ಟೈಮ್ಸ್ ಮ್ಯಾಗಝೀನ್ ನಲ್ಲಿ ಮೋದಿ ಕುರಿತು ಒಬಾಮಾ ಮೆಚ್ಚುಗೆ
ಟೈಮ್ಸ್ ಮ್ಯಾಗಝೀನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕುರಿತು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ...

ನವದೆಹಲಿ: ಟೈಮ್ಸ್ ಮ್ಯಾಗಝೀನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕುರಿತು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮ್ಯಾಗಝೀನ್ ನಲ್ಲಿ ಮೋದಿ ಕುರಿತು ಬರೆದಿರುವ ಒಬಾಮಾ, ಮೋದಿ ಅವರು ಬೆಳೆದು ಬಂದ ಹಾದಿ, ಅವರ ಕಾರ್ಯವೈಖರಿ, ಅವರ ಮುಂದಾಳತ್ವದಿಂದ ಭಾರತದಲ್ಲಿ ಆಗುತ್ತಿರುವ ಆರ್ಥಿಕ ಸುಧಾರಣೆ ಕುರಿತು ಶ್ಲಾಘಿಸಿದ್ದಾರೆ.
ಒಬ್ಬ ಟೀ ಮಾರುವ ಪುತ್ರನ ಮಗನಾಗಿದ್ದ ಮೋದಿ, ತಂದೆಗೆ ವೃತ್ತಿಯಲ್ಲಿ ಸಹಾಯ ಮಾಡಿದರು. ಅಂದು ಒಂದು ಬಡ ಕುಟುಂಬದ ಮಗ ಇಂದು ಇಡೀ ವಿಶ್ವದಲ್ಲೇ ಹೆಚ್ಚು ಖ್ಯಾತಿ ಹೊಂದಿರುವಂತಹ ನಾಯಕ ಹಾಗೂ ಭಾರತದ ಮುಖ್ಯ ಸುಧಾರಕ.
ಟೀ ಮಾರುವ ಪುತ್ರನು ಸಾಧನೆ ಮಾಡಬಹುದು ಎಂಬುದಕ್ಕೆ ಮೋದಿ ಅವರೇ ಸಾಕ್ಷಿ. ರಾಜಕೀಯದಲ್ಲಿ ಅವರ ಬೆಳೆದು ಬಂದ ಪರಿ, ಅಲ್ಲದೇ, ಭಾರತದ ಅಭಿವೃದ್ಧಿಯತ್ತ ಅವರ ನಡೆ ಎಲ್ಲರಲ್ಲೂ ಸ್ಫೂರ್ತಿ ತುಂಬುವಂತಾಗಿದೆ ಎಂದು ಹೇಳಿದ್ದಾರೆ.
ಬಡತನ ರೇಖೆಯಿಂದ ಬಂದ ಮೋದಿ ಪ್ರಧಾನಿಯಾಗಿರುವುದು ಭಾರತ ತನ್ನ ಅಭಿವೃದ್ಧಿಯಲ್ಲಿ ಹೇಗೆ ಮುಂದೆ ಸಾಗಿದೆ ಎಂಬುದನ್ನು ತೋರಿಸುತ್ತದೆ. ಬಡತನ ಹೋಗಲಾಡಿಸಿ, ಶಿಕ್ಷಣ, ಮಹಿಳೆ ಉದ್ಯೋಗ, ಹೆಣ್ಣುಮಕ್ಕಳ ಶಿಕ್ಷಣ ಸೇರಿದಂತೆ ಆರ್ಥಿಕ ಅಭಿವೃದ್ಧಿಯತ್ತ ಮೋದಿ ಹೆಜ್ಜೆ ಇಟ್ಟಿದ್ದಾರೆ. ಇಂದು ಅವರ ನಡೆ ವಿಶ್ವಕ್ಕೆ ಮಾದರಿಯಾಗಿದೆ ಎಂದು ಬರೆದಿದ್ದಾರೆ.
ಮೋದಿ ಅವರು ವಾಷಿಂಗ್ಟನ್ ಗೆ ಬಂದಾಗ ಅವರೊಡನೆ ಉಭಯ ದೇಶಗಳ ಅಭಿವೃದ್ಧಿ ಕುರಿತು ಚರ್ಚಿಸಿದೆವು. ಡಾ.ಮಾರ್ಟಿನ್ ಲೂಥರ್ ಅವರ ಸ್ಮಾರಕ ಭೇಟಿ ನೀಡಿ, ತಮ್ಮ ದೇಶಗಳ ಇತಿಹಾಸ ಮತ್ತು ಧರ್ಮಗಳ ವೈವಿದ್ಯತೆಗಲನ್ನು ಮತ್ತಷ್ಟು ಗಟ್ಟಿಗೊಳಿಸುವುದರ ಬಗ್ಗೆ, ಲೂತರ್ ಮತ್ತು ಮಹಾತ್ಮಗಾಂಧಿ ಅವರ ತತ್ವಭೋಧನೆ ಬಗ್ಗೆ ಚರ್ಚಿಸಿದೆವು. ಈ ಮೂಲಕ ಮೋದಿ ಅವರಿಂದ ಸಾಕಷ್ಟು ವಿಷಯ ಕಲಿತಿದ್ದೇನೆ ಎಂದು ಒಬಾಮಾ ಹೇಳಿದ್ದಾರೆ.
ಟೈಮ್ಸ್ ಮ್ಯಾಗಜೀನ್ ಹೊರತಂದ ವಿಶ್ವದ 100 ಪ್ರಭಾವಿ ನಾಯಕರುಗಳ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸ್ಥಾನ ಸಿಕ್ಕಿತ್ತು. ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿಗೆ ಪಾಪ್ಯುಲಾರಿಟಿ ಆಧರಿಸಿ ಹಾಗೂ ಮಾಧ್ಯಮಗಳಲ್ಲಿ ಮೋದಿ ಹೊಂದಿರೋ ಖ್ಯಾತಿಯನ್ನ ಆಧರಿಸಿ ಟೈಮ್ಸ್ ಮ್ಯಾಗಜೀನ್ ಪಟ್ಟಿ ಹೊರತಂದಿತ್ತು. ಈ ಪಟ್ಟಿಯಲ್ಲಿ ಅಮೆರಿಕಾ ಅದ್ಯಕ್ಷ ಬರಾಕ್ ಒಬಾಮಾ ಅವರನ್ನು ಮೋದಿ ಅವರು ಹಿಂದಿಕ್ಕಿದ್ದರು. ಇದಕ್ಕೆ ಒಬಾಮಾ ಟೈಮ್ಸ್ ಮ್ಯಾಗಝೀನ್ ನಲ್ಲಿ ಶ್ಲಾಘಿಸಿದ ಪರಿ ಹೀಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


