ಭಾರತದ ಪ್ರಸಿದ್ಧ ಪರ್ವತಾರೋಹಿ ಮಲ್ಲಿ ಮಸ್ತಾನ್ ಬಾಬು ಮೃತದೇಹ ಪತ್ತೆ
ಭಾರತದ ಪ್ರಸಿದ್ಧ ಪರ್ವತಾರೋಹಿ ಮಲ್ಲಿ ಮಸ್ತಾನ್ ಬಾಬು ಅವರ ಮೃತದೇಹ ಪತ್ತೆಯಾಗಿದೆ. ಮಾರ್ಚ್ 24ರಂದು ಕಣ್ಮರೆಯಾಗಿದ್ದ...

ನವದೆಹಲಿ: ಭಾರತದ ಪ್ರಸಿದ್ಧ ಪರ್ವತಾರೋಹಿ ಮಲ್ಲಿ ಮಸ್ತಾನ್ ಬಾಬು ಅವರ ಮೃತದೇಹ ಪತ್ತೆಯಾಗಿದೆ. ಮಾರ್ಚ್ 24ರಂದು ಕಣ್ಮರೆಯಾಗಿದ್ದ ಅವರ ಮೃತದೇಹವನ್ನು ರಕ್ಷಣಾ ತಂಡ ಹೊರ ತೆಗೆದಿದೆ.
ಅರ್ಜೆಂಟಿನಾ ಮತ್ತು ಚಿಲಿ ನಡುವಿನ ಎತ್ತರದ ಪರ್ವತಗಳನ್ನು ಹತ್ತಲು ಹೋಗಿದ್ದರು. ಈ ವೇಳೆ ಮಲ್ಲಿ ಮಸ್ತಾನ್ ಬಾಬು ಕಣ್ಮರೆಯಾಗಿದ್ದು, ಇದೀಗ ಅವರ ಮೃತದೇಹ ಪತ್ತೆಯಾಗಿದೆ ಎಂದು ಮಸ್ತಾನ್ ಬಾಬು ಅವರ ಸ್ನೇಹಿತ ಸತ್ಯಂ ಭೀಮರಶೆಟ್ಟಿ ಟೈಮ್ಸ್ ಪತ್ರಿಕೆಗೆ ತಿಳಿಸಿದ್ದಾರೆ.
ಮಸ್ತಾನ್ ಬಾಬು ಕಣ್ಮರೆಯಾದ ದಿನದಿಂದ ಅವರ ಸ್ನೇಹಿತ ಸತ್ಯಂ ಅವರು ಫೇಸ್ ಬುಕ್ ಪೇಜ್ ನಲ್ಲಿ ಬಾಬು ಅರ್ಜೆಂಟಿನಾ, ಚಿಲಿ ಪರ್ವತಗಳ ನಡುವೆ ಕಣ್ಮರೆಯಾಗಿದ್ದಾರೆ ಎಂದು ಘೋಷಿಸಿದ್ದರು.
ಅರ್ಜೆಂಟಿನಾ ಮತ್ತು ಚಿಲಿ ದೇಶಗಳ ಹೆಲಿಕಾಫ್ಟರ್ ತಂಡ ಅಂಡೇಸ್ ಪರ್ವತಗಳಲ್ಲಿ ಮಲ್ಲಿ ಮಸ್ತಾನ್ ಬಾಬು ಅವರಿಗಾಗಿ ಹುಡುಗಾಟ ನಡೆಸಿದ್ದವು.
ಉತ್ತರ ಅಮೆರಿಕಾದ ಮೌಂಟ್ ದೆನಾಲಿ, ಅಂಟಾರ್ಟಿಕಾದ ಮೌಂಟ್ ವಿನ್ಸರ್ ಮಾಸ್ಸಿಫ್, ಆಸ್ಟ್ರೇಲಿಯಾದ ಕೊಸಸಿಯೋಸ್ಕೋ ಮತ್ತು ವಿಶ್ವದ ಅತ್ಯಂತ ಎತ್ತರದ ಮೌಂಟ್ ಎವರೆಸ್ಟ್ ಶಿಖರ ಏರುವ ಮೂಲಕ ವಿಶ್ವದ ಎಲ್ಲ ಏಳು ಗಿರಿಶೃಂಗಗಳನ್ನು ಏರಿದ ಭಾರತೀಯ ಎಂಬ ಖ್ಯಾತಿಗೆ ಆಂಧ್ರಪ್ರದೇಶದ ಮಲ್ಲಿ ಮಸ್ತಾನ್ ಬಾಬು ಸಹ ಸೇರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


