ಲಾಟರಿ ಹಾಕಿ ಅತ್ಯಾಚಾರ ಮಾಡಿದ ಇಸಿಸ್ ಉಗ್ರರು
ಇರಾಕ್ ಮತ್ತು ಸಿರಿಯಾದಲ್ಲಿ ತಮ್ಮ ಕರಾಳ ಹಸ್ತ ಚಾಚಿರುವ ಇಸಿಸ್ ಉಗ್ರರ ಕ್ರೌರ್ಯ ಎಲ್ಲೆ ಮೀರಿದ್ದು, ಲಾಟರಿ ಹಾಕುವ ಮೂಲಕ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದಾರೆ.

ಮದ್ಯಪ್ರಾಚ್ಯ: ಇರಾಕ್ ಮತ್ತು ಸಿರಿಯಾದಲ್ಲಿ ತಮ್ಮ ಕರಾಳ ಹಸ್ತ ಚಾಚಿರುವ ಇಸಿಸ್ ಉಗ್ರರ ಕ್ರೌರ್ಯ ಎಲ್ಲೆ ಮೀರಿದ್ದು, ಲಾಟರಿ ಹಾಕುವ ಮೂಲಕ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗುತ್ತಿದ್ದಾರೆ.
ಇತ್ತೀಚೆಗಷ್ಟೇ ಇಸಿಸ್ ಉಗ್ರರಿಂದ ಅಪಹರಣಕ್ಕೊಳಗಾಗಿ ಪಾರಾಗಿ ಬಂದಿದ್ದ ಇಬ್ಬರು ಯುವತಿಯರನ್ನು ಉಗ್ರರು ಲಾಟರಿ ಹಾಕುವ ಮೂಲಕ ಅತ್ಯಾಚಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸಿರಿಯಾದಲ್ಲಿನ ಆಂತರಿಕ ಕಲಹ ಸಂಬಂಧ ಮಾನವಹಕ್ಕು ವೀಕ್ಷಣಾ ಸಮಿತಿ (humna rights watch) ಸದಸ್ಯರು ನಡೆಸಿರುವ ಸಂದರ್ಶನದಲ್ಲಿ ಇಸಿಸ್ ಉಗ್ರರಿಂದ ಅತ್ಯಾಚಾರಕ್ಕೊಳಗಾದ ಯುವತಿ ತನಗಾದ ಹಿಂಸೆಯನ್ನು ತೋಡಿಕೊಂಡಿದ್ದಾಳೆ.
ಸಿರಿಯಾದ ಸಿಜಾರ್ ಗ್ರಾಮದ ಯಜಿದಿ ಕುಟುಂಬಕ್ಕೆ ಸೇರಿದ ಯುವತಿಯನ್ನು ಮತ್ತು 12 ವರ್ಷದ ಓರ್ವ ಬಾಲಕಿಯನ್ನು ಉಗ್ರರು ಅಪಹರಿಸಿ ಧಾರುಣವಾಗಿ ಅತ್ಯಾಚಾರ ಮಾಡಿದ್ದಾರೆ. ಅಪಹರಣದ ನಂತರ ಎಲ್ಲ ಹೆಣ್ಣುಮಕ್ಕಳನ್ನು ಒಂದು ಕತ್ತಲು ಕೋಣೆಯಲ್ಲಿ ಬಂಧಿಸಿಟ್ಟಿದ್ದ ಉಗ್ರರು ತಾವು ಹೇಳಿದಂತೆ ಕೇಳಬೇಕು ಎಂದು ಆದೇಶಿಸಿದ್ದಾರೆ. ಆದರೆ ಇದಕ್ಕೆ ಯುವತಿ ನಿರಾಕರಿಸಿದಾಗ ಇಬ್ಬರನ್ನು ಮರಕ್ಕೆ ಕಟ್ಟಿಹಾಕಿ ಮನಸೋ ಇಚ್ಛೆ ಹೊಡೆದಿದ್ದಾರೆ.
ಗಾಯದ ನೋವಿನಿಂದ ಬಳಲುತ್ತಿದ್ದ ಯುವತಿ ಮತ್ತು ಬಾಲಕಿ ಅಂತಿಮವಾಗಿ ಉಗ್ರರ ಮಾತನ್ನು ಕೇಳುವುದಾಗಿ ಹೇಳಿದ್ದಾರೆ. ಸ್ನಾನ ಮಾಡುವ ನೆಪವೊಡ್ಡಿ ಸ್ನಾನಗೃಹಕ್ಕೆ ತೆರಳಿದ ಈ ಇಬ್ಬರು ಅಲ್ಲಿದ್ದ ಟಾಕ್ಸಿಕ್ ಆ್ಯಸಿಡ್ ಅನ್ನು ನೋಡಿ ಉಗ್ರರ ಮಾತನ್ನು ಕೇಳುವುದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳುವುದೇ ಸರಿ ಎಂದು ಭಾವಿಸಿ ಆ ಟಾಕ್ಸಿಕ್ ಆಸಿಡ್ ಅನ್ನು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ದುರಾದೃಷ್ಟವಶಾತ್ ಆ ಯುವತಿ ಹಾಗೂ ಬಾಲಕಿ ಆಸಿಡ್ ನಿಂದ ಸಾಯದೇ ಕೇವಲ ಅಸ್ವಸ್ಥಗೊಂಡರು. ಈ ವಿಚಾರ ತಿಳಿದ ಉಗ್ರರು ಆ ಯುವತಿಯರನ್ನು ಆಸ್ಪತ್ರೆಗೆ ದಾಖಲು ಮಾಡುವ ಬದಲು ಅತ್ಯಾಚಾರ ಮಾಡಿದ್ದಾರೆ. 7 ಮಂದಿಯ ಉಗ್ರರ ತಂಡ ಲಾಟರಿ ಹಾಕುವ ಮೂಲಕ ಒಬ್ಬರ ನಂತರ ಒಬ್ಬರು ಅತ್ಯಾಚಾರ ಮಾಡಿದರು ಎಂದು ಯುವತಿ ಹೇಳಿಕೊಂಡಿದ್ದಾಳೆ.
ಇದಿಷ್ಟೇ ಅಲ್ಲದೆ ಉಗ್ರರಿಗೆ ಸಹಾಯ ಮಾಡಿದ್ದ ಸಮೀಪದ ಗ್ರಾಮದ ಗ್ರಾಮಸ್ಥರನ್ನು ಕರೆಯಿಸಿ ಅವರಿಂದಲೂ ಕೂಡ ಯುವತಿ ಮೇಲೆ ಅತ್ಯಾಚಾರ ಮಾಡಿಸಿದ್ದಾರೆ. ಅಂತಿಮವಾಗಿ ಉಗ್ರರ ಕಣ್ಣುತಪ್ಪಿಸುವಲ್ಲಿ ಯಶಸ್ವಿಯಾದ ಯುವತಿ ಮತ್ತು 12 ವರ್ಷದ ಬಾಲಕಿ ಉಗ್ರರಿಂದ ತಪ್ಪಿಸಿಕೊಂಡು ಪಾರಾಗಿ ಬಂದಿದ್ದಾರೆ. ನಂತರ ಮಾನಹಕ್ಕು ಸಮಿತಿ ಸದಸ್ಯರ ನೆರವಿನಿಂದ ತಮ್ಮ ಗ್ರಾಮಕ್ಕೆ ಮರಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


