ದೇಶ

ಸರ್ಕಾರಿ ಆಸ್ಪತ್ರೆಗಳಲ್ಲಿ ನಿವೃತ್ತ ವೈದ್ಯರ ಸೇವೆಗೂ ಅವಕಾಶ

ಸರ್ಕಾರಿ ವೈದ್ಯರ ಕೊರತೆ ನೀಗಿಸಲು ನಿವೃತ್ತ ವೈದ್ಯರ...

ಸರ್ಕಾರಿ ಆಸ್ಪತ್ರೆಗಳಲ್ಲಿ ನಿವೃತ್ತ ವೈದ್ಯರ ಸೇವೆಗೂ ಅವಕಾಶ
ಸಾಂದರ್ಭಿಕ ಚಿತ್ರ
Published On :

ಮಂಗಳೂರು: ಸರ್ಕಾರಿ ವೈದ್ಯರ ಕೊರತೆ ನೀಗಿಸಲು ನಿವೃತ್ತ ವೈದ್ಯರ ನೇಮಕಕ್ಕೆ ಆದೇಶ ಹೊರಡಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

65 ವರ್ಷದೊಳಗಿನ ತಜ್ಞ ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುವುದು. ಈ ರೀತಿ ನೇಮಕವಾದ ವೈದ್ಯರು 3 ವರ್ಷಗಳ ಅವಧಿಗೆ ಸೇವೆಯನ್ನು ನೀಡಬಹುದು. ಖಾಸಗಿ ವೈದ್ಯರಿಗೂ ಮಾಸಿಕ, ದಿನ ವಹಿ ಗುತ್ತಿಗೆ ಆಧಾರದಲ್ಲಿ ವೈದ್ಯಕೀಯ ಸೇವೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅರವಳಿಕೆ ತಜ್ಞರು ಪ್ರತಿ ಶಸ್ತ್ರ ಚಿಕಿತ್ಸೆ ಲೆಕ್ಕದಲ್ಲಿ ಸೇವೆ ನೀಡಲು ಮುಂದೆ ಬಂದಿದ್ದಾರೆ. ರಾಜ್ಯದಲ್ಲಿ ರೇಡಿಯಾಲಜಿಸ್ಟ್‌ಗಳ ಕೊರತೆ ಇದೆ. ಆದ್ದರಿಂದ ಸ್ಕ್ಯಾನ್ ಇತ್ಯಾದಿ ತಾಂತ್ರಿಕ ಸಹಾಯಕರಿಗೆ ತರಬೇತಿ ನೀಡಲಾಗುವುದು. ರಾಜ್ಯದಲ್ಲಿ ರೇಡಿಯಾಲಜಿಸ್ಟ್‌ಗಳನ್ನು ವಲಯವಾರು ಗುರುತಿಸಿ ಅವರ ಸೇವೆಯನ್ನು ಅಂತರ್ಜಾಸಲ ಮೂಲಕ (ಟೆಲಿ ಸರ್ವಿಸ್) ಪಡೆಯಲಾಗುವುದು ಎಂದರು.

ಶಾಸಕರಿಗೂ ಅವಕಾಶ


ರಾಜ್ಯದಲ್ಲಿ ವೈದ್ಯರಾಗಿರುವ ಶಾಸಕರೂ ಕೂಡ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸಲು ಅವಕಾಶ ಕೋರಿದ್ದಾರೆ. ಒಟ್ಟು 9 ವೈದ್ಯ ಶಾಸಕರಿದ್ದಾರೆ. ಆಸಕ್ತರಿಗೆ ಅವರ ವ್ಯಾಪ್ತಿಯ ಆರೋಗ್ಯ ಕೇಂದ್ರ, ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ನೀಡಲಾಗುವುದು ಎಂದರು.

108ತ್ತೆ 198 ಸೇರ್ಪಡೆ


ರಾಜ್ಯಕ್ಕೆ 108 ಆರೋಗ್ಯ ಕವಚಕ್ಕೆ ಹೊಸದಾಗಿ ಸೇರ್ಪಡೆಗೊಂಡ 198 ಆ್ಯಂಬುಲೆನ್ಸ್‌ಗಳನ್ನು ನ.25ರಂದು ಬೆಂಗಳೂರಿನ ವಿಧಾನಸೌಧದಲ್ಲಿ ಲೋಕಾರ್ಪಣೆ ಮಾಡಲಾಗುವುದು. ಇದರಲ್ಲಿ 98 ಆ್ಯಂಬುಲೆನ್ಸ್‌ಗಳು ರಾಜ್ಯ ಬಜೆಟ್ ಮಂಡನೆಯಿಂದ ಅನುದಾನ ನೀಡಲಾಗಿದೆ ಎಂದು ಸಚಿವ ಖಾದರ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.