ನ್ಯೂಯಾರ್ಕ್ ಕೋರ್ಟ್ ನ್ಯಾಯಾಧೀಶರಾಗಿ ಭಾರತೀಯ ಮೂಲದ ಮಹಿಳೆ ನೇಮಕ
ನ್ಯೂಯಾರ್ಕ್ ಕ್ರಿಮಿನಲ್ ನ್ಯಾಯಾಲಯದ ನ್ಯಾಯಾಧೀಶರಾಗಿ ಭಾರತ ಮೂಲದ ರಾಜರಾಜೇಶ್ವರಿ ಅವರು ನೇಮಕಗೊಂಡಿದ್ದಾರೆ...

ವಾಷಿಂಗ್ಟನ್ : ನ್ಯೂಯಾರ್ಕ್ ಕ್ರಿಮಿನಲ್ ನ್ಯಾಯಾಲಯದ ನ್ಯಾಯಾಧೀಶರಾಗಿ ಭಾರತ ಮೂಲದ ರಾಜರಾಜೇಶ್ವರಿ ಅವರು ನೇಮಕಗೊಂಡಿದ್ದಾರೆ.
ಇದೇ ಮೊದಲ ಬಾರಿಗೆ ಭಾರತ ಮೂಲದ ಮಹಿಳೆ ನ್ಯೂಯಾರ್ಕ್ ನ್ಯಾಯಾಲಾಯದ ನ್ಯಾಯಾಧೀಶರಾಗಿ ನೇಮಕಗೊಂಡಿರುವುದು.
43 ವರ್ಷದ ರಾಜರಾಜೇಶ್ವರಿ ಅವರು ಚೆನ್ನೈನಲ್ಲಿ ಜನಿಸಿದವರು. 16 ವರ್ಷದವರಿದ್ದಾಗ ಅಮೆರಿಕ ಸೇರಿದ ರಾಜರಾಜೇಶ್ವರಿ, ರಿಚ್ಮಂಡ್ ಕೌಂಟಿಯ ಜಿಲ್ಲಾ ಅಟಾರ್ನಿ ಕಚೇರಿಯಲ್ಲಿ ಸಹಾಯಕ ಜಿಲ್ಲಾ ಅಟಾರ್ನಿಯಾಗಿ ಕಾರ್ಯನಿರ್ವಹಿಸಿದ್ದಾರೆ.
‘ಈ ನೇಮಕದಿಂದ ಹೆಚ್ಚು ಸಂತೋಷವಾಗಿದೆ. ಅನಿವಾಸಿಯೊಬ್ಬರಿಗೆ ಇಂಥ ಗಳಿಗೆಗಳು ಹೆಚ್ಚು ಸ್ಮರಣೀಯ. ಈ ನೇಮಕ ನನ್ನಂಥ ಅನೇಕರಿಗೆ ಪ್ರೇರಣೆ’ ಎಂದು ರಾಜರಾಜೇಶ್ವರಿ ಹೇಳಿದ್ದಾರೆ.
ಭರತನಾಟ್ಯ ಮತ್ತು ಕೂಚುಪುಡಿ ನೃತ್ಯಪಟುವೂ ಆಗಿರುವ ರಾಜರಾಜೇಶ್ವರಿ ಅವರು ಅಮೆರಿಕದಲ್ಲಿ ನಡೆಯುವ ಅನಿವಾಸಿ ಭಾರತೀಯರ ಸಮಾರಂಭಗಳಲ್ಲಿ ನೃತ್ಯ ಪ್ರದರ್ಶನವನ್ನೂ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


