ದೇಶ

ಸಿಗರೇಟ್ ಬಿಸಿ ತಣಿಸಲು ಕೇಂದ್ರದ ಕ್ರಮ

`ಸಿಗರೇಟ್'ನ ಕಿಡಿ ವಿವಾದವಾಗಿರುವಂತೆಯೇ ಕೇಂದ್ರ ಸರ್ಕಾರ ಬಿಸಿ ತಣಿಸಲು ಮುಂದಾಗಿದೆ. ಸಂಸದೀಯ ಸಮಿತಿ ಶಿಫಾರಸನ್ನು ತಿರಸ್ಕರಿಸಿ ಸಿಗರೇಟ್ ಪ್ಯಾಕೆಟ್‍ಗಳಲ್ಲಿ ಶೇ. 85ರಷ್ಟು ಚಿತ್ರಸಹಿತ ಎಚ್ಚರಿಕೆ ಕಡ್ಡಾಯಗೊಳಿಸುವ ಸಾಧ್ಯತೆ ...

ಸಿಗರೇಟ್ ಬಿಸಿ ತಣಿಸಲು ಕೇಂದ್ರದ ಕ್ರಮ
ಸಿಗರೇಟ್
Published On :

ನವದೆಹಲಿ/ಚೆನ್ನೈ: `ಸಿಗರೇಟ್'ನ ಕಿಡಿ ವಿವಾದವಾಗಿರುವಂತೆಯೇ  ಕೇಂದ್ರ ಸರ್ಕಾರ ಬಿಸಿ ತಣಿಸಲು ಮುಂದಾಗಿದೆ. ಸಂಸದೀಯ ಸಮಿತಿ ಶಿಫಾರಸನ್ನು ತಿರಸ್ಕರಿಸಿ ಸಿಗರೇಟ್ ಪ್ಯಾಕೆಟ್‍ಗಳಲ್ಲಿ ಶೇ. 85ರಷ್ಟು ಚಿತ್ರಸಹಿತ ಎಚ್ಚರಿಕೆ ಕಡ್ಡಾಯಗೊಳಿಸುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ, ತಂಬಾಕು ಉತ್ಪನ್ನಗಳ ಬಳಕೆ ಕಡಿಮೆ ಮಾಡಲೇಬೇಕೆಂಬ ನಿಲುವಿಗೆ ನಾವೆಲ್ಲರೂ ಬದ್ಧ. ಇದಕ್ಕಾಗಿ ಹಲವು ಕಾರ್ಯತಂತ್ರಗಳನ್ನು ರೂಪಿಸಲಾಗಿದೆ ಎಂದಿದ್ದಾರೆ. ಸಿಗರೇಟ್‍ಗೂ ಕ್ಯಾನ್ಸರ್‍ಗೂ ಸಂಬಂಧವಿಲ್ಲ ಎನ್ನುವುದು ಸಮಿತಿಯ ಶಿಫಾರಸಷ್ಟೆ. ಸಮಿತಿಯನ್ನು ಆರೋಗ್ಯ ಸಚಿವಾಲಯರಚಿಸಿದ್ದಲ್ಲ. ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಶ್ಯಾಮ್ ಚರಣ್ ಗುಪ್ತಾ ಹೇಳಿಕೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ ನಡ್ಡಾ.

 ನನ್ನ ಮೇಲೂ ಒತ್ತಡವಿತ್ತು
ಈ ನಡುವೆಯೇ  ಕೇಂದ್ರದ ಮಾಜಿ ಸಚಿವ, ಪಿಎಂಕೆ ನಾಯಕ ಅನ್ಬುಮಣಿ ರಾಮದಾಸ್ `ತಂಬಾಕು ಲಾಬಿ'ಯ ವಿಚಾರವನ್ನು ಹೊರಹಾಕಿದ್ದಾರೆ. ತಾವು ಸಚಿವರಾಗಿದ್ದಾಗ ತಂಬಾಕು ಉತ್ಪನ್ನಗಳಲ್ಲಿ ಚಿತ್ರಸಹಿತ ಎಚ್ಚರಿಕೆ ಪ್ರಕಟಿಸದಂತೆ ಒತ್ತಡಗಳುಬಂದಿದ್ದವು ಎಂಬ ವಿಚಾರ ಬಹಿರಂಗಪಡಿಸಿದ್ದಾರೆ. ತಂಬಾಕು ಲಾಬಿ, ನಾಲ್ವರು ಸಿಎಂ ಸೇರಿದಂತೆ ಅನೇಕ ನಾಯಕರಿಂದ ಭಾರಿ ಒತ್ತಡ ಎದುರಾಗಿದ್ದವು. ಆದರೂ ಅದಕ್ಕೆ ಮಣಿಯದೆ ಶೇ.40 ಎಚ್ಚರಿಕೆ ಹಾಕುವ ನಿರ್ಧಾರ ಕೈಗೊಂಡೆ ಎಂದಿ ದ್ದಾರೆ ರಾಮದಾಸ್. ಇದೇ ವೇಳೆ, ಈ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯಪ್ರವೇಶಿಸಿ ಶೇ.85 ಚಿತ್ರ ಸಹಿತ ಎಚ್ಚರಿಕೆ ಪ್ರಕಟಿಸುವಂತೆ ಆದೇಶಿಸಬೇಕು ಎಂದೂ ಅವರು ಕೋರಿದ್ದಾರೆ.

 ಮುಂದುವರಿದ ವಿವಾದ
ಬಹುಕೋಟಿ ಬೀಡಿ ಉದ್ಯಮಿ, ಬಿಜೆಪಿ ಸಂಸದ ಶ್ಯಾಮ್ ಚರಣ್ ಗುಪ್ತಾ ಅವರ ಬೆನ್ನಲ್ಲೇ ಸಂಸದರ ವಿವಾದಾತ್ಮಕ ಹೇಳಿಕೆಗಳ ಸರಣಿ ಮುಂದುವರಿದಿದೆ. ನನಗೆ ಗೊತ್ತಿರುವ ಇಬ್ಬರು ಅಜ್ಜಂದಿರು ದಿನಕ್ಕೆ ಫುಲ್ ಬಾಟಲಿ ಮದ್ಯ ಸೇವಿಸುತ್ತಾರೆ ಮತ್ತು 60 ಸಿಗರೇಟ್ ಸೇದುತ್ತಾರೆ. ಅವರಲ್ಲಿ ಒಬ್ಬರು ಈಗಲೂ ಬದುಕಿದ್ದಾರೆ, ಮತ್ತೊಬ್ಬರು 86ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ. ಹಾಗಾಗಿ ಸಿಗ ರೇಟ್‍ಗೂ ಕ್ಯಾನ್ಸರ್ ಗೂ ಸಂಬಂಧವಿಲ್ಲ. ಜತೆಗೆ ತಂಬಾಕು ಉತ್ಪನ್ನ ಮೂಲಿಕೆ ಔಷಧಿ ಎಂಬ ಬಗೆಗಿನ ಸತ್ಯವನ್ನು ಕಂಡುಕೊಳ್ಳಬೇಕಿದೆ ಎಂದು ಬಿಜೆಪಿ ಸಂಸದ ರಾಮ್ ಪ್ರಸಾದ್ ಶರ್ಮಾ  ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.