ದೇಶ

ರಾಹುಲ್‍ಗೆ ಅನುಭವವಿಲ್ಲ, ಸೋನಿಯಾ ಅವರೇ ಅಧ್ಯಕ್ಷರಾಗಲಿ

ಸೋತು ಸುಣ್ಣವಾಗಿರುವ ಪಕ್ಷವನ್ನು ಬಲಪಡಿಸಬೇಕು ಎಂದು ಕಾಂಗ್ರೆಸ್ ಯತ್ನಿಸುತ್ತಿದ್ದರೆ, ರಾಹುಲ್ ಅಧ್ಯಕ್ಷಗಿರಿ ವಿರುದ್ಧದ ಅಪಸ್ವರವೇ ಬಲವಾಗುತ್ತಿದೆ. ಹೀಗಾಗಿ ಭೂಸ್ವಾಧೀನ ಕಾಯ್ದೆ ವಿರೋಧಿ ಅಭಿಯಾನದ ಮೂಲಕ ಮತ್ತೆ ದೇಶದ ಗಮನವನ್ನು...

ರಾಹುಲ್‍ಗೆ ಅನುಭವವಿಲ್ಲ, ಸೋನಿಯಾ ಅವರೇ ಅಧ್ಯಕ್ಷರಾಗಲಿ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ
Published On :

ನವದೆಹಲಿ: ಸೋತು ಸುಣ್ಣವಾಗಿರುವ ಪಕ್ಷವನ್ನು ಬಲಪಡಿಸಬೇಕು ಎಂದು ಕಾಂಗ್ರೆಸ್ ಯತ್ನಿಸುತ್ತಿದ್ದರೆ, ರಾಹುಲ್ ಅಧ್ಯಕ್ಷಗಿರಿ ವಿರುದ್ಧದ ಅಪಸ್ವರವೇ ಬಲವಾಗುತ್ತಿದೆ. ಹೀಗಾಗಿ ಭೂಸ್ವಾಧೀನ ಕಾಯ್ದೆ ವಿರೋಧಿ ಅಭಿಯಾನದ ಮೂಲಕ ಮತ್ತೆ ದೇಶದ ಗಮನವನ್ನು ತನ್ನತ್ತ ಸೆಳೆಯಬಹುದು ಎಂದು ತಿಳಿದಿದ್ದ ಕಾಂಗ್ರೆಸ್‍ಗೆ ಈಗ `ಅಧ್ಯಕ್ಷ ಸ್ಥಾನ'ದ ತಲೆನೋವು ಜೋರಾಗುತ್ತಿದೆ.

ಸಂದೀಪ್ ದೀಕ್ಷಿತ್, ಅಂಬಿಕಾ ಸೋನಿ ಬಳಿಕ ಈಗ ಕಾಂಗ್ರೆಸ್ ಸಂಸದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಕಾಂಗ್ರೆಸ್ ಉಪಾಧ್ಯಕ್ಷರ ಬಗೆಗಿನ ಅಸಮಾಧಾನ ಹೊರ ಹಾಕಿದ್ದಾರೆ. ಸೋನಿಯಾ ಅವರೇ ಅಧ್ಯಕ್ಷೆಯಾಗಬೇಕು. ರಾಹುಲ್ ಉಪಾಧ್ಯಕ್ಷರಾಗಿಯೇ ಮುಂದುವರಿಯಲಿ. ಪಕ್ಷವನ್ನು ಒಂದಾಗಿ ಕರೆದೊಯ್ಯುವ ಸಾಮರ್ಥ್ಯವಿರುವುದು ಸೋನಿಯಾಗೆ ಮಾತ್ರ ಎಂದಿದ್ದಾರೆ ಸಿಂಗ್.

ರಾಹುಲ್‍ಗೆ ಅನುಭವದ ಕೊರತೆಯಿದೆ ಎಂದು ಹೇಳಿರುವ ಸಿಂಗ್, ಕೇವಲ 10 ವರ್ಷಗಳಲ್ಲಿ ಯಾರೂ ನೌಕೆಯ ಕ್ಯಾಪ್ಟನ್ ಆಗಲು ಸಾಧ್ಯವಿಲ್ಲ. ರಾಹುಲ್‍ಗೆ ಇನ್ನಷ್ಟು ಅನುಭವದ ಅಗತ್ಯವಿದೆ. ವಾಪಸ್ ಬಂದ ಮೇಲೂ ಮತ್ತಷ್ಟು ಪ್ರಯಾಣ ಮಾಡಬೇಕು. ರಾಹುಲ್ ರಜೆಯಲ್ಲಿ ತೆರಳಿದಾಗಲೇ ಅವರಿಗೆ ನಾನು ಪತ್ರ ಬರೆದು ವಾಪಸ್ ಬರುವಂತೆ ತಿಳಿಸಿದ್ದೆ. ಆದರೆ ಅದಕ್ಕೆ ಅವರ ಉತ್ತರ ಬರಲೇ ಇಲ್ಲ ಎಂದಿದ್ದಾರೆ ಸಿಂಗ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.