖಲಾಗಿದೆ. ಜಪಾನ್ ಹಲವೆಡೆ ಭೂಮಿ ಕಂಪಿಸಿದ್ದು, ಅಲ್ಲಿನ ಜನತೆ ಭಯಭೀತರಾಗಿದ್ದಾರೆ. ಭೂಕಂಪದಿಂದಾಗಿ ಈ ವರೆಗೂ ಯಾವುದೇ ಸಾವುನೋವುಗಳಾಗಿರುವ ಕುರಿತಂತೆ ವರದಿಯಾಗಿಲ್ಲ. ಸಮುದ್ರದ ಅಲೆಗಳು ಅಪಾಯದ ಮಟ್ಟ ಮೀರಿದ್ದು, ಸ್ಥಳೀಯ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸ್ಥಳೀಯರನ್ನು ಸಾಧ್ಯವಾದಷ್ಟು ದೂರ ಹೋಗವಂತೆ ಸೂಚನೆ ನೀಡಲಾಗಿದೆ.

ವರ್ಷದಲ್ಲಿ 2-3 ಸಾರಿ ಭೂಕಂಪ ಜಪಾನ್ ದೇಶದಲ್ಲಿ ಸಂಭವಿಸುತ್ತಲೇ ಇರುತ್ತದೆ. ಭೂಕಂಪ ಜಪಾನ್ ಗೆ ಹೊಸದಲ್ಲ. ಹಾಗಾಗಿ ಅಲ್ಲಿನ ಅಧಿಕಾರಿಗಳು ಭೂಕಂಪ ಎದುರಿಸಲು ಮೊದಲೇ ಸಾಕಷ್ಟು ಮುಂಜಾಗ್ರತೆಯ ಕ್ರಮಗಳನ್ನು ಕೈಗೊಂಡಿರುತ್ತಾರೆ. ಆದರೂ ಸುನಾಮಿ ಭೀತಿ ಇರುವುದರಿಂದ ಅಲ್ಲಿನ ಸಮುದ್ರದ ಅಲೆಗಳು 1 ಮೀಟರ್ ಎತ್ತರಕ್ಕೆ ಏಳಬಹುದು ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.