ಸಾರ್ಕ್‌ಗೆ ಚೀನಾ ಲಾಬಿ
ಏಷ್ಯಾದಲ್ಲಿ ಪ್ರಮುಖ ಶಕ್ತಿಯಾಗಿ ಬೆಳೆಯಲು ಹಪಾಹಪಿಸುತ್ತಿರುವ ಚೀನಾದ ಕಣ್ಣು...

-ಪಾಕಿಸ್ತಾನ, ನೇಪಾಳ ನಾಯಕರ ಮೂಲಕ ಸದಸ್ಯತ್ವಕ್ಕೆ ಯತ್ನ
ಕಠ್ಮಂಡು: ಏಷ್ಯಾದಲ್ಲಿ ಪ್ರಮುಖ ಶಕ್ತಿಯಾಗಿ ಬೆಳೆಯಲು ಹಪಾಹಪಿಸುತ್ತಿರುವ ಚೀನಾದ ಕಣ್ಣು ಈಗ ಸಾರ್ಕ್ ಗುಂಪಿನ ಮೇಲೆ ಬಿದ್ದಿದೆ. ದಕ್ಷಿಣ ಏಷ್ಯಾದ ಎಂಟು ರಾಷ್ಟ್ರಗಳ ಗುಂಪಾದ ಸಾರ್ಕ್ ಸದಸ್ಯತ್ವ ಪಡೆಯಲು ಈಗ ಚೀನಾ ಲಾಬಿ ಆರಂಭಿಸಿದೆ.
ಇದಕ್ಕಾಗಿ ನೇಪಾಳದ ಪ್ರಮುಖ ರಾಜಕಾರಣಗಳು ಮತ್ತು ರಾಯಭಾರಿಗಳ ಮೂಲಕ ಸಾರ್ಕ್ ಸದಸ್ಯತ್ವ ರಾಷ್ಟ್ರಗಳ ಮೇಲೆ ಒತ್ತಡ ಹೇರಲು ಹೊರಟಿದೆ.
ಚೀನಾ ಎಷ್ಟೇ ವಿಶ್ವದ ಹಿರಿಯಣ್ಣನಾದ ಅಮೆರಿಕದ ಸರಿಸಮನಾಗಿ ಬೆಳೆಯುತ್ತಿದ್ದರೂ ದಕ್ಷಿಣ ಏಷ್ಯಾದಲ್ಲಿ ಭಾರತ ತನ್ನದೇ ಆದ ಪ್ರಭಾವ ಉಳಿಸಿಕೊಂಡಿದೆ. ಈ ಪ್ರಭಾವವನ್ನು ಮುರಿಯುವುದು ಚೀನಾದ ಗುರಿ. ಇದೇ ಕಾರಣಕ್ಕೆ ಚೀನಾದ ವಿದೇಶಾಂಗ ಖಾತೆ ಸಹಾಯಕ ಸಚಿವ ಲಿಯು ಝೆನ್ ನೇತೃತ್ವದ ನಿಯೋಗವೊಂದು ಸಾರ್ಕ್ ಸದಸ್ಯ ರಾಷ್ಟ್ರಗಳ ನಾಯಕರನ್ನು ಭೇಟಿಯಾಗಲಿದೆ ಎಂದು ಹೇಳಲಾಗಿದೆ.
ಚೀನಾದ ಪರ ಪಾಕಿಸ್ತಾನವೂ ತೀವ್ರ ಲಾಬಿ ಆರಂಭಿಸಿದೆ. ಈ ಗುಂಪಿನಲ್ಲಿ ವೀಕ್ಷಕನಾಗಿ ಚೀನಾಗೆ ಮಹತ್ವದ ಪಾತ್ರ ನೀಡಬೇಕು ಎಂದು ಮಂಗಳವಾರ ನಡೆದ ಸಾರ್ಕ್ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಒತ್ತಾಯಿಸಿದೆ. ಶ್ರೀಲಂಕಾ ಕೂಡ ಚೀನಾದ ಕೃಪಾಕಟಾಕ್ಷದಲ್ಲೇ ಇದೆ. ಇನ್ನು ನೇಪಾಳ ಇತರೆ ರಾಷ್ಟ್ರಗಳು ಒಪ್ಪಿದರೆ ಚೀನಾಗೆ ಸದಸ್ಯತ್ವ ನೀಡುವುದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ. ಸದ್ಯ ಚೀನಾವು ಸಾರ್ಕ್‌ನ ಎಂಟು ವೀಕ್ಷಕ ರಾಷ್ಟ್ರಗಳಲ್ಲಿ ಒಂದಾಗಿದೆ.
ಪ್ರಸ್ತಾಪ ಆಗಿಲ್ಲ: ಸಾರ್ಕ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿಚೀನಾಗೆ ಸದಸ್ಯತ್ವ ನೀಡುವ ವಿಚಾರ ಪ್ರಸ್ತಾಪವಾಗಿಲ್ಲ. ಈ ವಿಚಾರ ಸಭೆಯ ಕಾರ್ಯಸೂಚಿಯಲ್ಲೇ ಇರಲಿಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


