ದೇಶ

ರೋಹಿತ್ ಶರ್ಮಾಗೆ ನಗ್ನ ಚಿತ್ರ ಸಮರ್ಪಿಸಿದ ಸೋಫಿಯಾ

ಗುರುವಾರ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ..

ರೋಹಿತ್ ಶರ್ಮಾಗೆ ನಗ್ನ ಚಿತ್ರ ಸಮರ್ಪಿಸಿದ ಸೋಫಿಯಾ
ಸೋಫಿಯಾ ಹಯಾತ್
Published On :

ನವದೆಹಲಿ: ಗುರುವಾರ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ವೈಯಕ್ತಿಕ 264 ರನ್ ಸಿಡಿಸಿದ ಮಹಾರಾಷ್ಟ್ರ ಮೂಲದ 27ರ ರೋಹಿತ್ ಗುರುನಾಥ್ ಶರ್ಮಾಗೆ ಮಾಡೆಲ್ ಸೋಫಿಯಾ ಹಯಾತ್ ತನ್ನ ನಗ್ನ ಚಿತ್ರಗಳನ್ನು ಸಮರ್ಪಿಸಿದ್ದಾರೆ.

ರೋಹಿತ್ ಶರ್ಮಾ ಅವರ ದ್ವಿಶತಕದ ವಿಶ್ವದಾಖಲೆಯಿಂದ ಸಂತುಷ್ಟರಾದ ಬ್ರಿಟನ್ ಮೂಲದ ಮಾಡೆಲ್ ಹಾಗೂ ನಟಿ ಸೋಫಿಯಾ ಹಯಾತ್ ತನ್ನ ನಗ್ನ ಭಾವಚಿತ್ರವನ್ನು ತೆಗೆಸಿಕೊಂಡು ಅದನ್ನು ಟ್ವಿಟರ್ ಮೂಲಕ ಭಾರತೀಯ ಬ್ಯಾಟ್ಸ್‌ಮಾನ್‌ಗೆ ಸಮರ್ಪಿಸಿದ್ದಾರೆ.

ಇದೇ ವೇಳೆ, ರೋಹಿತ್ ಶರ್ಮಾಗೆ ಶುಭಾಶಯ ಹೇಳಿರುವ ಸೋಫಿಯಾ, ನನ್ನ ನಗ್ನ ಚಿತ್ರಗಳನ್ನು ತೆಗೆಸಿಕೊಳ್ಳುವ ಮೂಲಕ ವಿಶ್ವ ದಾಖಲೆ ಮಾಡಿರುವ ರೋಹಿತ್ ಶರ್ಮಾರ ಸಂಭ್ರಮಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಅಭಿಮಾನಿಗಳ ಅಭಿಮಾನ ಕೆಲವೊಮ್ಮೆ ಅತಿರೇಕಕ್ಕೆರುತ್ತದೆ ಎಂಬುದುಕ್ಕೆ ಇದು ಸಾಕ್ಷಿಯಾಗಿದೆ. ಭಾರತೀಯ ಮೂಲದ ಪೂನಂ ಪಾಂಡೆ ಸಹ 2011ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ವಿಶ್ವ ಕಪ್‌ನಲ್ಲಿ ಭಾರತ ಗೆದ್ದರೆ ಸಾರ್ವಜನಿಕವಾಗಿ ಬೆತ್ತಲೆಗೊಳ್ಳುವುದಾಗಿ ಹೇಳಿ ಅಭಿಮಾನಿಗಳಲ್ಲಿ ಬೆಂಕಿಯ ಕಿಡಿ ಹೊತ್ತಿಸಿದ್ದರು. ಆದರೆ ಭಾರತ ವಿಶ್ವ ಕಪ್ ಗೆದ್ದ ನಂತರ ಪೂನಂ ಪಾಂಡೆ ತಮ್ಮ ಹೇಳಿಕೆಯಿಂದ ನುಣುಚಿಕೊಳ್ಳುವ ಮೂಲಕ ಅಭಿಮಾನಿಗಳ ನಿರೀಕ್ಷೆಗೆ ತಣ್ಣೀರು ಎರೆಚಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.