ದೇಶ

ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಿ: ಬಿಜೆಪಿ-ಶಿವಸೇನೆಗೆ ಜೇಟ್ಲಿ ಸಲಹೆ

ಬಿಜೆಪಿ-ಶಿವಸೇನೆ ಸೀಟು ಹಂಚಿಕೆಯ ಕುರಿತಾಗಿ ಮೂಡಿರುವ ಸಮಸ್ಯೆ...

ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಿ: ಬಿಜೆಪಿ-ಶಿವಸೇನೆಗೆ ಜೇಟ್ಲಿ ಸಲಹೆ
ಅರುಣ್ ಜೇಟ್ಲಿ ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಬಿಜೆಪಿ-ಶಿವಸೇನೆ ಸೀಟು ಹಂಚಿಕೆಯ ಕುರಿತಾಗಿ ಮೂಡಿರುವ ಸಮಸ್ಯೆಗಳು ಶೀಘ್ರದಲ್ಲಿಯೇ ಬಗೆಹರಿಯುವುದೆಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಸಚಿವ ಸಂಪುಟ ಸೀಟು ಹಂಚಿಕೆ ವಿಚಾರವಾಗಿ ಬಿಜೆಪಿ-ಶಿವಸೇನೆಯಲ್ಲಿ ಮೂಡಿರುವ ಅಸಮಾಧಾನದ ಕುರಿತಾಗಿ ಪ್ರತಿಕ್ರಿಯಿಸಿರುವ ಅರುಣ್ ಜೇಟ್ಲಿ, ಬಿಜೆಪಿ-ಶಿವಸೇನೆ ಪಕ್ಷಗಳಲ್ಲಿ ಹಲವು ದಿನಗಳಿಂದ ಸಮಸ್ಯೆಗಳು ಉಂಟಾಗಿದ್ದು, ಕೆಲವು ಸಮಸ್ಯೆಗಳನ್ನು ಅವರವರೇ ಇತ್ಯರ್ಥ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ.

ಸೀಟು ಹಂಚಿಕೆ ಹಂಚಿಕೆ ಕುರಿತಾಗಿ ಅಸಮಾಧಾನ ಹೊಂದಿದ್ದ ಶಿವಸೇನೆ, ಭಾನುವಾರ ಸಚಿವ ಸಂಪುಟ ಸಮಾರಂಭದಲ್ಲಿ ಶಿವಸೇನೆಯ ಯಾರೊಬ್ಬ ಮುಖಂಡನೂ ಪಾಲ್ಗೊಳ್ಳದಿರುವಂತೆ ತಿಳಿಸಿತ್ತು. ಎನ್‌ಸಿಪಿಯೊಂದಿಗೆ ನಿಮ್ಮ ಸಂಬಂಧ ತೃಪ್ತಿಕರವಾಗಿಲ್ಲ. ಮಹಾರಾಷ್ಟ್ರದಲ್ಲಿ ನೀವು ಮೈತ್ರಿ ಕುರಿತಂತೆ ಯಾವ ನಿರ್ಧಾರ ಕೈಗೊಳ್ಳುತ್ತೀರಾ? ಎಂಬುದನ್ನು ಮೊದಲು ಸ್ಪಷಪಡಿಸಿ, ಇಲ್ಲದಿದ್ದರೆ ನಮ್ಮ ದಾರಿ ನಮಗೆ, ನಿಮ್ಮ ದಾರಿ ನಿಮಗೆ ಎಂಬ ಎಚ್ಚರಿಕೆಯನ್ನು ಶಿವಸೇನೆ ಬಿಜೆಪಿಗೆ ನೀಡಿತ್ತು.

ಮೂಲಗಳ ಪ್ರಕಾರ ಶಿವಸೇನೆ ಸಚಿವ ಸಂಪುಟ ಹಂಚಿಕೆಗೂ ಮೊದಲೇ ಕ್ಯಾಬಿನೆಟ್ ದರ್ಜೆಯಲ್ಲಿ ತಮ್ಮ ಪಕ್ಷದ ಮುಖಂಡರಿಗೆ 5 ಸ್ಥಾನ, ರಾಜ್ಯ ಸಚಿವ ಸ್ಥಾನದಲ್ಲಿ ಬಿಜೆಪಿಯಂತೆ ಸಮ ಸ್ಥಾನ ಹಾಗೂ ಉಪ ಮುಖ್ಯಮಂತ್ರಿ ಅಥವಾ ಗೃಹ ಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಬೇಡಿಕೆ ಇಟ್ಟಿತ್ತು ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.