ಎಚ್‌ಐವಿ ಸೋಂಕಿತನಿಂದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ
ಎಚ್‌ಐವಿ ಪಾಸಿಟೀವ್ ವ್ಯಕ್ತಿಯೊಬ್ಬ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ...

ಮುಂಬೈ: ಎಚ್‌ಐವಿ ಪಾಸಿಟೀವ್ ವ್ಯಕ್ತಿಯೊಬ್ಬ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಎಚ್‌ಐವಿ ಸೋಂಕಿತ ವ್ಯಕ್ತಿ ಸಹೋದರ ಸಂಬಂಧಿಯ ಮಗಳಾದ ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಲು ಮುಂದಾಗಿದ್ದಾನೆ. ಈ ವೇಳೆ ಬಾಲಕಿ ಕಿರುಚಾಡಿದ್ದು, ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಈ ಹಿನ್ನಲೆಯಲ್ಲಿ ಆಕೆಗೆ ಮನಬಂದಂತೆ ಆತ ಥಳಿಸಿದ್ದಾನೆ.
ನವೆಂಬರ್ 2ರಂದು ಅಂಧೇರಿಯಲ್ಲಿ ಘಟನೆ ನಡೆದಿದೆ. ವ್ಯಕ್ತಿಯು ಬಾಲಕಿಗೆ ದೂರದ ಸಂಬಂಧದಿಂದ ಚಿಕ್ಕಪ್ಪನಾಗಬೇಕು. ಆತ 15 ವರ್ಷಗಳಿಂದ ಕುಟುಂಬ ಸದಸ್ಯರಿಗೆ ಬಲ್ಲವನಾಗಿದ್ದು, ನೆರೆ ಮನೆಯವನಾಗಿದ್ದ. ಇತ್ತೀಚೆಗಷ್ಟೇ ಬಾಲಕಿಯ ಪೋಷಕರು ಆತನಿಗೆ ಒಂದು ಕೊಠಡಿ ಬಾಡಿಗೆ ನೀಡಿದ್ದರು. ಆತನ ಬಳಿ ಬಾಡಿಗೆ ಹಣ ತೆಗೆದುಕೊಂಡು ಬರುವಂತೆ ಬಾಲಕಿಯನ್ನು ಕಳುಹಿಸಿದ್ದರು.
ಬಾಡಿಗೆ ಹಣ ಕೇಳಲು ಬಾಲಕಿ ರೂಮಿಗೆ ಬಂದಾಗ, ಕೊಠಡಿಯ ಬಾಗಿಲು ಮುಚ್ಚಿದ್ದ ಎಚ್‌ಐವಿ ಸೋಂಕಿತ ಆಕೆಯ ಮೇಲೆ ಅತ್ಯಾಚಾರವೆಸಗಲು ಮುಂದಾಗಿದ್ದಾನೆ. ಬಾಲಕಿ ಹೆದರಿ ಚೀರಿಕೊಂಡು, ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಬಾಲಕಿ ಚೀರುವುದನ್ನು ಕಂಡು ಆತ ಆಕೆಗೆ ಮನಬಂದಂತೆ ಥಳಿಸಿದ್ದಾನೆ.
ಆಕೆಯೇ ಬಾಗಿಲು ತೆಗೆದು ಮನೆಗೆ ಓಡಿ ಬಂದು ಪೋಷಕರಿಗೆ ನಡೆದ ಘಟನೆಯನ್ನು ತಿಳಿಸಿದ್ದಾಳೆ. ಎಚ್‌ಐವಿ ಸೋಂಕಿತನ ಮೊದಲ ಪತ್ನಿ ಈಗಾಗಲೇ ಎಚ್‌ಐವಿ ಕಾಯಿಲೆಯಿಂದ ಮೃತಪಟ್ಟಿದ್ದಳು.
ಇದರಿಂದ ಗಾಬರಿಯಾದ ಪೋಷಕರು ಕೂಡಲೇ ಆಕೆಯನ್ನು ಆಸ್ಪತ್ರೆಗೆ ತೆಗೆದುಕೊಂಡು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ವೈದ್ಯರು ಸೋಂಕು ವಿರೋಧಿ ಔಷಧಿಯನ್ನು ನೀಡಿದ್ದು, ಸದ್ಯದಲ್ಲೇ ಬಾಲಕಿ ಸೋಂಕಿನಿಂದ ಪಾರಾಗಿದ್ದಾಳೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


