ದೇಶ

ಹೋಂವರ್ಕ್ ಮಾಡದ್ದಕ್ಕೆ ಸಾವಿನ ಶಿಕ್ಷೆ

ಒಂದನೇ ತರಗತಿಯಲ್ಲಿ ಓದುತ್ತಿದ್ದ ಆರು ವರ್ಷದ ಜಿತವಾತ್ ಚಂದು ಹೋಂವರ್ಕ್...

ಹೋಂವರ್ಕ್ ಮಾಡದ್ದಕ್ಕೆ ಸಾವಿನ ಶಿಕ್ಷೆ
ತಿರುಮಲಗಿರಿಯ ಅನುಮುಲ ಮಂಡಲದ ಗ್ರೇಟ್‌ವೇ ಶಾಲೆಯ ಚಿತ್ರ.
Published On :

ನಲ್ಗೊಂಡ: ಒಂದನೇ ತರಗತಿಯಲ್ಲಿ ಓದುತ್ತಿದ್ದ ಆರು ವರ್ಷದ ಜಿತವಾತ್ ಚಂದು ಹೋಂವರ್ಕ್ ಮಾಡಿಕೊಂಡು ಬರದಿದ್ದಕ್ಕೆ ತನ್ನ ಶಿಕ್ಷಕಿಯಿಂದ ಹೊದೆ ತಿಂದು ಜೀವವನ್ನೇ ಕಳೆದುಕೊಂಡಿರುವ ಘಟನೆ ಕಳೆದ ಶನಿವಾರ ತಿರುಮಲಗಿರಿಯಲ್ಲಿ ನಡೆದಿದೆ.

ತಿರುಮಲಗಿರಿಯ ಅನುಮುಲ ಮಂಡಲದ ಗ್ರೇಟ್‌ವೇ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದ ಜಿತವಾನ್ ಚಂದುಗೆ ಗಣಿತ ಶಿಕ್ಷಕಿಯಾಗಿದ್ದ ಸಂಗೀತ ಎಂಬುವರು ಹೋಂವರ್ಕ್ ಮಾಡಿಕೊಂಡು ಬರುವಂತೆ ಹೇಳಿದ್ದಾರೆ. ಆದರೆ ಬಾಲಕ ಹೋಂವರ್ಕ್ ಮಾಡಿಕೊಂಡು ಬರದಿದ್ದರಿಂದ ಶಿಕ್ಷಕಿ ಬಾಲಕನಿಗೆ ಚನ್ನಾಗಿ ಥಳಿಸಿದ್ದಾರೆ. ಅಲ್ಲದೆ ಬಾಲಕನ ತಲೆಯನ್ನು ಗೋಡೆಗೆ ಗುದಿದ್ದಾರೆ ಈ ವೇಳೆ ಬಾಲಕ ಪ್ರಜ್ಞೆ ಕಳೆದುಕೊಂಡಿದ್ದಾನೆ.

ಇದರಿಂದ ವಿಚಲಿತಗೊಂಡ ಶಿಕ್ಷಕಿ ಶಾಲೆಯ ಆಡಳಿತ ಮಂಡಳಿಗೆ ತಿಳಿಸಿದ್ದು, ಆಡಳಿತ ಮಂಡಳಿ ಕೂಡಲೇ ವಿದ್ಯಾರ್ಥಿಯ ಪೋಷಕರಿಗೆ ತಮ್ಮ ಮಗ ಪ್ರಜ್ಞೆ ಕಳೆದುಕೊಂಡು ಬಿದ್ದಿರುವುದಾಗಿ ತಿಳಿಸಿದ್ದಾರೆ. ಚಂದು ತಂದೆ ಶಂಕರ್, ತಾಯಿ ಬುಜ್ಜಿ ಕೂಡಲೇ ಶಾಲೆಗೆ ಬಂದಿದ್ದು, ಮಗನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಬಾಲಕನನ್ನು ನರ್ಕೆಟ್‌ಪಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು.

ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಬಾಲಕನನ್ನು ಕೂಡಲೇ ಹೈದರಾಬಾದ್‌ಗೆ ರವಾನಿಸಲು ಮುಂದಾದರು ಆದರೆ ಬಾಲಕ ಮಾರ್ಗಮಧ್ಯೆ ಅಸುನೀಗಿದ್ದ. ಇದರಿಂದ ಉದ್ರಿಕ್ತಗೊಂಡ ಬಾಲಕನ ಪೋಷಕರು ಹಾಗೂ ಸ್ಥಳೀಯರು ಶಾಲೆ ಮೇಲೆ ದಾಳಿ ನಡೆಸಿದ್ದು, ಶಿಕ್ಷಕಿ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.