ಬಾಳಾಠಾಕ್ರೆಗೂ ಭಾರತರತ್ನ ನೀಡಿ: ಶಿವಸೇನೆ

ಮುಂಬೈ: ಶಿವಸೇನೆ ಸಂಸ್ಥಾಪಕ ದಿವಂಗತ ಬಾಳಾಠಾಕ್ರೆ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತರತ್ನ ಗೌರವ ನೀಡಬೇಕೆಂದು ಶಿವಸೇನೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ದಿ. ಪಂಡಿತ್ ಮದನ್ ಮೋಹನ್ ಮಾಳವೀಯಾ ಅವರಿಗೆ ಭಾರತರತ್ನ ಪುರಸ್ಕಾರ ಪ್ರಕಟವಾದ ಬೆನ್ನಲ್ಲೇ ಬಾಳಾಠಾಕ್ರೆ ಭಾರತರತ್ನ ನೀಡಬೇಕೆಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದೆ.
ವಾಜಪೇಯಿ ಅವರಿಗೆ ಪುರಸ್ಕಾರ ಸಂದಿರುವುದು ಅತ್ಯಂತ ಸಂತಸದ ಸಂಗತಿ. ಅಂತೆಯೇ ಠಾಕ್ರೆ ಅವರೂ ಭಾರತರತ್ನ ಪುರಸ್ಕಾರಕ್ಕೆ ಅರ್ಹರು. ಬಾಳಾಠಾಕ್ರೆ ಬಡವರ ಪಾಲಿನ ದನಿಯಾಗಿದ್ದರು.
ಬಡವರ ಶ್ರೇಯೋಭಿವೃದ್ಧಿಗಾಗಿ ಅವರಿತ ಶ್ರಮವಹಿಸಿದ ಅವರಿಗೆ ಭಾರತರತ್ನ ನೀಡದರೆ ಬಡವರಿಗೆ ನ್ಯಾಯ ದೊರೆತಂತೆ ಎಂದು ಶಿವಸೇನೆ ಮುಖಂಡ ಮನೋಹರ್ ಜೋಶಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


