ಆಸ್ತಿ ಖರೀದಿದಾರರಿಗೆ ಸಿಹಿ ಸುದ್ದಿ: ರಿಯಲ್ ಎಸ್ಟೇಟ್ ವಿಧೇಯಕಕ್ಕೆ ಅಸ್ತು
ಆಸ್ತಿ ಖರೀದಿಸುವವರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ.ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ರಿಯಲ್ ಎಸ್ಟೇಟ್ ತಿದ್ದುಪಡಿ ವಿಧೇಯಕವನ್ನು ಕೇಂದ್ರ...

ನವದೆಹಲಿ: ಆಸ್ತಿ ಖರೀದಿಸುವವರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ.ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ರಿಯಲ್ ಎಸ್ಟೇಟ್ ತಿದ್ದುಪಡಿ ವಿಧೇಯಕವನ್ನು ಕೇಂದ್ರ ಸಂಪುಟ ಮಂಗಳವಾರ ಅಂಗೀಕರಿಸಿದೆ. ಅದರಂತೆ, ಎಲ್ಲ ವಾಣಿಜ್ಯ ಮತ್ತು ಇತರೆ ರಿಯಲ್ ಎಸ್ಟೇಟ್ ಯೋಜನೆಗಳು, ಬ್ರೋಕರ್‍ಗಳು ಇದರಡಿ ಬರಲಿದೆ. ಈ ಮೂಲಕ ಗ್ರಾಹಕರ ಹಿತ ರಕ್ಷಿಸುವುದು ಸರ್ಕಾರದ ಉದ್ದೇಶ. ಬೇಜವಾಬ್ದಾರಿ ಬಿಲ್ಡರ್‍ಗಳಿಗೆ ಜೈಲು ಶಿಕ್ಷೆ, ದಂಡ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುವ ಪ್ರಸ್ತಾಪ ಈ ವಿಧೇಯಕದಲ್ಲಿದೆ. ಎಲ್ಲ ಬಿಲ್ಡರ್‍ಗಳೂ ಖರೀದಿದಾರರಿಂದ ಪಡೆಯುವ ಶೇ.50ರಷ್ಟು ಹಣವನ್ನು ಎಸ್ಕ್ರೋ ಖಾತೆಯಲ್ಲಿ ಇರಿಸಿ, ಆ ಹಣದಿಂದಲೇ ನಿರ್ಮಾಣ ವೆಚ್ಚವನ್ನು ಭರಿಸುವುದನ್ನು ಕಡ್ಡಾಯಗೊಳಿಸುವಂತಹ ತಿದ್ದುಪಡಿಯನ್ನೂ ತರಲಾಗಿದೆ. ಇದು ವಾಣಿಜ್ಯ ರಿಯಲ್ ಎಸ್ಟೇಟ್‍ಗೂ ಅನ್ವಯವಾಗಲಿದೆ. ಜತೆಗೆ, ಇನ್ನು ಮುಂದೆ ಪ್ರೋಮೋಟರ್‍ಗಳು ಕಟ್ಟಡದ ಯೋಜನೆ ಹಾಗೂ ರಚನೆಯ ವಿನ್ಯಾಸವನ್ನು ಬದಲಿಸಲು ಮೂರನೇ ಎರಡರಷ್ಟು ಗ್ರಾಹಕರ ಒಪ್ಪಿಗೆ ಪಡೆಯಲೇಬೇಕಾಗಿಲ್ಲ. ರಾಜ್ಯಗಳು ಇದಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ಒಂದು ವರ್ಷದೊಳಗಾಗಿ ಜಾರಿ ಮಾಡಬೇಕು ಎಂದು ವಿಧೇಯಕ ಹೇಳುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


