ಶ್ರೀಮಂತರಿಗಿಲ್ಲ ಎಲ್‌ಪಿಜಿ ಸಬ್ಸಿಡಿ..?
ಬಡವರಿಗೆ ಅಡುಗೆ ಅನಿಲ ಸಿಲಿಂಡರ್ ಮೇಲೆ ಸಬ್ಸಿಡಿ ನೀಡುವುದು ಸರಿ, ಆದರೆ ಶ್ರೀಮಂತರಿಗೂ ಸಬ್ಸಿಡಿ ನೀಡಬೇಕಾದ ಅಗತ್ಯವಿದೆಯೇ?

ನವದೆಹಲಿ: ಬಡವರಿಗೆ ಅಡುಗೆ ಅನಿಲ ಸಿಲಿಂಡರ್ ಮೇಲೆ ಸಬ್ಸಿಡಿ ನೀಡುವುದು ಸರಿ, ಆದರೆ ಶ್ರೀಮಂತರಿಗೂ ಸಬ್ಸಿಡಿ ನೀಡಬೇಕಾದ ಅಗತ್ಯವಿದೆಯೇ?
ಅರ್ಥಿಕವಾಗಿ ಸಬಲರಾಗಿರುವವರಿಗೆ ಎಲ್‌ಪಿಜಿ ಸಬ್ಸಿಡಿ ರದ್ದು ಮಾಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಸ್ವತಃ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರೇ ಈ ಸುಳಿವು ನೀಡಿದ್ದಾರೆ.
ನನ್ನಂತಹ ಜನರಿಗೂ ಎಲ್‌ಪಿಜಿ ಸಬ್ಸಿಡಿ ನೀಡಬೇಕೇ, ಬೇಡವೇ ಎಂಬುದೇ ನಮ್ಮ ಸರ್ಕಾರ ಕೈಗೊಳ್ಳುವ ಮುಂದಿನ ಮಹತ್ವದ ನಿರ್ಧಾರ ಎಂದಿದ್ದಾರೆ ಜೇಟ್ಲಿ. ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸದ್ಯದಲ್ಲೇ ನಾವು ಯಾರಿಗೆ ಸಬ್ಸಿಡಿ ನೀಡಬೇಕು, ಯಾರಿಗೆ ನೀಡಬಾರದು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ನಮ್ಮ ಅಜೆಂಡಾದಲ್ಲಿ ಇದೂ ಸೇರಿದೆ ಎಂದಿದ್ದಾರೆ. ಜತೆಗೆ ಪ್ರಸ್ತುತ ಪ್ರತಿ ಗ್ರಾಹಕನಿಗೆ ವರ್ಷಕ್ಕೆ 12 ಸಿಲಿಂಡರ್‌ಗಳನ್ನು ಸಬ್ಸಿಡಿ ದರದಲ್ಲಿ ಒದಗಿಸಲಾಗುತ್ತದೆ. ಈ ಮಿತಿಯನ್ನು ದಾಟಿದರೆ ಗ್ರಾಹಕನು ಮಾರುಕಟ್ಟೆ ದರವನ್ನೇ ನೀಡಿ ಸಿಲಿಂಡರ್ ಖರೀದಿಸಬೇಕು ಎಂದಿದ್ದಾರೆ.
ದೃಢ ನಾಯಕನಿದ್ದರೆ ಕಷ್ಟದ ನಿರ್ಧಾರವೂ ಸರಳ
ರಾಜಕೀಯ ನಾಯಕತ್ವ ಅಂದರೆ ದೇಶದ ಉನ್ನತ ನಾಯಕನು ದೃಢನಿರ್ಧಾರ ಕೈಗೊಳ್ಳುವವನಾದರೆ, ಎಂತಹ ಕಷ್ಟದ ನಿರ್ಧಾರವೂ ಸರಳವಾಗಿ ಬಿಡುತ್ತದೆ. ಆಗ ಕಲ್ಲಿದ್ದಲು ನಿಕ್ಷೇಪ, ಸ್ಪೆಕ್ಟ್ರಂ, ನೈಸರ್ಗಿಕ ಸಂಪನ್ಮೂಲ, ಡೀಸೆಲ್ ಮತ್ತು ಅನಿಲ ದರ ನಿಗದಿ ಮತ್ತಿತ್ತರ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ವರ್ಷಾನುಗಟ್ಟಲೆ ಕಾಯಬೇಕಾಗಿರುವುದಿಲ್ಲ. ನಮ್ಮ ಸರ್ಕಾರವು ಸ್ವಲ್ಪವೂ ಸಮಯ ವ್ಯರ್ಥ ಮಾಡದೆ ಇವುಗಳ ಬಗ್ಗೆ ನಿರ್ಧಾರ ಕೈಗೊಂಡಿದೆ. ಮುಂದೆಯೂ ಇದೇ ಕ್ರಮ ಅನುಸರಿಸುತ್ತೇವೆ ಎಂದು ಜೇಟ್ಲಿ ಹೇಳಿದರು.
ಜೇಟ್ಲಿ ಹೇಳಿದ್ದೇನು?
ಶ್ರೀಮಂತರಿಗೆ ಸಬ್ಸಿಡಿ ಸಹಿತ ಎಲ್‌ಪಿಜಿ ಸಿಲಿಂಡರ್ ನೀಡಬೇಕೇ, ಬೇಡವೇ ಎಂಬ ಬಗ್ಗೆ ಶೀಘ್ರ ತೀರ್ಮಾನ
ವಾರ್ಷಿಕ 12ರ ಸಿಲಿಂಡರ್ ಮಿತಿ ಮೀರಿದರೆ, ನಂತರದ ಸಿಲಿಂಡರ್‌ಗಳಿಗೆ ಸಬ್ಸಿಡಿ ಇಲ್ಲ. ಮಾರುಕಟ್ಟೆ ದರದಲ್ಲೇ ಸಿಲಿಂಡರ್ ಖರೀದಿಸಬೇಕು.
ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಡಿಸೆಲ್ ದರವನ್ನು ನಿಯಂತ್ರಣ ಮುಕ್ತಗೊಳಿಸಿದೆ. ಈ ಹಿಂದಿನ ಸರ್ಕಾರವು ಡೀಸೆಲ್ ಮೇಲೆ ಸಬ್ಸಿಡಿ ನೀಡುತ್ತಿತ್ತು.
ಸರಕು ಮತ್ತು ಸೇವಾ ತೆರಿಗೆ ಬಗೆಗಿನ ಪ್ರಸ್ತಾಪ ಸಿದ್ದವಾಗಿದೆ. ಸಂವಿಧಾನ ತಿದ್ದುಪಡಿ ವಿಧೇಯಕವನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು.
ವಿಮಾಕ್ಷೇತ್ರದಲ್ಲಿ ಎಫ್‌ಡಿಐ ಅನ್ನು ಶೇ.26ರಿಂದ 49ಕ್ಕೆ ಏರಿಸುವ ವಿಮಾ ಮಸೂದೆ ಬಗ್ಗೆಯೂ ಸದ್ಯದಲ್ಲೇ ತೀರ್ಮಾನ
ಪ್ರಸಕ್ತ ವಿತ್ತೀಯ ವರ್ಷದಲ್ಲೇ ತೆರಿಗೆ ಆದಾಯ ಗುರಿ ತಲುಪುವುದು ಕಷ್ಟ
ನೇರ ತೆರಿಗೆಯಲ್ಲಿನ ಗುರಿ ಮುಟ್ಟುವ ನಿರೀಕ್ಷೆಯಿದೆ. ಆದರೆ ಪರೋಕ್ಷ ತೆರಿಗೆಯಲ್ಲಿನ ಗುರಿ ಮುಟ್ಟುವ ನಿರೀಕ್ಷೆಯಿದೆ ಆದರೆ ಪರೋಕ್ಷ ತೆರಿಗೆಯ ಗುರಿ ತಲುಪುವುದೇ ದೊಡ್ಡ ಸವಾಲು
24ರಿಂದ ಸಂಸತ್ ಅಧಿವೇಶನ: ಸಂಸತ್‌ನ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗಲಿದೆ. ಒಂದು ತಿಂಗಳ ಕಾಲ ಅಧಿವೇಶನ ನಡೆಯಲಿದ್ದು, ಡಿ.23ರಂದು ಮುಕ್ತಾಯವಾಗಲಿದೆ. 2014-15ರ ವಿತ್ತೀಯ ಕೊರೆತೆಯ ಗುರಿ ಮುಟ್ಟಬೇಕೆಂದರೆ ಮುಂದಿನ 4 ತಿಂಗಳಿಗೆ ಮೋದಿ ಸರ್ಕಾರವು ಪ್ರಗತಿ ಪರ ಕ್ರಮಗಳನ್ನು ಕೈಗೊಳ್ಳಬೇಕು. ಹೀಗಾಗಿ ವಿದೇಶಿ ಬಂಡವಾಳವನ್ನು ದೇಶದಲ್ಲಿ ಹೆಚ್ಚಿಸುವ ನಿಟ್ಟಿನಲ್ಲಿ ವಿಮಾ ಕ್ಷೇತ್ರದಲ್ಲಿ ಎಫ್‌ಡಿಐ, ಕಾರ್ಮಿಕ ಮತ್ತು ಭೂಸುಧಾರಣೆಗೆ ಸೇರಿದಂತೆ ಅನೇಕ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಅಧಿವೇಶನ ಮುಗಿದ ಬಳಿಕ ಫೆಬ್ರವರಿಯಲ್ಲಿ ಜೇಟ್ಲಿ ಅವರು ಮಂಡಿಸಲಿರುವ ಬಜೆಟ್‌ನತ್ತ ಎಲ್ಲರ ಗಮನಹರಿಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


