ಹೊಸ್ನಿಗೆ ಕೋರ್ಟ್ ಮುಬಾರಕ್
ಸರ್ವಾಧಿಕಾರಿ ಆಡಳಿತದ ವಿರುದ್ಧ ನಡೆದ ಭಾರಿ ಕ್ರಾಂತಿಯ ಬಳಿಕ...

ಕೈರೋ: ಈಜಿಪ್ಟ್‌ನ ಮಾಜಿ ಸರ್ವಾಧಿಕಾರಿ ಹೊಸ್ನಿ ಮುಬಾರಕ್ ನಿರಾಳ.
ಸರ್ವಾಧಿಕಾರಿ ಆಡಳಿತದ ವಿರುದ್ಧ ನಡೆದ ಭಾರಿ ಕ್ರಾಂತಿಯ ಬಳಿಕ ಹುದ್ದೆ ಕಳೆದುಕೊಂಡಿದ್ದ ಮುಬಾರಕ್ 4 ವರ್ಷಗಳ ಬಳಿಕ ಖುಲಾಸೆಗೊಂಡಿದ್ದಾರೆ. 239 ಮಂದಿ ಪ್ರತಿಭಟನಕಾರರ ಹತ್ಯೆ ಆರೋಪ ಎದುರಿಸುತ್ತಿದ್ದ ಮುಬಾರಕ್ ನಿರ್ದೋಷಿ ಎಂದು ಶನಿವಾರ ಕೈರೋದ ನ್ಯಾಯಾಲಯ ತೀರ್ಪು ನೀಡಿದೆ. ಜತೆಗೆ, ಇಸ್ರೇಲ್‌ಗೆ ಅನಿಲ ರಫ್ತು ಮಾಡಿದ್ದಾರೆಂಬ ಆರೋಪದಿಂದಲೂ ಅವರನ್ನು ಖುಲಾಸೆಗೊಳಿಸಲಾಗಿದೆ.
ಮುಬಾರಕ್ ಆಡಳಿತಾವಧಿಯಲ್ಲಿ ಆಂತರಿಕ ಸಚಿವರಾಗಿದ್ದ ಹಬೀಬ್ ಅಲ್-ಅದ್ಲಿ ಸೇರಿದಂತೆ 7 ಮಂದಿ ಹಿರಿಯ ಅಧಿಕಾರಿಗಳ ವಿರುದ್ಧದ ಆರೋಪವನ್ನೂ ನ್ಯಾಯಾಲಯ ಕೈ ಬಿಟ್ಟಿದೆ.
ಆದರೆ ಸಾರ್ವಜನಿಕರ ಹಣ ದುರುಪಯೋಗ ಆರೋಪದಲ್ಲಿ 80 ವರ್ಷದ ಮುಬಾರಕ್ ಅವರು 3 ವರ್ಷಗಳ ಪತ್ಯೇಕ ಶಿಕ್ಷೆ ಅನುಭವಿಸುತ್ತಿದ್ದಾರೆ.
ಒಂದೆಡೆ ಖುಷಿ, ಒಂದೆಡೆ ನೋವು: ಮುಬಾರಕ್ ವಿರುದ್ಧದ ಪ್ರಕರಣಗಳ ಬಗ್ಗೆ ನ್ಯಾಯಾಲಯವು ತೀರ್ಪು ನೀಡುತ್ತಿದ್ದಂತೆ, ನ್ಯಾಯಾಲಯದ ಆವರಣದಲ್ಲಿ ಒಂದೆಡೆ ಖುಷಿಯ ಝೇಂಕಾರ, ಮತ್ತೊಂದು ಕಡೆ ಬೆಂಬಲ ಸಂಭ್ರಮಪಟ್ಟರು.
ಪರಸ್ಪರರನ್ನು ಅಪ್ಪಿಕೊಳ್ಳುತ್ತಾ, ಬೀದಿ ಬೀದಿಗಳನ್ನು ಕುಣಿದಾಡಿದರು. ಆದರೆ ಮತ್ತೊಂದೆಡೆ ಮೃತರ ಕುಟುಂಬ ಸದಸ್ಯರು ತಮ್ಮ ಪ್ರೀತಿಪಾತ್ರರ ಫೋಟೋಗಳನ್ನು ಹಿಡಿದುಕೊಂಡು ರೋದಿಸಿದರು. 2011ರ ಫೆ. 11 ರಂದು ಕೈರೋದಲ್ಲಿ ನಡೆದ ಪ್ರತಿಭಟನೆ ವೇಳೆ ಭದ್ರತಾ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ 800 ಮಂದಿ ಸಾವಿಗೀಡಾಗಿದ್ದಾರೆ. ಅವರನ್ನು ಯಾರೂ ಕೊಲ್ಲಿಸಿಲ್ಲ ಎಂದಾದರೆ ಅವರೇನು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡರೇ ಎಂದು ಆಕ್ರೋಶಭರಿತ ಕುಟುಂಬ ಸದಸ್ಯರು ಪ್ರಶ್ನಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


