ಬೇಹುಗಾರಿಕೆ: ಬರ್ಲಿನ್ ನಲ್ಲಿ ಪ್ರಧಾನಿ ಭೇಟಿ ಮಾಡಿದ ನೇತಾಜಿ ಸಂಬಂಧಿ
ಬರೋಬ್ಬರಿ 20 ವರ್ಷಗಳ ಕಾಲ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬದ ಬಗ್ಗೆ ಮಾಜಿ ಪ್ರಧಾನಿ ದಿ.ಜವಾಹರ್ ಲಾಲ್ ನೆಹರು ಅವರು ಗೂಢಚಾರಿಕೆ ನಡೆಸಿದ್ದರು....

ಬರ್ಲಿನ್: ಬರೋಬ್ಬರಿ 20 ವರ್ಷಗಳ ಕಾಲ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬದ ಬಗ್ಗೆ ಮಾಜಿ ಪ್ರಧಾನಿ ದಿ.ಜವಾಹರ್ ಲಾಲ್ ನೆಹರು ಅವರು ಗೂಢಚಾರಿಕೆ ನಡೆಸಿದ್ದರು ಎಂಬ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಸೋಮವಾರ ತಡ ರಾತ್ರಿ ನೇತಾಜಿ ಸಂಬಂಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಗೂಢಚಾರಿಕೆ ಕುರಿತು ಚರ್ಚಿಸಿದರು.
ಪ್ರಧಾನಿ ಭೇಟಿಯ ಬಳಿಕ ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮತನಾಡಿದ ಬೋಸ್ ಸಂಬಂಧಿ ಸೂರ್ಯ ಬೋಸ್ ಅವರು, ತಮ್ಮ ಕುಟುಂಬದ ವಿರುದ್ಧದ ಗೂಢಚಾರಿಕೆ ಹಾಗೂ ಸುಭಾಷ್ ಚಂದ್ರ ಬೋಸ್ ಅವರ ಕಡತಗಳ ಮರು ವರ್ಗೀಕರಣದ ಕುರಿತು ಪ್ರಧಾನಿಯೊಂದಿಗೆ ಚರ್ಚಿಸಿರುವುದಾಗಿ ಹೇಳಿದರು.
ಪ್ರಧಾನಿ ಅವರು ಸಹ ಇದನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದ್ದು, ಶೀಘ್ರದಲ್ಲೇ ಒಂದು ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸೂರ್ಯ ಬೋಸ್ ಅವರು ತಿಳಿಸಿದ್ದಾರೆ.
1948ರಿಂದ 1968ರ ವರೆಗೆ ನೇತಾಜಿಯ ಕುಟುಂಬ ಹಾಗೂ ಸಂಬಂಧಿಕರ ಬೆಗಗಿನ ಎಲ್ಲ ಮಾಹಿತಿಗಳನ್ನು ಬೇಹುಗಾರಿಕೆ ಮೂಲಕ ಕಾಂಗ್ರೆಸ್ ಸರ್ಕಾರ ಸಂಗ್ರಹಿಸುತ್ತಿತ್ತು. ಕುಟುಂಬ ಸದಸ್ಯರು ಬರೆಯುತ್ತಿದ್ದ ಪತ್ರಗಳು ಆಯಾ ವ್ಯಕ್ತಿಗಳನ್ನು ತಲುಪುವ ಮೊದಲೇ ಸರ್ಕಾರಕ್ಕೆ ಸಿಗುತ್ತಿತ್ತು. ಬೋಸ್ ಕುಟುಂಬಸ್ಥರು ಯಾವ್ಯಾವ ಪ್ರದೇಶಗಳಿಗೆ, ಯಾವ್ಯಾವ ರಾಷ್ಟ್ರಗಳಿಗೆ ಹೋದರು, ಅಲ್ಲಿ ಯಾರ್ಯಾರನ್ನು ಭೇಟಿಯಾದರು ಎಂಬೆಲ್ಲ ವಿವರಗಳು ನೆಹರು ಅವರ ಕೈ ಸೇರುತ್ತಿತ್ತು ಎಂದು ನಿನ್ನೆ ಇಂಡಿಯಾ ಟುಡೇ ವರದಿ ಮಾಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


