ದೇಶ

ಹಿಗ್ಗಲಿದೆ ಮೋದಿ ಸಂಪುಟ

ಕೇಂದ್ರ ಸಂಪುಟ ವಿಸ್ತರಣೆಗೆ ವೇದಿಕೆಗೆ ಸಿದ್ಧವಾಗಿದೆ. ಪ್ರಧಾನಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭಾನುವಾರ ...

ಹಿಗ್ಗಲಿದೆ ಮೋದಿ ಸಂಪುಟ
ಸಂಸತ್ ಭವನ
Published On :

ನವದೆಹಲಿ:  ಕೇಂದ್ರ ಸಂಪುಟ ವಿಸ್ತರಣೆಗೆ ವೇದಿಕೆಗೆ ಸಿದ್ಧವಾಗಿದೆ. ಪ್ರಧಾನಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭಾನುವಾರ ಮೊದಲ ಬಾರಿಗೆ ಸಂಪುಟ ಪುನಾರಚನೆಯಾಗಲಿದೆ. ಮನೋಹರ್ ಪರಿಕ್ಕರ್‌, ಮುಖ್ತಾರ್ ಅಬ್ಬಾಸ್ ನಖ್ವಿ ಸೇರಿದಂತೆ ಸುಮಾರು 20 ಮಂದಿ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ. ಇದರ  ಜತೆಗೆ ಹುದ್ದೆಗಳ ಬದಲಾವಣೆ ಹಾಗೂ ಕೆಲವು ಸಹಾಯಕ ಸಚಿವರಿಗೆ ಬಡ್ತಿ ಸಿಗುವ ನಿರೀಕ್ಷೆಯೂ ಇದೆ. ಏತನ್ಮಧ್ಯೆ, ಕೆಲವು ಸಚಿವರನ್ನು ಹುದ್ದೆಯಿಂದ ಕೈಬಿಡುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದೂ ಮೂಲಗಳು ತಿಳಿಸಿವೆ


20 ಮಂದಿ ಸಂಪುಟ ಸೇರುವ  ಸಾಧ್ಯತೆ

ರಾಷ್ಟ್ರಪತಿ ಭವನದ ದರ್ಬಾಲ್ ಹಾಲ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮ. 1.30 ಗಂಟೆಗೆ ಸರಿಯಾಗಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಕ್ಕೂ ಮೊದಲು, ಹೊಸ ಮುಖಗಳಿಗೆ ಪ್ರಧಾನಿ ಮೋದಿ ಅವರು ಲಘು ಉಪಹಾರ ವ್ಯವಸ್ಥೆಯನ್ನೂ ಮಾಡಿದ್ದಾರೆ. ಶನಿವಾರ 20 ಹೆಸರುಗಳುಳ್ಳ ಪಟ್ಟಿಯನ್ನು ಸರ್ಕಾರವು ರಾಷ್ಟ್ರಪತಿ ಪ್ರಣಬ್‌ಗೆ ಕಳುಹಿಸಿದೆ ಎನ್ನಲಾಗಿದೆ.

ಸಂಭಾವ್ಯರು

ಮನೋಹರ್ ಪರಿಕ್ಕರ್
ಮುಖ್ತಾರ್ ಅಬ್ಬಾಸ್ ನಖ್ವಿ
ವಿಜಯ್ ಸಂಪ್ಲಾ
ರಾಮ್ ಕೃಪಾಲ್ ಯಾದವ್
ಜೆ.ಪಿ. ನಡ್ಡಾ
ಅಜಯ್ ತಮ್ಟಾ
ಜಯಂತ್ ಸಿನ್ಹಾ
ಬಿರೇಂದರ್ ಸಿಂಗ್
ಗಿರಿರಾಜ್ ಸಿಂಗ್
ಕರ್ನಲ್ ಸೋನಾರಾಂ ಚೌಧರಿ
ಗಜೇಂದ್ರ ಸಿಂಗ್ ಶೇಖಾವತ್
ಹಂಸರಾಜ್ ಅಹಿರ್
ರಮೇಶ್ ಬಾಯ್ಸ್
ಬಾಬುಲ್ ಸುಪ್ರಿಯೋ
ಬಂಡಾರು ದತ್ತಾತ್ರೇಯ
ಸುಜನಾ ಚೌಧರಿ
ನಿರಂಜನ್ ಜ್ಯೋತಿ
ಸನ್ವಾರ್ ಲಾಲ್ ಜಾಟ್
ರಾಜವರ್ಧನ್ ರಾಥೋಡ್

ಇದೇ ವೇಳೆ, ಕೆಲವು ಸಚಿವರನ್ನು ಕೈ ಬಿಡುವ ಹಾಗೂ ಕೆಲವರನ್ನು ಸಂಪುಟ ದರ್ಜೆಗೇರಿಸುವ ಸಾಧ್ಯತೆಯೂ ಇದೆ. ಯೋಜನಾ ಆಯೋಗದ ಬದಲಿಗೆ ಅಸ್ತಿತ್ವಕ್ಕೆ ಬರುವ ಸಂಸ್ಥೆಯ ನೇತೃತ್ವವನ್ನು ಕೇಂದ್ರದ ಮಾಜಿ ಸಚಿವ ಸುರೇಶ್ ಪ್ರಭು ಅವರಿಗೆ ವಹಿಸುವ ಸಾಧ್ಯತೆಯಿದೆ. ರಾಜಸ್ಥಾನ, ಉತ್ತರಾಖಂಡ, ಹಿಮಾಚಲ ಪ್ರದೇಶದಂತಹ ರಾಜ್ಯಗಳು ಕೇಂದ್ರದಲ್ಲಿ ಪ್ರಾತಿನಿಧ್ಯ ಪಡೆಯುನ ನಿರೀಕ್ಷೆಯಲ್ಲಿವೆ. ಇಂತಹ ಆಕಾಂಕ್ಷೆಯಲ್ಲಿರುವ ಒಬ್ಬರೆಂದರೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅನುರಾಗ್ ಠಾಕೂರ್. ಈ ನಡುವೆ, ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ಶನಿವಾರ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. ಸದ್ಯ ಅರುಣ್ ಜೇಟ್ಲಿ  ಕೈಯಲ್ಲಿರುವ ರಕ್ಷಣಾ ಸಚಿವರ ಸ್ಥಾನ ಪರಿಕ್ಕರ್ ಮಡಿಲಿಗೆ ಬೀಳುವುದು ಬಹುತೇಕ ಖಚಿತವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.