ದೇಶ

ಅಕ್ರಮ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ವಿಮಾನ ಸಿಬ್ಬಂದಿ ಬಂಧನ

ಮುಂಬೈ ವಿಮಾನದಲ್ಲಿ ಊಟ ಪೂರೈಸುವ ಸಿಬ್ಬಂದಿಯನ್ನು ಅಕ್ರಮ ಚಿನ್ನ ಕಳ್ಳಸಾಗಣೆಗೆ ಮಾಡುತ್ತಿದ್ದ...

ಅಕ್ರಮ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ವಿಮಾನ ಸಿಬ್ಬಂದಿ ಬಂಧನ
ಸಾಂದರ್ಭಿಕ ಚಿತ್ರ
Published On :

ಮುಂಬೈ: ಮುಂಬೈ ವಿಮಾನದಲ್ಲಿ ಊಟ ಪೂರೈಸುವ ಸಿಬ್ಬಂದಿಯನ್ನು ಅಕ್ರಮ ಚಿನ್ನ ಕಳ್ಳಸಾಗಣೆಗೆ ಮಾಡುತ್ತಿದ್ದ ಆರೋಪದ ಮೇಲೆ ಕಸ್ಟಮ್ ಅಧಿಕಾರಿಗಳು ಬಂಧಿಸಿದ್ದಾರೆ.

ಅಕ್ರಮ ಚಿನ್ನ ಕಳ್ಳಸಾಗಣೆಗೆ ನೆರವಾದ ವಿಮಾನದಲ್ಲಿ ಅಡುಗೆ ಸಿಬ್ಬಂದಿಯಾಗಿಕೆಲಸ ಮಾಡುತ್ತಿದ್ದ ಅಬ್ದುಲ್‌ ರಜಾಕ್‌ ಶೇಕ್‌ ಮತ್ತು ಸಿರಾಜ್‌ ಮೊಹಮ್ಮದ್‌ ಸಯ್ಯದ್‌ ನನ್ನು ಅಧಿಕಾರಿಗಳು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಅಬ್ದುಲ್‌ ರಜಾಕ್‌ ಶೇಕ್‌ ಮತ್ತು ಸಿರಾಜ್‌ ಮೊಹಮ್ಮದ್‌ ಸಯ್ಯದ್‌ ತಮಗಿದ್ದ ತಪಾಸಣಾ ವಿನಾಯ್ತಿಯನ್ನು  ದುರ್ಬಳಕೆ ಮಾಡಿಕೊಂಡು ಚಿನ್ನ ಕಳ್ಳಸಾಗಣೆ ಜಾಲದಲ್ಲಿ ತೊಡಗಿದ್ದರು.  ಮುಂಬೈಗೆ ಬರುವ ವಿಮಾನಗಳಲ್ಲಿ ಸೀಟಿನ ಅಡಿಯಲ್ಲಿ ಚಿನ್ನ ಅಡಿಗಿಸಿ, ನಂತರ ಇಲ್ಲಿಗೆ ಬಂದ ಮೇಲೆ ಸಂಬಂಧಿಸಿದವರಿಗೆ ಅದನ್ನು ತಲುಪಿಸುತ್ತಿದ್ದರು ಎನ್ನಲಾಗಿದೆ.

ಆರೋಪಿಗಳಿಂದ ಅಕ್ರಮವಾಗಿ ತಂದಿದ್ದ 6.75 ಕೆ.ಜಿ. ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.