ಬಿಜೆಪಿ ಜತೆ ಕೈಜೋಡಿಸಲು ಇಷ್ಟವಿಲ್ಲ: ಶಿವಸೇನೆ
ಬಿಜೆಪಿಗೆ ಬೆಂಬಲ ನೀಡಲು ತಮಗೆ ಇಷ್ಟವಿಲ್ಲ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಭಾನುವಾರ ಹೇಳಿದ್ದಾರೆ.
ಮುಂಬೈ: ಬಿಜೆಪಿಗೆ ಬೆಂಬಲ ನೀಡಲು ತಮಗೆ ಇಷ್ಟವಿಲ್ಲ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಭಾನುವಾರ ಹೇಳಿದ್ದಾರೆ.
ಇಂದು ನವದೆಹಲಿಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬಳಿಕ ನಡೆದ ನಾಟಕೀಯ ಬೆಳವಣಿಗೆಗಳನ್ನು ಹಿನ್ನಲೆಯಾಗಿಟ್ಟುಕೊಂಡು ಮುಂಬೈನಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಉದ್ಧವ್ ಠಾಕ್ರೆ ಅವರು, ಬಿಜೆಪಿಗೆ ಬೆಂಬಲ ನೀಡಲು ತಮಗೆ ಇಷ್ಟವಿಲ್ಲ. ಸೈದ್ದಾಂತಿಕವಾಗಿ ಬಿಜೆಪಿ ಮತ್ತು ಶಿವಸೇನೆ ಪಕ್ಷಗಳು ಒಂದೇ ಆಗಿದ್ದು, ಈ ಹಿನ್ನಲೆಯಲ್ಲಿ ಬಿಜೆಪಿಗೆ ಬೆಂಬಲ ನೀಡಲು ಸಿದ್ಧ. ಆದರೆ ಬಿಜೆಪಿ ಪಕ್ಷ ಸಿದ್ದಾಂತವನ್ನು ಬದಿಗಿಟ್ಟು ಎನ್‌ಸಿಪಿ ಪಕ್ಷದ ಬೆಂಬಲ ಪಡೆಯುವುದಾದರೆ ನಾವು ವಿರೋಧ ಪಕ್ಷದಲ್ಲಿ ಕೂರಲು ಸಿದ್ಧರಿದ್ದೇವೆ ಎಂದು ಹೇಳಿದರು.
ಅಂತೆಯೇ ಬಿಜೆಪಿ ಎನ್‌ಸಿಪಿ ಪಕ್ಷದ ಬೆಂಬಲ ಪಡೆಯಲು ಸಿದ್ಧವಿದೇಯೇ ಎಂಬುದನ್ನು ಖಚಿತಪಡಿಸಬೇಕು. ಅವರ ನಿರ್ಧಾರದ ಮೇಲೆ ನಮ್ಮ ತೀರ್ಮಾನ ಅವಲಂಬಿತವಾಗಿದೆ. ತಮಗಂತೂ ಬಿಜೆಪಿಗೆ ಬೆಂಬಲ ನೀಡಲು ಸ್ವಲ್ಪವೂ ಇಷ್ಟವಿಲ್ಲ. ಆದರೆ ಬಿಜೆಪಿ ಪಕ್ಷ ಎನ್‌ಸಿಪಿಯ ಬೆಂಬಲ ಪಡೆಯುತ್ತದೆಯೇ ಎಂದು ಮೊದಲು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.
ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರಕ್ಕೆ ತಾವು ವಿಷಯಾಧಾರಿತ ಬೆಂಬಲ ನೀಡಲು ಸಿದ್ಧ. ಆದರೆ ನಾವು ಮಹಾರಾಷ್ಟ್ರದಲ್ಲಿ ನ್ಯಾಯ ಎತ್ತಿಹಿಡಿದಿದ್ದೇವೆ. ನಮ್ಮ ಸೈದ್ಧಾಂತಿಕ ನಿಲುವುಗಳನ್ನು ಪಕ್ಕಕ್ಕಿಟ್ಟು ರಾಜಕೀಯ ಮಾಡಲು ನಾವು ಸಿದ್ಧರಿಲ್ಲ. ಅಧಿಕಾರವಿಲ್ಲದಿದ್ದರೂ ಪರವಾಗಿಲ್ಲ. ರಾಜ್ಯದ ಜನತೆಯ ಪರವಾಗಿ ಕೆಲಸ ಮಾಡುತ್ತೇವೆ. ರಾಜ್ಯ ವಿಭಜನೆಗೆ ನಮ್ಮ ಪ್ರಾಣ ಹೋದರೂ ನಾವು ಅವಕಾಶ ನೀಡುವುದಿಲ್ಲ. ಹಿಂದೂ ವಿರೋಧಿ ಕೃತ್ಯಗಳಿಗೆ ನಮ್ಮ ವಿರೋಧ ಮೊದಲಿನಿಂದಲೂ ಇದ್ದು, ಮುಂದೆಯೂ ಮುಂದುವರೆಯುತ್ತದೆ. ಪಕ್ಷದ ಮುಖಂಡ ಸುರೇಶ್ ಪ್ರಭು ಅವರು ಪಕ್ಷವನ್ನು ತ್ಯಜಿಸಿದ್ದು, ದುರದೃಷ್ಟಕರ ಸಂಗತಿಯಾಗಿದೆ ಎಂದು ಉದ್ಧವ್ ಹೇಳಿದರು.
ಇನ್ನು ಕೇಂದ್ರದ ವಿಚಾರವಾಗಿ ಮಾತನಾಡಿದ ಉದ್ಧವ್ ಠಾಕ್ರೆ ಅವರು, ಅನಂತ್ ಗೀತೆ ಅವರ ವಿಚಾರದ ಕುರಿತು ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು. ಇನ್ನು ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕರಾಗಿ ಏಕನಾಥ್ ಶಿಂಧೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

