ದೇಶ

ಬೋಡೋ ದಮನಕ್ಕೆ ನೆರೆರಾಷ್ಟ್ರದ ನೆರವು: ರಾಜನಾಥ್ ಚಿಂತನೆ

ಉಗ್ರರ ದಾಳಿಗೆ ತುತ್ತಾದ ಮೂರು ಜಿಲ್ಲೆಗಳಿಗೆ ಭೇಟಿ ನೀಡಿದ ರಾಜನಾಥ್ ಸಿಂಗ್...

ಬೋಡೋ ದಮನಕ್ಕೆ ನೆರೆರಾಷ್ಟ್ರದ ನೆರವು: ರಾಜನಾಥ್ ಚಿಂತನೆ
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್
Published On :

ಸೋನಿತ್‌ಪುರ: ಅಸ್ಸಾಂನ 3 ಜಿಲ್ಲೆಗಳಲ್ಲಿ ಸರಣಿ ಗುಂಡಿನ ದಾಳಿ ನಡೆಸಿ 78 ಮಂದಿಯ ಸಾವಿಗೆ ಕಾರಣರಾದ ಬೋಡೋ ಉಗ್ರರನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಭೂತಾನ್‌ನ ನೆರವು ಪಡೆಯಲಿದೆ. ಜತೆಗೆ ಘಟನೆಯ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆ(ಎನ್‌ಐಎ)ಗೆ ವಹಿಸಲಿದೆ.

ಹೀಗೆಂದು ಸ್ವತಃ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಉಗ್ರರ ದಾಳಿಗೆ ತುತ್ತಾದ ಮೂರು ಜಿಲ್ಲೆಗಳಿಗೆ ಗುರುವಾರ ಭೇಟಿ ನೀಡಿದ ರಾಜನಾಥ್ ಸಿಂಗ್ ಅಲ್ಲಿನ ಪರಿಸ್ಥಿತಿ ಅವಲೇಕಿಸಿದರು. ಎನ್‌ಡಿಎಫ್‌ಬಿ(ಎಸ್) ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನೂ ನೀಡಿದರು.

ಭೂತಾನ್ ನೆರವು: ನಿಷೇಧಿತ ಬೋಡೋ ಉಗ್ರ ಸಂಘಟನೆಯನ್ನು ಸದೆಬಡಿಯಲು ಭೂತಾನ್‌ನ ನೆರವು ಕೋರುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ಗೆ ಮನವಿ ಮಾಡಿದ್ದೇನೆ. ಭಾರತ-ಭೂತಾನ್ ಗಡಿಯಲ್ಲಿ ನೆಲೆಗಳನ್ನು ಸ್ಥಾಪಿಸುವಲ್ಲಿ ಬೋಡೋ ಉಗ್ರರು ಯಶಸ್ವಿಯಾಗಿದ್ದಾರೆ.

2003-04ರಲ್ಲಿ ಉಲ್ಫಾ ಉಗ್ರರ ಅಟ್ಟಹಾಸ ಜೋರಾಗಿದ್ದ ಸಮಯದಲ್ಲಿ ಭೂತಾನ್ ಸರ್ಕಾರವು ಯಶಸ್ವಿ ಕಾರ್ಯಾಚರಣೆ ನಡೆಸಿ ಉಗ್ರರನ್ನು ನಾಶ ಮಾಡಿತ್ತು. ಹೀಗಾಗಿ ಬೋಡೋ ಉಗ್ರರನ್ನು ಹತ್ತಿಕ್ಕಲು ಆ ದೇಶದ ಸಲಹೆ ಪಡೆಯಲಾಗುವುದು ಎಂದಿದ್ದಾರೆ ಸಿಂಗ್.

ಇದೇ ವೇಳೆ, ಉಗ್ರ ದಾಳಿಗೆ ಹೆದರಿ ಅಸ್ಸಾಂನಿಂದ ಗುಳೇ ಹೋಗುತ್ತಿರುವ ಜನರಿಗಾಗಿ ಪಶ್ಚಿಮ ಬಂಗಾಳದ ಅಲಿಪುರ್‌ದ್ವಾರ್ ಜಿಲ್ಲೆಯಲ್ಲಿ ಮೂರು ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಈ ನಡುವೆ, ಗುರುವಾರ ಆದಿವಾಸಿಗಳ ಗುಂಪೊಂದು ಮಾಲ್ಡಾ-ಕಟಿಹಾರ್ ರೈಲು ಹಳಿಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಉಗ್ರರ ಬೇಟೆಗೆ ಕಾಪ್ಟರ್: ಬೋಡೋ ಉಗ್ರರ ಬೇಟೆಗೆ ಕಾಪ್ಟರ್ ಬಳಸಲು ಸೇನೆ ನಿರ್ಧರಿಸಿದೆ. ಈ ಉಗ್ರರು ನೆರೆಯ ಭೂತಾನ್‌ಗೆ ಪಲಾಯನ ಮಾಡುವ ಆತಂಕ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಅನೇಕ ಕಾಪ್ಟರ್‌ಗಳು ಉಗ್ರರಿಗಾಗಿ ದಟ್ಟಡವಿ ಮೇಲೆ ಹಾರಾಟ ನಡೆಸುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.