ಅಸ್ಸಿಘಾಟ್ನಲ್ಲಿ ಸ್ವಚ್ಛತಾ ಅಭಿಯಾನ ಕೈಗೊಂಡ ಪ್ರಧಾನಿ ಮೋದಿ
ವಾರಾಣಾಸಿಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಅವರು ಶನಿವಾರ...

ವಾರಾಣಾಸಿ: ವಾರಾಣಾಸಿಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಅವರು ಶನಿವಾರ ಅಸ್ಸಿಘಾಟ್ನಲ್ಲಿ ಸ್ವತಃ ಸ್ವಚ್ಛತಾ ಅಭಿಯಾನ ಕೈಗೊಂಡರು.
ಸ್ವಚ್ಛ ಭಾರತ ಅಭಿಯಾನ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಒಂಭತ್ತು ಹೆಸರುಗಳನ್ನು ನಾಮಕರಣ ಮಾಡಿದ್ದಾರೆ.
ಇಂದು ಅಸ್ಸಿ ಘಾಟ್ಗೆ ಭೇಟಿ ನೀಡಿದ ಮೋದಿ, ಮೊದಲಿಗೆ ಗಂಗಾ ನದಿಗೆ ಪ್ರಾರ್ಥನೆ ಸಲ್ಲಿಸಿ, ತದ ನಂತರ ಬಿಜೆಪಿ ಮುಖಂಡರೊಂದಿಗೆ ಸೇರಿ ಸುತ್ತಮುತ್ತಲಿರುವ ಕಸವನ್ನು ತೆಗೆದು ಸ್ವಚ್ಛಗೊಳಿಸಿದರು.
ದೇಶವನ್ನು ನಿರ್ಮಲ ಭಾರತವನ್ನಾಗಿ ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡಿರುವ ಸ್ವಚ್ಛ ಭಾರತ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದರೆ, ಮತ್ತೊಂದು ಕಡೆ ಮೋದಿ ಅವರನ್ನು ಮೆಚ್ಚಿಸುವುದಕ್ಕೆ ಅಭಿಯಾನದ ಹೆಸರಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವವರು ಹೆಚ್ಚಿದ್ದಾರೆ.
ಆದರೆ, ಇಂತಹವರಿಗೆ ಪಾಠ ಕಲಿಸಲೆಂದೇ ಮೋದಿ ಅವರು ತಾವೇ ಸ್ವತಃ ಸ್ವಚ್ಛತೆ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದಾರೆ.
ಗಂಗಾ ನದಿಯ ತೀರದಲ್ಲಿರುವ ಕಸವನ್ನು ತೆಗೆದುಹಾಕಿದ ಮೋದಿ, ಜನರಿಂದ ಸ್ವಚ್ಛತಾ ಕಾರ್ಯಕ್ರಮಕ್ಕೆ ಉತ್ತಮ ಬೆಂಬಲ ದೊರೆಯುತ್ತಿದೆ. ಇಂತಹ ಬೆಂಬಲ ಉತ್ತರಪ್ರದೇಶದ ಜನತೆಯಿಂದಲೂ ನಾನು ನಿರೀಕ್ಷಿಸುತ್ತೇನೆ ಎಂದು ಹೇಳಿದ್ದಾರೆ.
ಅಖಿಲೇಶ್ ಯಾದವ್, ಭೋಜ್ಪುರಿ ನಟ ಮನೋಜ್ ತಿವಾರಿ, ಸುಫಿ ಗಾಯ ಕೈಲಾಶ್ ಖೇರ್, ಹಾಸ್ಯನಟ ರಾಜು ಶ್ರೀವತ್ಸವ್, ಕ್ರಿಕೆಟಿಗರಾದ ಮೊಹದ್ ಕೈಫ್ ಮತ್ತು ಸುರೇಶ್ ರೈನಾ, ಸೇರಿದಂತೆ 9 ಮಂದಿಯನ್ನು ನಾಮಿನೇಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


