ದೇಶ

ಜಮ್ಮುವಿನಲ್ಲಿ ದಾಖಲೆ ಮತ

ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಗಳವಾರ ಆರಂಭವಾದ...

ಜಮ್ಮುವಿನಲ್ಲಿ ದಾಖಲೆ ಮತ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಗಳವಾರ ಆರಂಭವಾದ ವಿಧಾನಸಭೆಯ ಮೊದಲ ಹಂತದ ಚುನಾವಣೆ ಇತಿಹಾಸ ಬರೆದಿದೆ. ಒಂದೆಡೆ ಶಾಂತಿ, ಮತ್ತೊಂದೆಡೆ ದಾಖಲೆ ಮತದಾನದ ಮೂಲಕ ಜನತೆ ಪ್ರತ್ಯೇಕತಾವಾದಿಗಳು ಮತ್ತು ಪಾಕ್ ಪ್ರಾಯೋಜಿತ ಉಗ್ರರಿಗೆ ಉತ್ತರ ನೀಡಿದ್ದಾರೆ.

ವಿಶೇಷವೆಂದರೆ ಚುನಾವಣೆ ನಡೆದ ಭಾಗದಲ್ಲಿ ಒಂದು ಕಡೆಯೂ ಹಿಂಸಾಚಾರವಾಗಿಲ್ಲ. ಜತೆಗೆ ಶೇ. 72.3 ರಷ್ಟು ಮತದಾನವಾಗುವ ಮೂಲಕ ದಾಖಲೆ ನಿರ್ಮಾಣವಾಗಿದೆ. ಇದು ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂಬುದು ಚುನಾವಣಾ ಆಯೋಗದ ಹೆಮ್ಮೆಯ ಮಾತು. ಉಗ್ರರ ಬೆದರಿಕೆಯನ್ನೂ ಲೆಕ್ಕಿಸದೆ ಅಲ್ಲಿನ ನಾಗರಿಕರು ಮತಗಟ್ಟೆಗೆ ಧಾವಿಸಿದ್ದು, ಕೊನೆಯ ಕ್ಷಣವಾದ ಸಂಜೆ 5 ಗಂಟೆಯಾದರೂ ಸರದಿಯಲ್ಲಿ ನಿಂತು ಜನರು ಉತ್ಸಾಹದಿಂದ ಬರುತ್ತಿದ್ದರು ಎಂದಿದೆ.

85ರಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಜಮ್ಮು ಭಾಗದಲ್ಲಿ 6, ಕಾಶ್ಮೀರ ವ್ಯಾಪ್ತಿಯಲ್ಲಿ 5 ಹಾಗೂ ಲಡಾಕ್‌ನ 4 ಕಡೆ ಮತದಾನ ನಡೆದಿದೆ. ಪ್ರತ್ಯೇಕತಾವಾದಿಗಳ ಬೆದರಿಕೆಯ ನಡುವೆಯೇ ನಡೆದ ಮತದಾನ 25 ವರ್ಷಗಳ ನಂತರ ಅಭೂತಪೂರ್ವ ಯಶಕಂಡಿದೆ.

ಕಳೆದ ಬಾರಿ ಹಿಂಸಾಚಾರದ ನಡುವೆ ಶೇ.64.97 ರಷ್ಟು ಮತ ಚಲಾವಣೆಯಾಗಿತ್ತು. ಆದರೆ, ಈ ಬಾರಿ ಕೈಗೊಳ್ಳಲಾಗಿರುವ ಭದ್ರತಾ ವ್ಯವಸ್ಥೆ ಅಲ್ಲಿನ ಜನರಲ್ಲಿ ಆತ್ಮವಿಶ್ವಾಸ ಮೂಡಿಸಿದ್ದು, ಮತಗಟ್ಟೆಯತ್ತ ಕಾಲಿಡುವಂತೆ ಮಾಡಿದೆ. ಜಾರ್ಖಂಡ್‌ನಲ್ಲಿಯೂ ಶೇ.62ರಷ್ಟೂ ಮತದಾನವಾಗಿದ್ದು, ಅಲ್ಲಲ್ಲಿ  ಸಣ್ಣಪುಟ್ಟ ಹಿಂಸಾಚಾರಗಳು ನಡೆದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.