ಪ್ರಧಾನಿ ಪತ್ನಿ ಜಶೋದಾ ಬೆನ್ ಆರ್‌ಟಿಐ ಮೊರೆ
ಪ್ರಧಾನಿ ಪತ್ನಿ ಅನ್ನುವ ಕಾರಣಕ್ಕೆ ನೀಡಲಾಗಿರುವ ಭದ್ರತಾ ಸೌಲಭ್ಯದಿಂದ ಜಶೋದಾ...

ಅಹಮದಾಬಾದ್: ಪ್ರಧಾನಿ ಪತ್ನಿ ಅನ್ನುವ ಕಾರಣಕ್ಕೆ ನೀಡಲಾಗಿರುವ ಭದ್ರತಾ ಸೌಲಭ್ಯದಿಂದ ಜಶೋದಾ ಬೆನ್ ಗೊಂದಲ ಹಾಗೂ ಆತಂಕಕ್ಕೆ ಗುರಿಯಾಗಿದ್ದಾರೆ.
ಇದೇ ಕಾರಣಕ್ಕೆ ತಮಗೆ ನೀಡಲಾಗಿರುವ ಭದ್ರತೆಗೆ ಸಂಬಂಧಿಸಿದ ವಿವರ ನೀಡುವಂತೆ ಅವರು ಆರ್‌ಟಿಐ ಮೊರೆ ಹೋಗಿದ್ದಾರೆ!
ನರೇಂದ್ರ ಮೋದಿ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಪ್ರಧಾನಿ ಪತ್ನಿ ಎನ್ನುವ ಕಾರಣಕ್ಕೆ ಜಶೋದಾಗೆ ಕೇಂದ್ರ ಸರ್ಕಾರ 24 ಗಂಟೆ ಬಿಗಿ ಭದ್ರತೆ ಒದಗಿಸುತ್ತಿದೆ. ಆದರೆ, ಅನೇಕ ಬಾರಿ ಈ ಭದ್ರತೆ ಜಶೋದಾ ಅವರಲ್ಲಿ ಆತಂಕ ಸೃಷ್ಟಿಸಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಿರುವ ಅವರು, ಪ್ರಧಾನಿ ಪತ್ನಿ ಅನ್ನುವ ಕಾರಣಕ್ಕೆ ಶಿಷ್ಟಾಚಾರದಂತೆ ಒದಗಿಸಲಾಗಿರುವ ಭದ್ರ ಸೇರಿದಂತೆ ಇನ್ನಿತರ ಸೌಲಭ್ಯಗಳ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ಇದೇ ವೇಳೆ, ನಾನು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುತ್ತೇನೆ. ನನ್ನ ಭದ್ರತಾ ಸಿಬ್ಬಂದಿ ಸರ್ಕಾರಿ ವಾಹನದಲ್ಲಿ ಸಂಚರಿಸುತ್ತಾರೆ ಎಂದೂ ದೂರಿದ್ದಾರೆ. ಜತೆಗೆ, ಹಿಂದಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅವರ ಭದ್ರತಾ ಸಿಬ್ಬಂದಿಯೇ ಹತ್ಯೆ ಮಾಡಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ನನಗೆ ಒದಗಿಸಲಾಗಿರುವ ಭದ್ರತೆಯಿಂದ ಆತಂಕಗೊಂಡಿದ್ದೇನೆ ಎಂದು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


