ಕಾರ್ಪೋರೇಟ್ ಗೂಢಚರ್ಯೆ: 13 ಆರೋಪಿಗಳ ವಿರುದ್ಧ ಚಾರ್ಚ್‌ಶೀಟ್
ತೈಲಾ ಸಚಿವಾಲಯ ಮಾಹಿತಿ ಸೋರಿಕೆ ಪ್ರಕರಣ ಸಂಬಂಧ ದೆಹಲಿ ಪೊಲೀಸರು ಹದಿಮೂರು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ನವದೆಹಲಿ: ತೈಲಾ ಸಚಿವಾಲಯ ಮಾಹಿತಿ ಸೋರಿಕೆ ಪ್ರಕರಣ ಸಂಬಂಧ ದೆಹಲಿ ಪೊಲೀಸರು ಹದಿಮೂರು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಐವರು ಕಾರ್ಪೋರೇಟ್ ಕಾರ್ಯನಿರ್ವಹಕರಾದ ರಿಲಯನ್ಸ್ ನ ಶೈಲೇಶ್ ಸಕ್ಸೆನಾ, ಎಸಾರ್ ನ ವಿನಯ್ ಕುಮಾರ್, ಕೇರ್ನ್ಸ್ ಇಂಡಿಯಾದ ಕೆ.ಕೆ ನಾಯ್ಕ್, ಜುಬಿಲೆಂಟ್ ಎನರ್ಜಿಯ ಸುಭಾಷ್ ಚಂದ್ರ ಹಾಗೂ ರಿಯಲನ್ಸ್ ಎಡಿಎಜಿಯ ರಿಷಿ ವಿರುದ್ಧ ಚಾರ್ಚ್‌ಶೀಟ್ ಸಲ್ಲಿಕೆಯಾಗಿದೆ.
ಇನ್ನುಳಿದಂತೆ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈಶ್ವರ್ ಸಿಂಗ್, ಆಶಾರಾಮ್, ಲಲ್ತಾ ಪ್ರಸಾದ್, ರಾಕೇಶ್ ಕುಮಾರ್, ಹಾಗೂ ರಕ್ಷಣಾ ಸಚಿವಾಲಯದ ಸಿಬ್ಬಂದಿ ವೀರೇಂದ್ರ ಕುಮಾರ್, ರಾಜ್ ಕುಮಾರ್ ಚೌದರಿ, ಶಕ್ತಿ ಸಲಹೆಗಾರ ಪ್ರಯಾಷ್ ಜೈನ್, ಮಾಜಿ ಪತ್ರಕರ್ತ ಶಂತನು ಸೈಕಿಯಾ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿದೆ.
ಪ್ರಕರಣ ಸಂಬಂಧ ಬಂಧಿತರಾಗಿರುವ ಹದಿಮೂರು ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ತೈಲ ಸಚಿವಾಲಯದ ಸಿಬ್ಬಂದಿಗಳಾದ ಲಲ್ತಾ ಪ್ರಸಾದ್ ಮತ್ತು ರಾಕೇಶ್ ಕುಮಾರ್ ಕೆಲಸ ಬಿಟ್ಟಿದ್ದಾರೆ.
ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ ಮುಖ್ಯ ನ್ಯಾಯಮೂರ್ತಿ ಸಂಜಯ್ ಕಾನ್ಗ್ ವಾಲ್ ಅವರು ಇಂದು ರಜೆ ಇದ್ದ ಕಾರಣ ನ್ಯಾಯಮೂರ್ತಿ ಆಕಾಶ್ ಜೈನ್ ಅವರಿಗೆ ದೆಹಲಿ ಪೊಲೀಸರು 44 ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


