ದೇಶ

ವಾಜಪೇಯಿಯಂಥ ದೇಶಭಕ್ತ ಭಾರತ ರತ್ನಕ್ಕೆ ಅರ್ಹ: ಆಡ್ವಾಣಿ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ದೇಶದ ಅತ್ಯುತ್ನತ ಗೌರವವಾದ ಭಾರತ ರತ್ನ ನೀಡಬೇಕೆನ್ನುವ ...

ವಾಜಪೇಯಿಯಂಥ ದೇಶಭಕ್ತ ಭಾರತ ರತ್ನಕ್ಕೆ ಅರ್ಹ: ಆಡ್ವಾಣಿ
ಎಲ್.ಕೆ ಆಡ್ವಾಣಿ
Published On :

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ದೇಶದ ಅತ್ಯುತ್ನತ ಗೌರವವಾದ ಭಾರತ ರತ್ನ ನೀಡಬೇಕೆನ್ನುವ ಆಗ್ರಹಕ್ಕೆ ಪಕ್ಷದ ಹಿರಿಯ ಮುಖಂಡ ಎಲ್.ಕೆ ಆಡ್ವಾಣಿ ಅವರ ಬೆಂಬಲವೂ ಸಿಕ್ಕಿದೆ. ಭಾರತ ರತ್ನವನ್ನು ಅವರ ಕರ್ತವ್ಯಕ್ಕೆ ನೀಡಿದ ಪುರಸ್ಕಾರ ಎಂದು ಭಾವಿಸಿ ನೀಡಬಾರದು ಬದಲಾಗಿ ವಾಜಪೇಯಿ ವ್ಯಕ್ತಿತ್ವವನ್ನು ಗೌರವಿಸುವ ಪ್ರಶಸ್ತಿಯ ರೂಪದಲ್ಲಿ ನೀಡಬೇಕು. ವಾಜಪೇಯಿಯಂಥ ದೇಶಭಕ್ತರು ಭಾರತ ರತ್ನಕ್ಕೆ ಅರ್ಹರಾಗಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಆಡ್ವಾಣಿ ಅಭಿಪ್ರಾಯ ಪಟ್ಟಿದ್ದಾರೆ,

ಸಾಧ್ಯತೆ ಇಲ್ಲದಿಲ್ಲ: ದೇಶದಲ್ಲಿ ಮತ್ತೊಮ್ಮೆ ಸಮ್ಮಿಶ್ರ ರಾಜಕೀಯ  ವಾಪಸಾದರೂ ಆಗಬಹುದು ಎಂದು ಆಡ್ವಾಣಿ ಹೇಳಿದ್ದಾರೆ. ಭಾರತದಂಥ ವೈವಿಧ್ಯ ದೇಶದಲ್ಲಿ ಈ ರೀತಿಯ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಹಾಗಾಗಿ ನಮ್ಮ ದೇಶದಲ್ಲಿ ಎಲ್ಲ ರೀತಿಯ ಪರಿಸ್ಥಿತಿಗೂ ನಾವು ಸಿದ್ಧವಾಗಿರಬೇಕು ಎಂದು ಅವರು ಹೇಳಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ನರೇಂದ್ರ ಮೋದಿ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸ್ವಂತ ಬಲದಿಂದ ಅಧಿಕಾರಕ್ಕೇರಿದ್ದರೂ ಆಡ್ವಾಣಿ ಈ  ರೀತಿ ಹೇಳಿಕೆ ನೀಡಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.