ದೇಶ

ಬೋಡೋ ಉಗ್ರರ ದಮನಕ್ಕೆ ಭೂತಾನ್ ನೆರವು ಕೇಳಿದ ಭಾರತ

: ಅಸ್ಸಾಂನ 3 ಜಿಲ್ಲೆಗಳಲ್ಲಿ ಸರಣಿ ಸ್ಪೋಟ ನಡೆಸಿ 78 ಮಂದಿಯ ಸಾವಿಗೆ ಕಾರಣರಾದ...

ಬೋಡೋ ಉಗ್ರರ ದಮನಕ್ಕೆ ಭೂತಾನ್ ನೆರವು ಕೇಳಿದ ಭಾರತ
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
Published On :

ನವದೆಹಲಿ: ಅಸ್ಸಾಂನ 3 ಜಿಲ್ಲೆಗಳಲ್ಲಿ ಸರಣಿ ಸ್ಪೋಟ ನಡೆಸಿ 78 ಮಂದಿಯ ಸಾವಿಗೆ ಕಾರಣರಾದ ಬೋಡೋ ಉಗ್ರರ ದಮನಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ನೆರಯ ಭೂತಾನ್‌ನ ನೆರವು ಕೇಳಿದೆ.

11 ವರ್ಷಗಳ ಹಿಂದೆ ಉಲ್ಫಾ ಉಗ್ರರ ವಿರುದ್ಧ ನಡೆಸಿದ್ದಂಥ ಕಾರ್ಯಾಚರಣೆ ಈಗಲೂ ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಉಲ್ಫಾ ಉಗ್ರರ ಸದೆಬಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭೂತಾನ್ ದೇಶದ ನೆರವು ಪಡೆಯುವ ಸಲುವಾಗಿ ಈಗಾಗಲೇ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಭೂತಾನ್ ಪ್ರಧಾನಮಂತ್ರಿ ಟಿಶೆರಿಂಗ್ ಟೋಬ್ಗಾಯ್‌ರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಬೋಡೋ ಉಗ್ರರ ಸಂಹಾರ ಕುರಿತಂತೆ ಸುಷ್ಮಾ ಸ್ವರಾಜ್ ಅವರು ಭೂತಾನ್ ಪ್ರಧಾನಮಂತ್ರಿಯೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಿದ್ದು, ಬೆಂಬಲ ದೊರೆಯುವುದು ಬಹುತೇಕ ಖಚಿತವಾಗಿದೆ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಸೈಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ.

ಉಗ್ರರ ದಾಳಿಗೆ ತುತ್ತಾದ ಮೂರು ಜಿಲ್ಲೆಗಳಿಗೆ ಗುರುವಾರ ಭೇಟಿ ನೀಡಿದ ರಾಜನಾಥ್‌ಸಿಂಗ್ ಅಲ್ಲಿನ ಪರಿಸ್ಥಿತಿ ಅವಲೋಕಿಸಿ, ಎನ್‌ಡಿಎಲ್‌ಬಿ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಭಾರತ-ಭೂತಾನ್ ಗಡಿಯಲ್ಲಿ ತಮ್ಮ ನೆಲೆಗಳನ್ನು ಸ್ಥಾಪಿಸುವಲ್ಲಿ ಬೋಡೋ ಉಗ್ರರು ಯಶಸ್ವಿಯಾಗಿದ್ದು, ನಿಷೇಧಿತ ಬೋಡೋ ಉಗ್ರ ಸಂಘಟನೆಯನ್ನು ದಮನ ಮಾಡಲು ಭೂತಾನ್‌ನ ನೆರವು ಕೋರುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ರಾಜ್‌ನಾಥ್‌ಸಿಂಗ್ ಸೂಚಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.