ಕೆಎಫ್‌ಸಿ, ಮೆಕ್‌ಡೊನಾಲ್ಡ್ ಮೇಲೆ ಮಾವೋವಾದಿಗಳ ದಾಳಿ
ಕೇರಳದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಮಾವೋವಾದಿಗಳು ಸೋಮವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ...

ಪಲಕ್ಕಡ್: ಕೇರಳದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಮಾವೋವಾದಿಗಳು ಸೋಮವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾವೋವಾದಿಗಳ ಗುಂಪೊಂದು ಸೋಮವಾರ ಬೆಳಗ್ಗೆ ಕೇರಳದ ಪಲಕ್ಕಡ್ ಜಿಲ್ಲೆಯ ಅಟ್ಟಪ್ಪಡಿ ಪ್ರದೇಶದಲ್ಲಿರುವ ಮೆಕ್‌ಡೊನಾಲ್ಡ್ ಮತ್ತು ಕೆಎಫ್‌ಸಿ ರೆಸ್ಟೋರೆಂಟ್ ಮೇಲೆ ಹಾಗೂ ವೆಲ್ಲಮುಂಡಾ ವಯನಾಡಿನಲ್ಲಿರುವ ಅರಣ್ಯ ಹೊರ ಠಾಣೆಯ ಮೇಲೆ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.
ಕೊಯಂಬತ್ತೂರ್ ರಾಷ್ಟ್ರೀಯ ಹೆದ್ದಾರಿಯ ಅಟ್ಟಪ್ಪಡಿ ಎಂಬ ಪ್ರದೇಶದಲ್ಲಿರುವ ಕೆಎಫ್‌ಸಿ ಮತ್ತು ಮೆಕ್‌ಡೋನಾಲ್ಡ್ ರೆಸ್ಟೋರೆಂಟ್‌ಗಳ ಮೇಲೆ ಮಾವೋವಾದಿಗಳು ದಾಳಿ ನಡೆಸಿದ್ದು, ಸ್ಥಳದಲ್ಲಿ ಅಮೆರಿಕ ವಿರುದ್ಧದ ಕರಪತ್ರ ಮತ್ತು ಸಶಸ್ತ್ರ ಕ್ರಾಂತಿಗೆ ಕರೆ ನೀಡುವಂತಹ ಪೋಸ್ಟರ್‌ಗಳು ಪತ್ತೆಯಾಗಿವೆ.
ಮತ್ತೊಂದು ಕಡೆ 19 ಜನರನ್ನೊಳಗೊಂಡ ಮಾವೋವಾದಿಗಳ ಗುಂಪೊಂದು ಅರಣ್ಯ ಹೊರಠಾಣೆಯ ಮೇಲೆ ದಾಳಿ ನಡೆಸಿದ್ದು, ಅರಣ್ಯ ಇಲಾಖೆಯ ಜೀಪಿಗೆ ಬೆಂಕಿ ಹಚ್ಚಿ, ಕಚೇರಿಯಲ್ಲಿರುವ ಪಿಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ.
ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸುವ ಮುನ್ನ ಮಾವೋವಾದಿಗಳು ಪರಾರಿಯಾಗಿದ್ದು, ಪೊಲೀಸರ ವಾಕಿ ಟಾಕಿ, ಕ್ಯಾಮೆರಾ ಮತ್ತು ಇತರೆ ಬೆಲೆ ಬಾಳುವಂತಹ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೇ ಸ್ಥಳದಲ್ಲಿ ಮಾವೋವಾದಿಗಳನ್ನು ಪ್ರಚೋದಿಸುವಂತಹ ಪೋಸ್ಟ್‌ರ್‌ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯರ ಹೇಳಿಕೆಯ ಪ್ರಕಾರ, ಪೂರ್ಣ ಶಸ್ತ್ರಾಸ್ತ್ರಗಳೊಂದಿಗೆ ಮಾವೋವಾದಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


