ಸುಬ್ರಹ್ಮಣ್ಯನ್ ಸ್ವಾಮಿ ಅಸಲಿ ಖಾತೆ ಡಿಲೀಟ್ ಮಾಡಿದ ಫೇಸ್‌ಬುಕ್!
ಬಿಜಿಪಿ ನಾಯಕ ಡಾ.ಸುಬ್ರಹ್ಮಣ್ಯನ್ ಸ್ವಾಮಿ...

ನವದೆಹಲಿ: ಬಿಜಿಪಿ ನಾಯಕ ಡಾ.ಸುಬ್ರಹ್ಮಣ್ಯನ್ ಸ್ವಾಮಿ ಅಸಲಿ ಖಾತೆ ಯಾವುದು? ನಕಲಿ ಖಾತೆ ಯಾವುದು ಎನ್ನುವ ಗೊಂದಲಕ್ಕೆ ಬಿದ್ದು ಫೇಸ್‌ಬುಕ್ ದೊಡ್ಡದೊಂದು ಎಡವಟ್ಟು ಮಾಡಿದೆ. ಸುಬ್ರಹ್ಮಣ್ಯನ್ ಸ್ವಾಮಿ ಅವರ ನಕಲಿ ಖಾತೆ ಬದಲು ಅಸಲಿ ಖಾತೆಯನ್ನೇ ಡಿಲೀಟ್ ಮಾಡಿದೆ!
ಫೇಸ್‌ಬುಕ್‌ನಲ್ಲಿ ಸುಬ್ರಹ್ಮಣಿಯಂ(ಸುಬ್ರಹ್ಮಣಿಯನ್ ಅಲ್ಲ) ಸ್ವಾಮಿ ಹೆಸರಿನಲ್ಲೊಂದು ಖಾತೆ ಇದೆ. ಸುಬ್ರಹ್ಮಣಿಯನ್ ಸ್ವಾಮಿ ಫೋಟೋ ಇರುವ ಈ ಖಾತೆ ಮೂಲಕ ಅನೇಕ ಜೋಕ್‌ಗಳನ್ನು ಶೇರ್ ಮಾಡಲಾಗುತ್ತಿತ್ತು. ತಮಾಷೆಯ ವಿಚಾರವೆಂದರೆ ಇದು ಸುಬ್ರಹ್ಮಣಿಯನ್ ಸ್ವಾಮಿ ಅವರದ್ದೇ ಖಾತೆ ಅಂದುಕೊಂಡು ಬಹುತೇಕ ರಾಜಕಾರಣಿಗಳು ಇದನ್ನು ಫಾಲೋ ಮಾಡುತ್ತಿದ್ದಾರೆ.
ಈ ಖಾತೆ ನಕಲಿ ಎಂದು ಅರಿವಾಗುತ್ತಿದ್ದಂತೆ ಫೇಸ್‌ಬುಕ್ ಇದನ್ನು ಡಿಲೀಟ್ ಮಾಡಲು ನಿರ್ಧರಿಸಿತ್ತು. ಈ ವೇಲೆ ಸಣ್ಣ ತಪ್ಪಿನಿಂದಾಗಿ ಸುಬ್ರಹ್ಮಣ್ಯನ್ ಸ್ವಾಮಿ ಅವರ ಅಸಲಿ ಖಾತೆಯನ್ನೇ ಕಂಪನಿ ಡಿಲೀಟ್ ಮಾಡಿಬಿಟ್ಟಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸ್ವಾಮಿ ಫೇಸ್‌ಬುಕ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


