ದೇಶ

ಶಬರಿಮಲೆ ಯಾತ್ರೆ ಆರಂಭ

ಎರಡು ತಿಂಗಳ ಅವಧಿಯ ಶಬರಿಮಲೆ ಅಯ್ಯಪ್ಪ ದೇಗುಲದ...

ಶಬರಿಮಲೆ ಯಾತ್ರೆ ಆರಂಭ
ಶಬರಿಮಲೆ ಅಯ್ಯಪ್ಪ ದೇಗುಲ
Published On :

ಶಬರಿಮಲೆ: ಎರಡು ತಿಂಗಳ ಅವಧಿಯ ಶಬರಿಮಲೆ ಅಯ್ಯಪ್ಪ ದೇಗುಲದ ತೀರ್ಥಯಾತ್ರೆ ಭಾನುವಾರದಿಂದ ಆರಂಭವಾಗಿದೆ. ಸಂಜೆಯ ವೇಳೆಗೆ ದೇಗುಲದ ಬಾಗಿಲು ತೆರೆಯುತ್ತಿದ್ದಂತೆ 18 ಮೆಟ್ಟಿಲುಗಳನ್ನು ಹತ್ತಿ ಬಂದ ಸಾವಿರಾರು ಭಕ್ತಾದಿಗಳು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು.

ಮುಂದಿನ ವರ್ಷಧ ಜನವರಿ 14 ರಂದು ಮಕರ ಜ್ಯೋತಿಯ ದರ್ಶನವಾಗುವುದರ ಜತೆಗೆ ತೀರ್ಥಯಾತ್ರೆ ಮುಕ್ತಾಯವಾಗುತ್ತದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಭಕ್ತರು ಈಗಾಗಲೇ ಆಗಮಿಸುತ್ತಿದ್ದಾರೆ.

ಡಿ.27ರಂದು ಮಂಡಲ ಪೂಜೆಯೊಂದಿಗೆ ಮೊದಲ ಹಂತದ ಯಾತ್ರೆಯ ಅದ್ಧೂರಿಯ ಹಂತ ತಲುಪುತ್ತದೆ.

ದೇಗುಲದ ಅಧಿಕೃತ ವೆಬ್‌ಸೈಟ್  http://www.sabarimala.kerala.gov.in, http://www.sabarimalaq.com  ನಲ್ಲಿಯೂ ದೇವರ ದರ್ಶನಕ್ಕೆ ಕಾಯ್ದಿರಿಸುವ ವ್ಯವಸ್ಥೆ ಇದೆ. ಭದ್ರತೆಗಾಗಿ ಕೇರಳ ಪೊಲೀಸ್ ಇಲಾಖೆ ವಿಶೇಷ ವ್ಯವಸ್ಥೆ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.