ಆ್ಯಸಿಡ್ ದಾಳಿ ಸಂತ್ರಸ್ತೆಯೊಂದಿಗೆ ಸಪ್ತಪದಿ ತುಳಿದ ಎಂಜಿನಿಯರ್
ಬಾಳ ಸಂಗಾತಿಯಾಗಿ ಬರುವ ಹುಡುಗಿ ಸುಂದರವಾಗಿರಬೇಕು, ಆಗಿರಬೇಕು, ಈಗಿರಬೇಕು ಅಂತ. ಆದರೆ ಇಲ್ಲೊಬ್ಬ ವಿದ್ಯಾವಂತ ಯುವಕ ಆ್ಯಸಿಡ್ ದಾಳಿಗೆ ಒಳಗಾಗಿದ್ದ

ಮುಂಬೈ: ಬಾಳ ಸಂಗಾತಿಯಾಗಿ ಬರುವ ಹುಡುಗಿ ಸುಂದರವಾಗಿರಬೇಕು, ಆಗಿರಬೇಕು, ಈಗಿರಬೇಕು ಅಂತ. ಆದರೆ ಇಲ್ಲೊಬ್ಬ ವಿದ್ಯಾವಂತ ಯುವಕ ಆ್ಯಸಿಡ್ ದಾಳಿಗೆ ಒಳಗಾಗಿದ್ದ ಯುವತಿಯೊಬ್ಬಳನ್ನು ವರಿಸುವ ಮೂಲಕ ಆದರ್ಶ ಮೆರೆದಿದ್ದಾನೆ.
ಹದಿಮೂರು ವರ್ಷಗಳ ಹಿಂದೆ ಯುವಕರಿಂದ ಆ್ಯಸಿಡ್ ದಾಳಿಗೆ ತುತ್ತಾಗಿ ತನ್ನ ಜೀವನವನ್ನೇ ಕಳೆದುಕೊಂಡಿದ್ದ ಸೋನಾಲಿ ಮುಖರ್ಜಿ ಫೇಸ್‌ಬುಕ್ ನಲ್ಲಿ ಫ್ರೇಂಡ್ ಆಗಿದ್ದ ಒಡಿಶಾದ ಭೂಷಣ್ ಸ್ಟೀಲ್ ಕಂಪನಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿರುವ ಚಿತ್ತರಂಜನ್ ತಿವಾರಿ ಎಂಬುವರು ಜಾರ್ಖಂಡ್‌ನ ಬೊಕಾರೋ ನಗರದಲ್ಲಿ ವಿವಾಹವಾಗಿದ್ದಾರೆ.
ಆ್ಯಸಿಡ್ ದಾಳಿಯ ನಂತರ ಆತ್ಮವಿಶ್ವಸ ಕಳೆದುಕೊಳ್ಳದ ಸೋನಾಲಿ ಮುಖರ್ಜಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ "ಕೌನ್ ಬನೇಗಾ ಕರೋಡ್‌ಪತಿ' (ಕೆಬಿಸಿ) ಕಾರ್ಯಕ್ರಮದಲ್ಲಿ ಧೈರ್ಯವಾಗಿ ಪಾಲ್ಗೊಂಡು 27 ಲಕ್ಷ ರೂ. ಬಹುಮಾನ ಗೆದ್ದಿದ್ದರು.
ಘಟನೆ ಹಿನ್ನೆಲೆ
2003ರಲ್ಲಿ 17ರ ಸೋನಾಲಿ ಮುಖರ್ಜಿ ಕಾಲೇಜು ವಿದ್ಯಾರ್ಥಿಯಾಗಿದ್ದಳು. ಈಕೆಯ ಮೇಲೆ ಮೂವರು ಯುವಕರು ಆಸೆಪಟ್ಟು, ತಮ್ಮ ಲೈಂಗಿಕ ಕೋರಿಯನ್ನು ಈಡೇರಿಸುವಂತೆ ಹೇಳಿದ್ದರು. ಇದನ್ನು ಮುಖರ್ಜಿ ತಿರಸ್ಕರಿಸಿದ್ದಳು. ಇದರಿಂದ ಕ್ರೋಧಗೊಂಡ ಯುವಕರು ಅದೇ ವರ್ಷ ಏ. 22ರಂದು ಸೋನಾಲಿ ಮುಖರ್ಜಿ ಮನೆಯಲ್ಲಿ ಮಲಗಿದ್ದಾಗ ಆಕೆಯ ಮುಖಕ್ಕೆ ಆ್ಯಸಿಡ್ ಸುರಿದಿದ್ದರು. ಇದರಿಂದಾಗಿ ಆಕೆಯ ಮುಖ ಸುಟ್ಟು ಹೋಗಿ, ಕಣ್ಣುಗಳನ್ನು ಕಳೆದುಕೊಂಡಿದ್ದಳು. ಇದವರೆಗೂ ಆಕೆ 22 ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


