ಕೆಪಿಎಸ್‌ಸಿ ನೇಮಕ: ಸಮಿತಿ ವರದಿ ಪ್ರಕಟಿಸಲು ಆದೇಶ
ಕೆಪಿಎಸ್‌ಸಿದ 1998ನೇ ಸಾಲಿನ ಎ ಮತ್ತು ಬಿ ವೃಂದದ ಪ್ರೊಬೇಷನರಿ ಹುದ್ದೆ...

ಬೆಂಗಳೂರು: ಕೆಪಿಎಸ್‌ಸಿ 1998ನೇ ಸಾಲಿನ ಎ ಮತ್ತು ಬಿ ವೃಂದದ ಪ್ರೊಬೇಷನರಿ ಹುದ್ದೆಗಳಿಗೆ ಸಂಬಂಧಿಸಿದಂತೆ ಸತ್ಯ ಶೋಧನಾ ಸಮಿತಿ ಸಲ್ಲಿಸಿರುವ ವರದಿಯನ್ನು 24 ಗಂಟೆಯೊಳಗೆ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಮಂಗಳವಾರ ಆದೇಶಿಸಿದೆ.
1998, 1999 ಮತ್ತು 2004ರ ಅಕ್ರಮ ನೇಮಕ ಕುರಿತು ಖಲೀಲ್ ಅಹ್ಮದ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾ.ಎನ್.ಕುಮಾರ್ ಮತ್ತು ನ್ಯಾ.ಬಿ.ಮನೋಹರ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ.
1998ನೇ ಸಾಲಿನ ನೇಮಕದ ವೇಳೆ ವ್ಯಕ್ತಿತ್ವ ಪರೀಕ್ಷೆಯ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ 97 ಮಂದಿಯ ಹೆಸರುಗಳು ಹೊಸ ಪಟ್ಟಿಯಲ್ಲಿ ಇರಲಿಲ್ಲ. ಹೊಸ ಪಟ್ಟಿಯಲ್ಲಿ 94 ಮಂದಿಗೆ ಹೊಸದಾಗಿ ಸಂದರ್ಶನ ನಡೆಸಿದ್ದ ಕೆಪಿಎಸ್‌ಸಿ, ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿತ್ತು. ಸೋಮವಾರ ಲಕೋಟೆಯನ್ನು ತೆರೆದ ನ್ಯಾಯಪೀಠ ವರದಿಯನ್ನು ಪರಿಶೀಲಿಸಿತ್ತು.
'ಎ' ಶ್ರೇಣಿಯ ಹುದ್ದೆಗಳಿಗೆ ಆಯ್ಕೆಯಾದವರು 'ಬಿ' ಶ್ರೇಣಿಯ ಹುದ್ದೆಗೆ ಕುಸಿಯಬಹುದು. 'ಬಿ' ಶ್ರೇಣಿ ಹುದ್ದೆಗಳಿಗೆ ಆಯ್ಕೆಯಾದವರು 'ಎ' ಶ್ರೇಣಿಯ ಹುದ್ದೆಗಳಿಗೆ ಹೋಗಬಹುದು. ಇನ್ನು ಕೆಲವರು ಪಟ್ಟಿಯಿಂದಲೇ ಹೊರಗುಳಿಯಬಹುದು. ಅಲ್ಲದೇ ಸಮಾನಾಂತರ ಶ್ರೇಣಿಯ ಸೇವೆಯಲ್ಲಿ ಬದಲಾವಣೆಯಾಗಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


