ನಮ್ಮ ಗಡಿಯೊಳಗೆ ಚೀನಾ ರಸ್ತೆ ನಿರ್ಮಿಸಿದರೆ 'ಧ್ವಂಸ' ಮಾಡುತ್ತೇವೆ: ರಾಜನಾಥ್

ಕನ್ಹಾ ಚಟ್ಟಿ(ಜಾರ್ಖಂಡ್): ಭಾರತದ ಗಡಿಯೊಳಗೆ ರಸ್ತೆಗಳನ್ನು ನಿರ್ಮಿಸದಂತೆ ಚೀನಾಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೋಮವಾರ ಎಚ್ಚರಿಸಿದ್ದಾರೆ.
ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಭಾರತದ ಸೀಮೆಯೊಳಗೆ ರಸ್ತೆಗಳನ್ನು ನಿರ್ಮಿಸಿದಂತೆ ಚೀನಾಗೆ ಎಚ್ಚರಿಸಿದ್ದು, ಒಂದು ವೇಳೆ ಚೀನಾ ಭಾರತದಲ್ಲಿ ರಸ್ತೆಗಳನ್ನು ನಿರ್ಮಿಸಿದ್ದೆ ಆದರೆ ಅಂತಹ ನಿರ್ಮಾಣ ಕಾಮಗಾರಿಗಳನ್ನು ಧ್ವಂಸ ಮಾಡಲಾಗುವುದು ಎಂಬ ಕಟು ಸಂದೇಶವನ್ನು ರವಾನಿಸಿದ್ದಾರೆ.
ಭಾರತದ ಗಡಿಯೊಳಗೆ ನುಸುಳಿ ಚೀನಾ ಇಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ನಾವು ಚೀನಾದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತೇವೆ. ಅದೇ ರೀತಿ ಚೀನಾ ಸಹ ನಮ್ಮ ಭಾವನೆಗೆ ಬೆಲೆ ಕೊಡಬೇಕಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಇದನ್ನು ಮೀರಿ ಚೀನಾ ರಸ್ತೆ ನಿರ್ಮಿಸುವ ಕಾಮಗಾರಿಯನ್ನು ಮುಂದುವರೆಸಿದರೆ ಅದನ್ನು ನೋಡುತ್ತಾ ನಾವು ಕೈ ಕಟ್ಟಿ ಕೂರುವುದಿಲ್ಲ. ಅಂತಹ ನಿರ್ಮಾಣ ಕಾಮಗಾರಿಗಳನ್ನು ಧ್ವಂಸ ಮಾಡಲಾಗುವುದು. ಅದನ್ನು ಬಿಟ್ಟು ನಮ್ಮಗೆ ಬೇರೆ ದಾರಿಯಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


