ದೇಶ

ಶೌಚಾಲಯ ನಿರ್ಮಾಣ: ರಾಜ್ಯಕ್ಕೆ 3ನೇ ಸ್ಥಾನ

ಸಮುದಾಯ ಶೌಚಾಲಯ ನಿರ್ಮಾಣದಲ್ಲಿ ಒಡಿಶಾ ಮೊದಲ ಸ್ಥಾನ ಪಡೆದಿದ್ದರೆ, ಪ್ರತಿ ಮನೆಗೂ ಶೌಚಾಲಯ ನಿರ್ಮಿಸಿಕೊಟ್ಟಿದ್ದರಲ್ಲಿ ಗುಜರಾತ್ ಪ್ರಥಮ ಸ್ಥಾನದಲ್ಲಿದೆ...

ಶೌಚಾಲಯ ನಿರ್ಮಾಣ: ರಾಜ್ಯಕ್ಕೆ 3ನೇ ಸ್ಥಾನ
ಶೌಚಾಲಯ
Published On :

ನವದೆಹಲಿ: ಸಮುದಾಯ ಶೌಚಾಲಯ ನಿರ್ಮಾಣದಲ್ಲಿ ಒಡಿಶಾ ಮೊದಲ ಸ್ಥಾನ ಪಡೆದಿದ್ದರೆ, ಪ್ರತಿ ಮನೆಗೂ ಶೌಚಾಲಯ ನಿರ್ಮಿಸಿಕೊಟ್ಟಿದ್ದರಲ್ಲಿ ಗುಜರಾತ್ ಪ್ರಥಮ ಸ್ಥಾನದಲ್ಲಿದೆ. ಹೀಗೆಂದು ನಗರಾಭಿವೃದ್ಧಿ ಸಚಿವಾಲಯದ ವರದಿ ತಿಳಿಸಿದೆ. ಕಳೆದ ವಿತ್ತೀಯ ವರ್ಷದಲ್ಲಿ ದೇಶಾದ್ಯಂತ 2,70,069 ಮನೆಗಳಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಈ ಪೈಕಿ ಗುಜರಾತ್ ಮೊದಲ ಸ್ಥಾನದಲ್ಲಿದ್ದು, ಇಲ್ಲಿ ಶೇ.60(1,65,376)ರಷ್ಟು ಶೌಚಾಲಯಗಳು ನಿರ್ಮಾ ಗೊಂಡಿವೆ. ನಂತರದ ಸ್ಥಾನವನ್ನು ಮಧ್ಯಪ್ರದೇಶ(99,151) ಪಡೆದುಕೊಂಡರೆ, 4,697 ಶೌಚಾಲಯಗಳನ್ನು ನಿರ್ಮಿಸಿರುವ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಇನ್ನು ದೇಶಾದ್ಯಂತ 2014-15ರಲ್ಲಿ ಒಟ್ಟು 1,222 ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಈ ಪೈಕಿ ಒಡಿಶಾದಲ್ಲಿ 740, ಅಂಡಮಾನ್ ಮತ್ತು ನಿಕೋಬಾರ್‍ನಲ್ಲಿ 200 ಮತ್ತು ಕರ್ನಾಟಕದಲ್ಲಿ 100 ಶೌಚಾಲಯಗಳು ನಿರ್ಮಾಣವಾಗಿವೆ. ಇದೇ ವೇಳೆ, ಕರ್ನಾಟಕದ 40 ನಗರಗಳಲ್ಲಿ ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಮಾಡಲಾಗಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.