ರಾಜಕೀಯ ಆಟದಿಂದ ಕೋಮುಗಲಭೆ ಉಂಟಾಗುತ್ತದೆ: ಜಮೀರ್ ಉದ್ದೀನ್
ರಾಜಾ ಮಹೇಂದ್ರ ಪ್ರತಾಪ್ ಅವರ ಜನ್ಮದಿನವನ್ನು ಅಲಿಗಡ...

ಅಲಿಘಡ: ರಾಜಾ ಮಹೇಂದ್ರ ಪ್ರತಾಪ್ ಅವರ ಜನ್ಮದಿನವನ್ನು ಅಲಿಘಡ ಮುಸ್ಲೀಂ ವಿಶ್ವವಿದ್ಯಾಲಯದಲ್ಲಿ ಆಚರಿಸುವುದರಿಂದ ಕೋಮುಗಲಭೆ ಉಂಟಾಗುತ್ತದೆ ಎಂದು ಎಎಂಯು ಕುಲಪತಿ ಜಮೀರ್ ಉದ್ದೀನ್ ಅಭಿಪ್ರಾಯ ಪಟ್ಟಿದ್ದಾರೆ.
ಡಿ.1 ರಂದು ಸ್ವಾತಂತ್ರ್ಯ ಹೋರಾಟಗಾರ ರಾಜಾ ಮಹೇಂದ್ರ ಪ್ರತಾಪ್ ಅವರ ಜನ್ಮದಿನದ ಅಂಗವಾಗಿ ಬಿಜೆಪಿ ಅಲಿಘಡ ಮುಸ್ಲೀಂ ವಿಶ್ವವಿದ್ಯಾಲಯದಲ್ಲಿ ಅದ್ದೂರಿ ಕಾರ್ಯಕ್ರಮವನ್ನು ಏರ್ಪಡಿಸಿದೆ.
ಬಿಜೆಪಿ ಹಾಗೂ ಆರ್‌ಎಸ್‌ಎಸ್ ಪಕ್ಷಗಳನ್ನು ವಿಶ್ವವಿದ್ಯಾಲಯದ ಒಳಗೆ ಕಾಲಿಡಲು ಬಿಡುವುದಿಲ್ಲ ಎಂದು ಎಎಂಯು ಸಂಘಟನೆಗಳು ಹೇಳುತ್ತಿದೆ.ರಾಜಕೀಯ ಆಟದಿಂದಾಗಿ ದೇಶದಲ್ಲಿ ಕೋಮು ಗಲಭೆ ಉಂಟಾಗುವ ಸಂಭವವಿದ್ದು, ಕೂಡಲೇ ಆಚರಣೆಯನ್ನು ಹಿಂಪಡೆಯುವಂತೆ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರಿಗೆ ಜಮೀರ್ ಉದ್ದೀನ್ ಪತ್ರ ಬರೆದಿದ್ದಾರೆ.
ಇದೊಂದು ರಾಜಕೀಯ ಆಟವಾಗಿರಬಹುದು ಆದರೆ ಇದೇ ಆಟ ಮುಂದೆ ಗಂಭೀರ ಸಮಸ್ಯೆ ಹುಟ್ಟುಹಾಕಿ ದೇಶದ ಶಾಂತಿಯನ್ನು ಹಾಳುಮಾಡಬಹುದು. ಕೆಲವು ಪಕ್ಷಗಳು ಈ ಆಚರಣೆಗೆ ಬೆಂಬಲ ಸೂಚಿಸುತ್ತಿದ್ದರೆ ಮತ್ತೆ ಕೆಲವು ಪಕ್ಷಗಳು ಕಾರ್ಯಕ್ರಮ ಮುಂದುವರೆಯಲು ಬಿಡುವುದಿಲ್ಲ ಎಂದು ಹೇಳುತ್ತಿವೆ. ಆದ್ದರಿಂದ ಅಶಾಂತಿ ಹುಟ್ಟುಹಾಕುವ ಕಾರ್ಯಕ್ರಮಗಳನ್ನು ವಿಶ್ವವಿದ್ಯಾಲಯದಲ್ಲಿ ಆಚರಿಸುವುದು ಬೇಡ ಎಂದು ಪತ್ರದಲ್ಲಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಪತ್ರದ ಕುರಿತು ಪ್ರತಿಕ್ರಿಯೆ ನೀಡಿರುವ ಸ್ಮೃತಿ ಇರಾನಿ ಅವರು ಈವರೆಗೆ ಯಾವುದೇ ಪತ್ರವೂ ತಮಗೆ ತಲುಪಿಲ್ಲ ಎಂದು ಹೇಳಿದ್ದು, ಪತ್ರ ತಲುಪಿದ ನಂತರವಷ್ಟೇ ಈ ಕುರಿತು ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


