ಚಿನ್ನದ ದರದಲ್ಲಿ ಮತ್ತೆ ಇಳಿಕೆ
ಕಳೆದ ವಾರವಷ್ಚೇ ಏರಿಕೆ ಕಂಡಿದ್ದ ಚಿನ್ನದ ದರ ಶನಿವಾರ ಮತ್ತೆ ಇಳಿಕೆ ಕಂಡಿದ್ದು, ಪ್ರತಿ 10 ಗ್ರಾಂ ಚಿನ್ನದ ದರದಲ್ಲಿ 406 ರುಪಾಯಿ ಇಳಿಕೆಯಾಗಿದೆ.

ನವದೆಹಲಿ: ಕಳೆದ ವಾರವಷ್ಚೇ ಏರಿಕೆ ಕಂಡಿದ್ದ ಚಿನ್ನದ ದರ ಶನಿವಾರ ಮತ್ತೆ ಇಳಿಕೆ ಕಂಡಿದ್ದು, ಪ್ರತಿ 10 ಗ್ರಾಂ ಚಿನ್ನದ ದರದಲ್ಲಿ 406 ರುಪಾಯಿ ಇಳಿಕೆಯಾಗಿದೆ.
ಚಿನ್ನದ ಮೇಲಿನ ಆಮದು ಪ್ರಕ್ರಿಯೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ವಿಧಿಸಿದ್ದ ಕಡ್ಡಾಯ ನಿಯಮಗಳನ್ನು ಸಡಿಲಿಸಿರುವ ಹಿನ್ನಲೆಯಲ್ಲಿ ಚಿನ್ನದ ದರ ಕಡಿತಗೊಂಡಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಮುಖವಾಗಿ ಆರ್‌ಬಿಐ 80/20 ಆಮದು ನೀತಿ ಸಡಿಲಗೊಂಡಿದ್ದೇ ಚಿನ್ನದ ದರ ಇಳಿಕೆಯ ಮೇಲೆ ಪ್ರಭಾವ ಬೀರಿದೆ ಎಂದು ಹೇಳಲಾಗುತ್ತಿದೆ. ಇನ್ನು ಬೆಳ್ಳಿ ದರದಲ್ಲಿಯೂ ಭಾರಿ ಇಳಿಕೆ ಕಂಡುಬಂದಿದ್ದು, ಪ್ರತಿ ಕೆಜಿ ಬೆಳ್ಳಿ ದರದಲ್ಲಿ ಸುಮಾರು 1.300 ರುಪಾಯಿ ಕಡಿತಗೊಂಡಿದೆ.
ಇತ್ತೀಚಿನ ದಿನಗಳಲ್ಲಿ ಷೇರುಮಾರುಕಟ್ಟೆಯಲ್ಲಿ ಗೂಳಿ ಪ್ರಭಾವ ಜೋರಾಗಿದ್ದು, ನಿನ್ನೆಯಷ್ಟೇ ಪ್ರಥಮ ಬಾರಿಗೆ ನಿಫ್ಟಿ 8, 600ರ ಗಡಿ ತಲುಪುವ ಮೂಲಕ ದಾಖಲೆ ನಿರ್ಮಿಸಿತ್ತು. ಇದಲ್ಲದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ನಿರಂತರ ಕುಸಿತ ಕಾಣುತ್ತಿರುವುದು ಕೂಡ ಷೇರುಮಾರುಕಟ್ಟೆಯ ಚೇತರಿಕೆಗೆ ಕಾರಣವಾಗಿತ್ತು. ಇದಲ್ಲಿದೆ ಜಿಡಿಪಿ ದರ ಕೂಡ ಶೇ.5.3ಕ್ಕೆ ಏರಿಕೆಯಾಗಿತ್ತು. ಇದರ ಪ್ರಭಾವ ಚಿನಿವಾರ ಪೇಟೆಯ ಮೇಲೆಯೂ ಆಗಿದ್ದು, ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಕಡಿತವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು ಇಳಿಯಲಿದೆ ಚಿನ್ನದ ದರ..!
ಇನ್ನು ಹೂಡಿಕೆ ತಜ್ಞರ ಅಭಿಪ್ರಾಯದಂತೆ ಚಿನ್ನದ ದರ ಇಳಿಕೆ ಪ್ರಯಾಣ ಮತ್ತಷ್ಟು ದಿನ ಮುಂದುವರೆಯಲಿದ್ದು, ಒಂದು ಮೂಲದ ಪ್ರಕಾರ ಚಿನ್ನದ ದರ ಸುಮಾರು ಶೇ.5 ರಿಂದ ಶೇ.10 ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಅಂದರೆ ಭವಿಷ್ಯದಲ್ಲಿ ಚಿನ್ನದ ಸುಮಾರು 2200ರಿಂದ 2000 ರುಪಾಯಿಗೆ ಇಳಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಹೂಡಿಕೆ ದೃಷ್ಟಿಯಿಂದ ಚಿನ್ನದ ಮೇಲೆ ಬಂಡವಾಳ ಹಾಕ ಬಯಸುವವರು ಮತ್ತಷ್ಟು ದಿನ ಕಾಯ ಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


