ದೇಶ

ಮೃತದೇಹ ರಸ್ತೆಯಲ್ಲಿಟ್ಟು ಪ್ರತಿಭಟನೆ

ಚಿತ್ತೂರು ಜಿಲ್ಲೆಯಲ್ಲಿ ನಡೆದ 20 ಮಂದಿಯ ಎನ್ ಕೌಂಟರ್ ಪ್ರಕರಣ ಸದ್ಯಕ್ಕೆ ತಣ್ಣಗಾಗುವಂತೆ ಕಾಣುತ್ತಿಲ್ಲ. ಕಳೆದ 2 ದಿನಗಳಿಂದಲೂ ಘಟನೆ ಖಂಡಿಸಿ...

ಮೃತದೇಹ ರಸ್ತೆಯಲ್ಲಿಟ್ಟು ಪ್ರತಿಭಟನೆ
ಪ್ರತಿಭಟನೆ
Published On :

ಚೆನ್ನೈ/ತಿರುವಣ್ಣಾಮಲೈ: ಚಿತ್ತೂರು ಜಿಲ್ಲೆಯಲ್ಲಿ ನಡೆದ 20 ಮಂದಿಯ ಎನ್ ಕೌಂಟರ್ ಪ್ರಕರಣ ಸದ್ಯಕ್ಕೆ ತಣ್ಣಗಾಗುವಂತೆ ಕಾಣುತ್ತಿಲ್ಲ. ಕಳೆದ 2 ದಿನಗಳಿಂದಲೂ ಘಟನೆ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಎನ್‍ಕೌಂಟರ್‍ಗೆ ಬಲಿಯಾದ ಇಬ್ಬರ ಮೃತದೇಹಗಳನ್ನು ಕುಟುಂಬ ಸದಸ್ಯರು ಗುರುವಾರ ತಮಿಳು ನಾಡಿನ ತಿರುವಣ್ಣಾಮಲೈನ ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸಿದರು. ಜತೆಗೆ, ಪ್ರಕರಣದ ಬಗ್ಗೆ ಸ್ವತಂತ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಇದೇ ವೇಳೆ, ಮೃತ ಕಾರ್ಮಿಕರ ಸಾವಿಗೆ ಆಂಧ್ರಪ್ರದೇಶ ಸರ್ಕಾರವೇ ಕಾರಣ ಎಂದು ಆರೋಪಿಸಿರುವ ತಮಿಳುನಾಡು ಸರ್ಕಾರ, ಮೃತರು ಸ್ಮಗ್ಲರ್‍ಗಳಲ್ಲ ಎಂದು ವಾದಿಸಿದೆ. ಏತನ್ಮಧ್ಯೆ, ಎನ್‍ಕೌಂಟರ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಾಳಿರುವ ಮಾನಕ್ಕೆ ಎನ್‍ಡಿಎ ಮಿತ್ರಪಕ್ಷ ಪಿಎಂಕೆ ಆಕ್ರೋಶ ವ್ಯಕ್ತಪಡಿಸಿದೆ. ಇಂತಹುದೊಂದು ಘಟನೆ ನಡೆದರೂ ಪ್ರಧಾನಿ ಮೋದಿ ಅವರು ಚಕಾರವೆತ್ತದಿರುವುದು ದುರಂತ. ಇಂತಹ ಘಟನೆಗಳಾದಾಗ ಪ್ರಧಾನಿ ಮೊದಲು ಎರಡೂ ರಾಜ್ಯಗಳ ಸಿಎಂಗಳಿಗೆ ಕರೆ ಮಾಡಿ ಮಾತನಾಡಬೇಕು. ಆದರೆ ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ ಎಂದು ಪಿಎಂಕೆ ಆರೋಪಿಸಿದೆ. ಜತೆಗೆ, ಪ್ರಕರಣದಬಗ್ಗೆ ಸಿಬಿಐ ಅಥವಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಿಂದ ತನಿಖೆ ಯಾಗಬೇಕು ಎಂದು ಆಗ್ರಹಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.