ಮುಖ್ಯ ದಾಖಲೆ ಪತ್ರಗಳಿಗೆ ಇ-ಲಾಕರ್
ಮಹಾರಾಷ್ಟ್ರ ಸರ್ಕಾರ ಆಧಾರ್ ಚೀಟಿ ಬೆಂಬಲಿತ ಆನ್‌ಲೈನ್ ಸಂಪುಟವನ್ನು ರಚಿಸಿದೆ. ಉದ್ಯೋಗ, ಬ್ಯಾಂಕ್...

ಮುಂಬೈ: ಮಹಾರಾಷ್ಟ್ರ ಸರ್ಕಾರ ಆಧಾರ್ ಚೀಟಿ ಬೆಂಬಲಿತ ಆನ್‌ಲೈನ್ ಸಂಪುಟವನ್ನು ರಚಿಸಿದೆ. ಉದ್ಯೋಗ, ಬ್ಯಾಂಕ್ ಹಾಗೂ ಇತರ ಸೇವೆಗಳನ್ನು ಪಡೆಯುವಾಗಿ ಆದಾಯ ಹಾಗೂ ಜಾತಿ ಪ್ರಮಾಣ ಪತ್ರಗಳು, ಪದವಿ, ಆಸ್ತಿಪತ್ರ, ಜನನ ಪತ್ರ, ಜನನ ಪತ್ರ, ವಿವಾಹ ದಾಖಲೆ ಮತ್ತಿತರ ದಾಖಲಾ ಪತ್ರಗಳನ್ನು ಪದೇ-ಪದೇ ಆಪ್‌ಲೋಡ್ ಮಾಡಬೇಕಾದ ಪರಿಸ್ಥಿತಿ ಇರುವ ಕಾರಣ, ಅವುಗಳನ್ನು ಭದ್ರವಾಗಿರಿಸಲು ಈ ಸಂಪುಟ ನೆರವಾಗುತ್ತದೆ . ದಾಖಲೆಗಳನ್ನು ಹೊತ್ತುಕೊಂಡು ಹೋಗುವುದನ್ನು ತಪ್ಪಿಸಲು 'ಮಹಾ ಡಿಜಿಟಲ್ ಲಾಕರ್' ಸಹಕರಿಸುತ್ತದೆ. ಐಟಿ ಕ್ಷೇತ್ರದಲ್ಲಿ ಇ-ಗವರ್ನೆನ್ಸ್ ಸಂಬಂಧಿಸಿ ಅಭೂತ ಪೂರ್ವ ಕಾರ್ಯ ಮಾಡಿದ್ದಕ್ಕೆ ಕೇಂದ್ರ ಸರ್ಕಾರ ರಾಜ್ಯವನ್ನು ಹೊಗಳಿದ್ದು, ಇ-ಲಾಕರ್‌ಗೂ ಉತ್ತಮ ಪ್ರತಿಕ್ರಿಯೆ ದೊರೆತಿದೆ,
ಆದಾರ್ ಚೀಟಿ, ಇ-ಲಾಕರ್ ಏನಿದು ನಂಟು?: ಇಲಾಕರ್.ಮಹಾರಾಷ್ಟ್ರ.ಗವ್.ಇನ್ (elocker.maharashtra.gov.in) ವೆಬ್ ಸೈಟ್‌ನಲ್ಲಿ ಆಧಾರ್ ಚೀಟಿ ಹೊಂದಿದವರು ಲಾಗ್ ಇನ್ ಆಗಬಹುದಾಗಿದೆ. ಖಾತೆ ತೆರೆಯಲು ಆಧಾರ್ ಸಂಖ್ಯೆ ಬಳಸಬೇಕು. ಮುಖ್ಯ ದಾಖಲಾ ಪತ್ರಗಳ ಸ್ಕ್ಯಾನ್ಡ್ ಪ್ರತಿಗಳನ್ನು ಈ ಖಾತೆಯಲ್ಲಿ ಅಪ್‌ಲೋಡ್ ಮಾಡಿಟ್ಟುಕೊಂಡರೆ ಬೇಕಾದಾಗ ಅವುಗಳನ್ನು ಇತರ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ಬಳಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


