ಪ್ರೇಮಕ್ಕೆ ಆಕ್ಷೇಪ: ತಾಯಿ ಕಾರ್ಯದಿಂದ ಬಿಲಾವಲ್ ದೂರ
ಪಾಕಿಸ್ತಾನದ ಮಾಜಿ ಸಚಿವೆ ಹಿನಾ...

ಲಾಹೋರ್/ಕರಾಚಿ: ಪಾಕಿಸ್ತಾನದ ಮಾಜಿ ಸಚಿವೆ ಹಿನಾ ರಬ್ಬಾನಿ ಖಾರ್ ಜತೆಗೆ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷ ಬಿಲಾವಲ್ ಭುಟ್ಟೋರ ಲವ್ವಿ ಡವ್ವಿ ಈಗ ಅವರ ಕುಟುಂಬದಲ್ಲೇ ಬಿರುಕು ಸೃಷ್ಟಿಸಿದೆ. ಅವರಿಬ್ಬರ ನಡುವಿನ ಪ್ರೇಮ ಪ್ರಕರಣ ಪಾಕಿಸ್ತಾನದಾದ್ಯಂತ ಈಗಾಗಲೇ 'ಬಹಿರಂಗ ರಹಸ್ಯ' ಆದರೆ ಈ ಬಾರಿ ಅದು ವಿಕೋಪಕ್ಕೆ ಹೋಗಿದೆ.
2007ರಲ್ಲಿ ಬಾಂಬ್ ಸ್ಫೋಟದಲ್ಲಿ ನಿಧನ ಹೊಂದಿದ ಮಾಜಿ ಪ್ರಧಾನಿ, ತಾಯಿ ಬೆನಜೀರ್ ಭುಟ್ಟೋ ಅವರ ವಾರ್ಷಿಕ ಪುಣ್ಯತಿಥಿಗೂ ಬಿಲಾವಲ್ ಗೈರು ಹಾಜರಾಗಿದ್ದಾರೆ. ಖಾರ್ ಜತೆಗಿನ ಪ್ರೇಮಕ್ಕೆ ತಂದೆ ಆಸಿಫ್ ಅಲಿ ಜರ್ದಾರಿ ಆಕ್ಷೇಪಿಸಿದ್ದೇ ಕಾರಣ ಎಂದು ಹೇಳಲಾಗಿದೆ.
ತೀವ್ರ ಮುಜುಗರಕ್ಕೆ ಒಳಗಾಗಿರುವ ಝರ್ದಾರಿ ಲಂಡನ್‌ಗೆ ತೆರಳಿ ಮಗನನ್ನು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದರು. ಆದರೆ ಆ ಪ್ರಯತ್ನ ಯಶಸ್ವಿಯಾಗದೆ ಜರ್ದಾರಿ ಇಸ್ಲಾಮಾಬಾದ್‌ಗೆ ಮರಳಿದ್ದರು. ಇದೇ ಮೊದಲ ಬಾರಿಗೆ ಬಿಲಾವಲ್ ಭುಟ್ಟೋ ತಾಯಿ ಬೆನಜೀರ್ ಭುಟ್ಟೋರ ವಾರ್ಷಿಕ ಪುಣ್ಯ ತಿಥಿಯಿಂದ ದೂರವುಳಿದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


