ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನ: ಪತ್ನಿಯಿಂದ ಪತಿ ಕೊಲೆ
ತನ್ನ 20 ವರ್ಷದ ಮಗಳ ಮೇಲೆ ಅತ್ಯಾಚಾರಕ್ಕೆ ಮುಂದಾದ ಪತಿಯನ್ನು ಪತ್ನಿಯೇ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ...

ಇಂದೋರ್: ತನ್ನ 20 ವರ್ಷದ ಮಗಳ ಮೇಲೆ ಅತ್ಯಾಚಾರಕ್ಕೆ ಮುಂದಾದ ಪತಿಯನ್ನು ಪತ್ನಿಯೇ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
ಪತ್ನಿ-ಪುತ್ರಿಯಿಂದ ದೂರವಾಗಿದ್ದ ಕ್ರಿಮಿನಲ್ ವ್ಯಕ್ತಿ ತನ್ನ ಮಗಳ ಮೇಲೆ ಅತ್ಯಾಚಾರವೆಸಗಲು ಮುಂದಾಗಿದ್ದಾನೆ. ಈ ವೇಳೆ ಪತ್ನಿ ಬಿಡಿಸಲು ಹೋದಾಗ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ.
ಇದರಿಂದ ಕುಪಿತಗೊಂಡ ಪತ್ನಿ ಆತನ ಕಣ್ಣಿಗೆ ಕಾರದ ಪುಡಿ ಎರಚಿ ಆತನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾಳೆ.
ಪತ್ನಿಯಿಂದ ಹತ್ಯೆಗೊಳಗಾದ ವ್ಯಕ್ತಿ ರವಿ ಅಲಿಯಾಸ್ ಚಾಂಪಿಯಾ ಕುಖ್ಯಾತ ಕ್ರಿಮಿನಲ್ ಆಗಿದ್ದು, ಆತನ ವಿರುದ್ಧ ವಿವಿಧ ಠಾಣೆಗಳಲ್ಲಿ 18 ಪ್ರಕರಣಗಳು ದಾಖಲಾಗಿವೆ.
ತನ್ನ ಗಂಡನ ಮನೆಯಲ್ಲಿ ಉಂಟಾದ ಕಲಹದಿಂದಾಗಿ ಮಗಳು ಇತ್ತೀಚೆಗಷ್ಟೇ ತಾಯಿ ಮನೆಗೆ ಬಂದು ಅಲ್ಲೇ ವಾಸ್ತವ್ಯವಿದ್ದಳು. ನಿನ್ನೆ ರಾತ್ರಿ ಮನೆಗೆ ಬಂದ ರವಿ ಮಗಳ ಮೇಲೆಯೇ ಅತ್ಯಾಚಾರ ಎಸಗಲು ಮುಂದಾಗಿದ್ದಾನೆ.
ಆಗ ಕೆರಳಿದ ಪತ್ನಿ 38 ವರ್ಷದ ಫಮೀದಾಬಿ ಅವನನ್ನು ಇರಿದು ಹತ್ಯೆ ಮಾಡಿದ್ದಾಳೆ. ಕೊಲೆ ಮಾಡಿದ ಬಳಿಕ ಮಧ್ಯರಾತ್ರಿವರೆಗೂ ಫಮೀದಾ ಮತ್ತು ಮಗಳು ರವಿ ಶವದ ಎದುರೇ ಕುಳಿತಿದ್ದಾರೆ.
ನಂತರ ಫಮೀದ ನೇರವಾಗಿ ಚಂದನ್‌ನಗರ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾಳೆ. ಫಮೀದಾ ಮತ್ತು ರವಿ ಇಬ್ಬರೂ ಕೆಲ ಕಾಲದಿಂದ ಪರಸ್ಪರ ದೂರವಿದ್ದರು. ಆದರೆ ಇತ್ತೀಚೆಗೆ ರವಿ ಆಗಾಗ ಇವಳ ಮನೆಗೆ ಬಂದು ಹೋಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


