ದೇಶ

ಕೀನ್ಯಾ ವಿವಿ ಮೇಲೆ ಉಗ್ರ ದಾಳಿ 147 ವಿದ್ಯಾರ್ಥಿಗಳ ಸಾವು

ಕೀನ್ಯಾದ ವಾಯವ್ಯ ಪ್ರಾಂತ್ಯದಲ್ಲಿರುವ ಗರಿಸ್ಸಾ ವಿಶ್ವವಿದ್ಯಾಲಯದಲ್ಲಿ ಶಬಾಬ್ ಉಗ್ರರು ನಡೆಸಿದ ಗುಂಡಿನ ದಾಳಿಗೆ 70 ಮಂದಿ ವಿದ್ಯಾರ್ಥಿಗಳು...

ಕೀನ್ಯಾ ವಿವಿ ಮೇಲೆ ಉಗ್ರ ದಾಳಿ 147 ವಿದ್ಯಾರ್ಥಿಗಳ ಸಾವು
ಗರಿಸ್ಸಾ ವಿಶ್ವವಿದ್ಯಾಲಯದಲ್ಲಿ ಶಬಾಬ್ ಉಗ್ರರ ಗುಂಡಿನ ದಾಳಿ (ಚಿತ್ರ ಕೃಪೆ : ಎ ಪಿ)
Published On :

ನೈರೋಬಿ: ಕೀನ್ಯಾದ ವಾಯವ್ಯ ಪ್ರಾಂತ್ಯದಲ್ಲಿರುವ ಗರಿಸ್ಸಾ ವಿಶ್ವವಿದ್ಯಾಲಯದಲ್ಲಿ ಶಬಾಬ್ ಉಗ್ರರು ನಡೆಸಿದ ಗುಂಡಿನ ದಾಳಿಗೆ 147 ಮಂದಿ ವಿದ್ಯಾರ್ಥಿಗಳು ಅಸುನೀಗಿದ್ದಾರೆ. ಇದು 1998ರ ಅಮೆರಿಕ ರಾಯಭಾರ ಕಚೇರಿ ಮೇಲಿನ ದಾಳಿಯ ಬಳಿಕ ನಡೆದ ಅತ್ಯಂತ ದೊಡ್ಡ ದುರಂತ ಎಂದು ಕೀನ್ಯಾ ಸರ್ಕಾರ ಬಣ್ಣಿಸಿದೆ.
ಗುರುವಾರ ಏಕಾಏಕಿ ವಿವಿಯೊಳಗೆ ನುಗ್ಗಿದ ಉಗ್ರರು, ಒಳಗೆ ಮಲಗಿದ್ದ ವಿದ್ಯಾರ್ಥಿಗಳ ಮೇಲೆ ಒಂದೇ ಸಮನೆ ಗುಂಡಿನ ಮಳೆಗೆರೆದರು. ಜತೆಗೆ, ಗ್ರೆನೇಡ್‍ಗಳನ್ನೂ ಎಸೆದರು. ಇದಕ್ಕೂ ಮೊದಲು ಮುಸ್ಲಿಮರನ್ನು ,ಮಾತ್ರ ಹೊರಕ್ಕೆ ಕಳುಹಿಸಿ, ಕ್ರಿಶ್ಚಿಯನ್ನರು ಮತ್ತು ಇತರರನ್ನು ಒತ್ತೆಯಾಳಾಗಿ ಇರಿಸಿಕೊಂಡರು. ಗುಂಡಿನ ದಾಳಿಯಿಂದಾಗಿ 70 ವಿದ್ಯಾರ್ಥಿಗಳು ಮೃತಪಟ್ಟರೆ, ಕನಿಷ್ಠ 79 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ 9 ಮಂದಿಯ ಸ್ಥಿತಿ ಗಂಭೀರವಾಗಿದೆ. ಮೊದಲಿಗೆ ವಿವಿಯ ಗೇಟುಗಳನ್ನು ತೆರೆಯಲೆಂದು ಗ್ರೆನೇಡ್ ದಾಳಿ ನಡೆಸಲಾಗಿತ್ತು.
ಅಲ್ಲಿಂದ ಆರಂಭವಾದ ಹತ್ಯಾಕಾಂಡ ಸತತ 13 ಗಂಟೆಗಳ ಕಾಲ ಮುಂದುವರಿದಿತ್ತು. ನಂತರ ಭದ್ರತಾಪಡೆಗಳು ನಡೆಸಿದ ಕಾರ್ಯಾಚರಣೆ ವೇಳೆ ನಾಲ್ವರು ಉಗ್ರರು ಹತರಾಗಿದ್ದಾರೆ. ದಾಳಿಯ ಹೊಣೆ ಹೊತ್ತುಕೊಂಡಿರುವ ಶಬಾಬ್ ಉಗ್ರ ಸಂಘಟನೆ, `ಶಬಾಬ್ ವಿರುದ್ಧ ಮಾತನಾಡುವವರನ್ನು ಕೊಲ್ಲುವುದು ನಮ್ಮ ಉದ್ದೇಶ' ಎಂದು ಹೇಳಿಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.