ತಮಿಳುನಾಡು ಮಾಜಿ ಸಚಿವ ಎಸ್.ಎಸ್.ಕೃಷ್ಣಮೂರ್ತಿ ಬಂಧನ
ಆತ್ಮಹತ್ಯೆಗೆ ಕಾರಣರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮಾಜಿ ಸಚಿವ ಮತ್ತು ಎಐಎಡಿಎಂಕೆ ಮುಖಂಡ ಎಸ್.ಎಸ್.ಕೃಷ್ಣಮೂರ್ತಿ ಅವರನ್ನು ಬಂಧಿಸಲಾಗಿದೆ..

ಚೆನ್ನೈ: ಆತ್ಮಹತ್ಯೆಗೆ ಕಾರಣರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮಾಜಿ ಸಚಿವ ಮತ್ತು ಎಐಎಡಿಎಂಕೆ ಮುಖಂಡ ಎಸ್.ಎಸ್.ಕೃಷ್ಣಮೂರ್ತಿ ಅವರನ್ನು ಬಂಧಿಸಲಾಗಿದೆ.
ಶನಿವಾರ ತಡರಾತ್ರಿ ವೇಳೆ ಕೃಷ್ಣಮೂರ್ತಿ ಅವರನ್ನು ಬಂಧಿಸಲಾಗಿದ್ದು, ಭಾನುವಾರ ಈ ವಿಚಾರ ಬೆಳಕಿಗೆ ಬಂದಿದೆ. ಮುತ್ತುಕುಮಾರ ಸ್ವಾಮಿ ಎಂಬ ಸರ್ಕಾರಿ ಇಂಜಿನಿಯರ್ ಆತ್ಮಹತ್ಯೆಗೆ ಕೃಷ್ಣಮೂರ್ತಿ ಅವರೇ ಕಾರಣ ಎಂಬ ಆರೋಪದ ಮೇರೆಗೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಾವು ಶಿಫಾರಸು ಮಾಡಿದ ಚಾಲಕರನ್ನೇ ಸೇವೆಗೆ ನೇಮಿಸಿಕೊಳ್ಳಬೇಕು ಎಂಬ ಮಾಜಿ ಸಚಿವರ ಪ್ರಬಲ ಒತ್ತಡದಿಂದಾಗಿ ಇಂಜಿನಿಯರ್ ಮುತ್ತುಕುಮಾರಸ್ವಾಮಿ ಚಲಿಸುವ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಆರೋಪದ ಕೃಷ್ಣಮೂರ್ತಿ ಅವರ ಮೇಲಿತ್ತು.
ಇದೇ ಕಾರಣಕ್ಕಾಗಿ ಕೃಷ್ಣಮೂರ್ತಿ ಅವರನ್ನು ಸಚಿವಸ್ಥಾನದಿಂದ ವಜಾ ಮಾಡಲಾಗಿತ್ತು. ಅಲ್ಲದೆ, ಅವರಿಗೆ ನೀಡಲಾಗಿದ್ದ ಪಕ್ಷದ ವಿವಿಧ ಅಧಿಕಾರಗಳನ್ನು ಹಿಂಪಡೆಯಲಾಗಿತ್ತು. ಅತ್ತ ಕೃಷ್ಣಮೂರ್ತಿ ಅವರ ಬಂಧನವಾಗುತ್ತಿದ್ದಂತೆಯೇ ಇತ್ತ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಬೇಕು ಎಂಬ ಪ್ರತಿಪಕ್ಷಗಳ ಆಗ್ರಹ ಜೋರಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದ ಮುಖ್ಯ ಎಂಜಿನಿಯರ್ ಸೆಂಥಿಲ್ ಎಂಬುವವರನ್ನು ಕೂಡ ಬಂಧಿಸಲಾಗಿದೆ.
ಕೃಷ್ಣಮೂರ್ತಿ ಬಂಧನದ ಬೆನ್ನಲ್ಲೇ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರ ಮಗ ಸೇತೂರಾಮ್ ವಿನೋದ್, ಸತ್ಯ ಎಂದಿದ್ದರೂ ಹೊರ ಬರಲೇಬೇಕು. ತನಿಖೆ ಯಾವ ರೀತಿ ನಡೆಯುತ್ತದೆ ಎಂಬುದನ್ನು ನೋಡೋಣ ಎಂದು ಹೇಳಿದ್ದಾರೆ. ಅಲ್ಲದೆ ನಿಮ್ಮ ಕುಟುಂಬಕ್ಕೆ ಬೆದರಿಕೆ ಕರೆಗಳು ಬರುತ್ತಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ವಿನೋದ್, ಇದುವರೆಗೂ ಅಂತಹ ಯಾವುದೇ ಕರೆಗಳು ನಮಗೆ ಬಂದಿಲ್ಲ. ಆದರೆ ಬಂಧಿತ ಇಂಜಿನಿಯರ್ ಸೆಂಥಿಲ್ ಪದೇ ಪದೇ ನಮ್ಮ ತಂದೆಯನ್ನು ಭೇಟಿ ಮಾಡುತ್ತಿದ್ದರು. ಮತ್ತು ಕರೆ ಮಾಡುತ್ತಿದ್ದರು ಎಂದು ವಿನೋದ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


